February 16, 2026

ಶಿವನ ನೆನಪಿನಿಂದಲೇ ಸತ್ಯವಾದ ನೆಮ್ಮದಿ ಶಾಂತಿಯನ್ನು ಪಡೆಯಲು ಸಾಧ್ಯ: ಶಾಸಕ ರಾಘವೇಂದ್ರ ಹಿಟ್ನಾಳ್

Oplus_16908288

ಜೂಡಿ ನ್ಯೂಸ್ :

 ಕೊಪ್ಪಳ : ಭಕ್ತಿ ಮತ್ತು ಆತ್ಮ ಶುದ್ಧಿಗಾಗಿ ಇರುವುದೇ ಮಹಾಶಿವರಾತ್ರಿ, ಶಿವನ ನೆನಪಿನಿಂದಲೇ ಸತ್ಯವಾದ ನೆಮ್ಮದಿ ಶಾಂತಿಯನ್ನು ಪಡೆಯಲು ಸಾಧ್ಯ ಎಂದು ಮಾನ್ಯ ಶಾಸಕರಾದ ರಾಘವೇಂದ್ರ ಹಿಟ್ನಾಳ್ ತಿಳಿಸಿದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಮಹಾಶಿವರಾತ್ರಿ ಪ್ರಯುಕ್ತ ಏರ್ಪಡಿಸಿದ ಶ್ರೀರಾಮೇಶ್ವರ ಜ್ಯೋತಿರ್ಲಿಂಗ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇವತ್ತಿನ ಒತ್ತಡದ ಬದುಕಿನಲ್ಲಿ ಮನುಷ್ಯ ಶಾಂತಿ ನೆಮ್ಮದಿಯನ್ನು ಪಡೆಯಲು ಆಧ್ಯಾತ್ಮ ಮಾರ್ಗದ ಕಡೆಗೆ ಹೋಗಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಶಿವಾನುಭೂತಿ ಮಂಟಪವನ್ನು ಉದ್ಘಾಟಿಸಿದ ಶ್ರೀಮತಿ ಹೇಮಲತಾ ನಾಯಕ್ ಮಾತನಾಡುತ್ತಾ ಮನುಷ್ಯನ ಜೀವನದಲ್ಲಿ ಹಣ ಆಸ್ತಿ ಅಂತಸ್ತು ಅಧಿಕಾರ ಏನೇ ಇದ್ದರೂ ಮಾನಸಿಕ ನೆಮ್ಮದಿಗಾಗಿ ಪರಮಾತ್ಮನ ಕಡೆಗೆ ಹೋಗಲೇಬೇಕು. ಪರಮಾತ್ಮನೇ ಜಗತ್ತಿಗೆ ಸುಖ ಶಾಂತಿಯನ್ನು ನೀಡುವವನಾಗಿದ್ದಾನೆ ಎಂದರು. 

ಬ್ರಹ್ಮಕುಮಾರಿ ಯೋಗಿನಿ ಅಕ್ಕ ಶಿವರಾತ್ರಿ ಸಂದೇಶವನ್ನು ನೀಡುತ್ತಾ, ವಿಶ್ವಕ್ಕೆ ವಿಶ್ವೇಶ್ವರನೊಬ್ಬನೇ ಜಗತ್ತಿಗೆ ಜಗದೀಶ್ವರನೊಬ್ಬನೇ ಲೋಕಕ್ಕೆ ಲೋಕೇಶ್ವರನೊಬ್ಬನೆ ಭಕ್ತರಿಗೆ ಭಗವಂತನೊಬ್ಬನೇ ಸರ್ವಧರ್ಮದ ಮನುಷ್ಯ ಆತ್ಮರಿಗೆ ಏಕೈಕನಾಗಿರುವ ಪರಮಾತ್ಮ ಶಿವನು ಬಂದು ಸತ್ಯ ಜ್ಞಾನಪ್ರಕಾಶದಿಂದ ವಿಶ್ವದ ಅಜ್ಞಾನ ಅಂದಕಾರವನ್ನು ತೊಲಗಿಸುವುದೇ ಸತ್ಯ ಶಿವರಾತ್ರಿ

