February 16, 2026

ನವೋದಯ ಯುವಕ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ನಾಟಕ ಪ್ರದರ್ಶನ

ಜೂಡಿ ನ್ಯೂಸ್ :

ನಿಸ್ವಾರ್ಥ ಸೇವೆಗೆ ಯುವಕರಿಗೆ ಕರೆ – ಬುಡ್ಡಿ ಬಸವರಾಜ್

ಹಂಪಾಪಟ್ಟಣ ಗ್ರಾಮದ ಜೈ ಹನುಮ ಬಯಲು ರಂಗಮಂದಿರದಲ್ಲಿ ಭಾನುವಾರ ರಾತ್ರಿ 8.00 ಗಂಟೆಗೆ ನವೋದಯ ಯುವಕ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿಂದುಳಿದ ಜಾತಿ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಬುಡ್ಡಿ ಬಸವರಾಜ್ ಅವರು, ಸೇವೆ ಎಂದರೆ ನಿಸ್ವಾರ್ಥ ಸೇವೆಯಾಗಿರಬೇಕು. ಯುವಕರು ಉತ್ತಮ ಗುಣಗಳನ್ನು ಬೆಳೆಸಿಕೊಂಡು ತಮ್ಮ ದುಡಿಮೆಯ ಒಂದು ಭಾಗವನ್ನು ಸಮಾಜ ಸೇವೆಗೆ ಮೀಸಲಿಡಬೇಕು ಎಂದು ಕರೆ ನೀಡಿದರು. ಹಂಪಾಪಟ್ಟಣದ ಸಮೀಪ ಕಾರ್ಖಾನೆ ಸ್ಥಾಪನೆ ಆಗುತ್ತಿರುವ ಹಿನ್ನಲೆಯಲ್ಲಿ ಗ್ರಾಮದ ಜನರ ಸುರಕ್ಷತೆ ಹಾಗೂ ಅಭಿವೃದ್ಧಿಯ ಕಡೆ ಯುವಕರು ವಿಶೇಷ ಗಮನ ಹರಿಸಬೇಕು ಎಂದರು. ಜೊತೆಗೆ ಯುವಕರು ಯಾವುದೇ ರಾಜಕೀಯ ಉದ್ದೇಶದಿಂದ ಸಂಘಗಳಿಗೆ ಸೇರಬಾರದು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವಗಳನ್ನು ಪಾಲಿಸಿ ನೊಂದವರ ಪರ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಬಿ. ಕುಬೇರ ಅವರು, ಯುವಕರು ಸಂಘಟಿತವಾಗಿ ಕಾರ್ಯನಿರ್ವಹಿಸಿ ಸಂಘವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಬೇಕು ಎಂದು ಹೇಳಿದರು.

ಎನ್. ನಾಗರಾಜ್ ಅವರು ಮಾತನಾಡಿ, ನವೋದಯ ಯುವಕ ಸಂಘವು ಕಳೆದ 44 ವರ್ಷಗಳಿಂದ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರಿಗೆ ಪದಗ್ರಹಣ ನೆರವೇರಿಸಲಾಯಿತು. ಕಾಳಿಂಗರಾಯ ತಂಡದ ಮಹಿಳಾ ಕಲಾವಿದರಿಗೆ ಸನ್ಮಾನ ಮಾಡಲಾಯಿತು. ಜೊತೆಗೆ ನೂತನ ಎಸ್‌ಟಿಎಂಸಿ ಅಧ್ಯಕ್ಷರು ಹಾಗೂ ವಿಎಸ್ಎಸ್ಎನ್ ಅಧ್ಯಕ್ಷರಿಗೆ ಗೌರವ ಸಲ್ಲಿಸಲಾಯಿತು. ನಂತರ. ಶ್ರೀ ಕುಮಾರೇಶ್ವರ ಕೃಪೋಷಿತ. ಪಂಡಿತ ಶ್ರೀ ಪಂಚಾಕ್ಷರ ಗವಾಯಿಗಳ ನಾಟ್ಯ ಸಂಘ ಗದಗ ರಿ. ಇವರಿಂದ ಫುಲ್ ಕಾಮಿಡಿ ನಾಟಕ. ಅಕ್ಕ ಅಂಗಾರ ತಂಗಿ ಬಂಗಾರ ನಾಟಕ ಪ್ರದರ್ಶನವಾಯಿತು.