ಭಾರತ ದೇಶ ಹಬ್ಬಗಳ ತವರೂರು, ದೇಶಾದ್ಯಂತ ಶಿವರಾತ್ರಿ ಹಬ್ಬವನ್ನು ಬಹಳಷ್ಟು ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಆದರೆ ನಾವು ಮುಖ್ಯವಾಗಿ ಹಬ್ಬದ ಹಿನ್ನೆಲೆಯಲ್ಲಿರುವ ಸತ್ಯತೆಯನ್ನು ತಿಳಿದುಕೊಳ್ಳುವುದು ಅತ್ಯವಶ್ಯಕ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿರುವ ಸತ್ಯ ಆಧ್ಯಾತ್ಮಿಕ ರಹಸ್ಯವನ್ನು ತಿಳಿಸುವ ಉದ್ದೇಶದಿಂದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯ ಈ ವರ್ಷ 6 ದಿನಗಳ ವೈವಿಧ್ಯಮಯ ಕಾರ್ಯಕ್ರಮಗಳನ್ನು ಏರ್ಪಡಿಸಿದೆ.

 ಶಿವರಾತ್ರಿ ಎಂದು ಏಕೆ ಕರೆಯುತ್ತಾರೆ? ಶಿವನಿಗೂ ರಾತ್ರಿಗೂ ಇರುವ ಸಂಬಂಧವೇನು ಶಿವನು ರಾತ್ರಿಯಲ್ಲಿ ಬರುತ್ತಾನೆ ಅಜ್ಞಾನ ಎಂಬ ಕತ್ತಲೆ ಜಗತ್ತನ್ನ ವ್ಯಾಪಿಸಿದೆ ನಾನು ಯಾರು ಎಂಬ ಸತ್ಯತೆ ಗೊತ್ತಿಲ್ಲ ನಾಶವಾಗುವ ಶರೀರವೇ ತಾನೆoದು ತಿಳಿದಿದ್ದೇವೆ ಆದರೆ ಈ ಶರೀರದೊಳಗಡೆ ಇರುವ ಅವಿನಾಶಿಯಾದ ಆತ್ಮ ನಾನು ಎಂಬ ಅರಿವು ಇಲ್ಲ ಅದಕ್ಕೆ ಹೇಳುತ್ತಾರೆ “ಏನನರಿತು ಏನು ಫಲವಯ್ಯ ತನ್ನ ತಾ ಅರಿಯದಿದ್ದೊಡೆ ” ಅಷ್ಟೇ ಅಲ್ಲ ಪರಮಾತ್ಮ ಯಾರು ? ಅವನ ರೂಪವೇನು? ಅವನ ಕರ್ತವ್ಯವೇನು? ಎಂಬ ಸತ್ಯತೆಯ ಅರಿವಿಲ್ಲದ ಅಜ್ಞಾನದ ರಾತ್ರಿಯಲಿ ಜ್ಞಾನ ಸೂರ್ಯ ಜ್ಞಾನಸಾಗರ ಜ್ಞಾನೇಶ್ವರ ಶಿವನು ಬಂದು ಸತ್ಯ ಜ್ಞಾನದ ಬೆಳಕನ್ನು ನೀಡುವುದೇ ಸತ್ಯ ಶಿವರಾತ್ರಿ ಪರಂಜ್ಯೋತಿ ಸ್ವರೂಪನಾದ ಪರಮಾತ್ಮ ಜಗತ್ತಿಗೆ ಒಬ್ಬನೇ ಅವನೇ ಈಶ್ವರ,ಅಲ್ಲಾ,ಗಾಡ್, ಪರಬ್ರಹ್ಮ, ಏಕ್ ಓಂಕಾರ ನಿರಾಕಾರ ಸರ್ವ ಧರ್ಮದ ಮನುಷ್ಯಾತ್ಮರು ಈ ಸತ್ಯತೆಯನ್ನು ಅರಿತುಕೊಂಡು ನಾವೆಲ್ಲ ಒಬ್ಬ ತಂದೆ ಮಕ್ಕಳು ಎಂಬ ಭಾವನೆ ಮೂಡಿದಾಗ ಮಾತ್ರ ಸಮಾಜದಲ್ಲಿ ಸೋದರತೆ, ವಿಶ್ವ ಭ್ರಾತೃತ್ವ ,ಕೋಮು ಸೌಹಾರ್ದತೆ ನೆಲೆಗೊಳ್ಳಲು ಸಾಧ್ಯ ಎಂದರು.