 ವಿಎಸ್ಎಸ್ಎನ್ ಅಧ್ಯಕ್ಷರಾದ ಹುಲುಗಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಹುಲಿಗೆಮ್ಮ ಕಾಳಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಪಿ. ಗಣೇಶ, ಗ್ರಾಮ ಪಂಚಾಯಿತಿ ಸದಸ್ಯರಾದ ಸಿ.ಎಲ್. ಕುಮಾರ್, ಬಿ. ನಾಗರಾಜ್, ಎಸ್. ಗಾಳೆಪ್ಪ, ಟಿ. ಮಂಜುನಾಥ್, ಶ್ರೀಮತಿ ಸುಸಿ, ಗೀತಮ್ಮ, ಯಲ್ಲಪ್ಪ ಪತ್ರಿ, ಶ್ರೀಮತಿ ಜಿ. ಮಂಜುಳಾ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿಎಸ್ಎಸ್ಎನ್ ಮಾಜಿ ಅಧ್ಯಕ್ಷರು ಬಿ.ಕೆ. ಬಸವರಾಜ್, ವಾಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಜುನಾಥ್, ಊರಿನ ಮುಖಂಡರಾದ ಉಪ್ಪಾರ್ ಕೃಷ್ಣಪ್ಪ, ಜಿ. ಫಕೀರಪ್ಪ, ಜಿ. ರಾಘವೇಂದ್ರ, ಉಪ್ಪಾರ್ ಸೋಮಣ್ಣ, ಪೂಜಾರ್ ಸೋಮಣ್ಣ, ಉಪ್ಪಾರ್ ಅಂಜಿನಿ, ಹಡಗಲಿ ಖಾಜಾ, ಎಚ್. ಅಶೋಕ, ಪತ್ರಿ ಎಲ್ಲಪ್ಪ, ಬಂಟರ ಸೋಮಣ್ಣ, ಮುಂಡರಗಿ ಈಶಪ್ಪ, ಜಿ. ಶ್ರೀನಿವಾಸ, ಎ. ಕೇಶವಮೂರ್ತಿ, ಕಮ್ಮರ್ ದೊಡ್ಡ ಹನುಮಂತಪ್ಪ, ಡಿ. ಹನುಮಂತಪ್ಪ, ಎಸ್. ಚಂದ್ರು, ಉಪ್ಪಾರ್ ಕನಕಪ್ಪ, ಸಣ್ಣಪ್ಪನವರ ನಾಗರಾಜ್, ನಜೀರ್ ಸಾಬ್, ಎಸ್‌ಟಿಎಂಸಿ ಅಧ್ಯಕ್ಷ ವಿ. ಹನುಮಂತ . ಉಲವತ್ತಿ ಬಸವರಾಜ್ . ಟಿ ಸುರೇಶ. ಟ ಮಧುಸೂದನ್. ಬರದೂರ್ ಸೋಮ್ನಾಥ್. ಕಡ್ಲೆಪ.ಬಿ. ಮಲ್ಲೇಶ. ಟಿ ಕನಕಪ್ಪ. ಚಿತ್ರಪಲ್ಲಿ ಗೋಣೆಪ್ಪ..ಸೇರಿದಂತೆ ಗ್ರಾಮದ ಹಲವಾರು ಗಣ್ಯರು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಎಲ್‌ಐಸಿ ಹುಲುಗಪ್ಪ ಅವರು ನಿರೂಪಿಸಿದರು. ಭಜಂತ್ರಿ ಸೋಮನಾಥ ಅವರು ವಂದನಾರ್ಪಣೆ ಸಲ್ಲಿಸಿದರು.