 ಉಪ ಎಂದರೆ ಹತ್ತಿರ ವಾಸ ಎಂದರೆ ಇರುವುದು ಪರಮಾತ್ಮ ಶಿವನ ಹತ್ತಿರ ವಾಸಿಸುವುದೇ ಉಪವಾಸ.

 ಜಾಗರಣೆ ಅಂದರೆ ಕೆಟ್ಟ ಆಲೋಚನೆಗಳಿಂದ ಕೆಟ್ಟ ಸಂಗದಿಂದ ಕೆಟ್ಟ ಹವ್ಯಾಸಗಳಿಂದ ಜಾಗೃತರಾಗಿರುವುದೇ ಜಾಗರಣೆ ಎಂದು ಸಭೆಗೆ ಕರೆ ನೀಡಿದರು.

 ಪ್ರಾಯೋಗಿಕವಾಗಿ ಶಿವ ಧ್ಯಾನ ಮಾಡಿಸುವುದರ ಮೂಲಕ ಶಾಂತಿಯ ಅನುಭೂತಿ ಮಾಡಿಸಿದರು.

ಅಧ್ಯಕ್ಷತೆ ವಹಿಸಿದ ಡಾ. ಬಸವರಾಜ್ ಕ್ಯಾವಟರ್ ಮಾತನಾಡುತ್ತಾ ಇವತ್ತು ಮನುಷ್ಯ ವಿವಿಧ ಪ್ರಕಾರದ ಚಿಂತೆಗಳಲ್ಲಿ ಶಾರೀರಿಕ ಮಾನಸಿಕ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾನೆ ಇದರಿಂದ ಮುಕ್ತರಾಗಲು ಯೋಗ, ಆಧ್ಯಾತ್ಮ ಧ್ಯಾನ ಅತ್ಯವಶ್ಯಕ ಎಂದರು.

 ಜಿಲ್ಲಾ ಕಾರಾಗೃಹ ಅದೀಕ್ಷಕರಾದ ಅಮರೇಶ್ ಪೂಜಾರ್ ಮಾತನಾಡುತ್ತಾ ಆಧ್ಯಾತ್ಮ ಮತ್ತು ಧ್ಯಾನ ಎನ್ನುವುದು ವಯಸ್ಸಾದ ಮೇಲೆ ಅಲ್ಲ ಶರೀರದಲ್ಲಿ ಶಕ್ತಿ ಇರುವಾಗಲೇ ಇದಕ್ಕೆ ನಾವು ಸಮಯವನ್ನು ಕೊಡಬೇಕು ಎಂದರು.

 ಓಂ ನಮಃ ಶಿವಾಯ ನೃತ್ಯ ಎಲ್ಲರ ಮನವನ್ನು ಹರ್ಷಗೊಳಿಸಿತು.

ವೇದಿಕೆಯ ಮೇಲೆ ಪ್ರಸನ್ನ ಗಡದ್, ರಾಘವೇಂದ್ರ ಪಾನಗಂಟಿ , ಗೂಳಪ್ಪ ಹಲಗೇರಿ , ಡಾ.ಮಲ್ಲಿಕಾರ್ಜುನ್ , ಜಿತೇಂದ್ರ ತಾಲೇಡ, ಪ್ರವೀಣ್ ಮೆಹೆತ, ಸತೀಶ ಅಗಡಿ ಉಪಸ್ಥಿತರಿದ್ದರು. ಬಿ.ಕೆ ಸ್ನೇಹಕ್ಕ ಕಾರ್ಯಕ್ರಮ ನಿರೂಪಿಸಿದರು.