February 11, 2026

ವಿಶ್ವ ವಿಖ್ಯಾತ ಹಂಪಿ ಉತ್ಸವದ ಜಾನಪದ ವಾಹಿನಿಗೆ ಹಂಪಾಪಟ್ಟಣದ ಯುವ ಜಾನಪದ ಕಲಾವಿದ ನಾಗರಾಜ ಗಂಟಿ ತಂಡ ಆಯ್ಕೆ…

ಜೂಡಿ ನ್ಯೂಸ್ :

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಜಾನಪದ ಕಲೆಗಳ ತವರೂರು ಹಂಪಾಪಟ್ಟಣ ಗ್ರಾಮದ ಶ್ರೀಯುತ ಸಿದ್ದರ ಸಣ್ಣ ಮಂಜುನಾಥ, ಶ್ರೀಮತಿ ಶಿವಗಂಗಮ್ಮ ರವರ ದ್ವಿತೀಯ ಸುಪುತ್ರ ನಿರೂಪಕ, ಯುವ ಜಾನಪದ ಕಲಾವಿದ, ಜಾನಪದ ಯುವ ಸಿರಿ ಪ್ರಶಸ್ತಿ ಪುರಸ್ಕೃತ , ನಾಗರಾಜ ಗಂಟಿ ಅವರ ತಂಡ 2026 ನೇ ಸಾಲಿನ ವಿಶ್ವ ವಿಖ್ಯಾತಿ ಹಂಪಿ ಉತ್ಸವದ ದಿನಾಂಕ 15.2.2026 ರಂದು ನಡೆಯುವ ಜಾನಪದ ವಾಹಿನಿ ಮೆರವಣಿಗೆಗೆ ಆಯ್ಕೆಗೊಂಡಿದ್ದಾರೆ…

ಯುವ ಜಾನಪದ ನಾಗರಾಜ್ ಗಂಟಿ ಮತ್ತು ಅವರ ಸುಡುಗಾಡು ಸಿದ್ದ ಜಾನಪದ ಕಲಾ ತಂಡವು ನಾಡಿನ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾಡಿನ ಅನೇಕ ಖ್ಯಾತ ಮೆರವಣಿಗೆ ಉತ್ಸವಗಳಲ್ಲಿ ಭಾಗವಹಿಸಿದ್ದಾರೆ ಪ್ರಮುಖ ಕಾರ್ಯಕ್ರಮಗಳೆಂದರೆ ವಿಶ್ವ ವಿಖ್ಯಾತಿ ದಸರಾ ಮಹೋತ್ಸವ, ಗುಡೆಕೋಟೆಯ ಒನಕೆ ಓಬವ್ವ ಉತ್ಸವ, ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಮೆರವಣಿಗೆ ಕಾರ್ಯಕ್ರಮ, ಸಂವಿಧಾನ ಜಾತ ಕಾರ್ಯಕ್ರಮ, ಬಸವ ಸಂಸ್ಕೃತಿ ಅಭಿಯಾನ, ಯುವಜನೋತ್ಸವ, ಕಲಾಪ್ರತಿಭೋತ್ಸವ, ಯುವ ಸೌರಭ, ಸೌಹಾರ್ದ ಜಾನಪದ ಸಂಭ್ರಮ, ಜಾನಪದ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಹಾಗೂ ನಾಡಿನ ಅನೇಕ ಶಾಲಾ ಕಾಲೇಜುಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮೆರವಣಿಗೆಗಳಲ್ಲಿ ಭಾಗವಹಿಸಿದ್ದಾರೆ ಇವರ ನಿಸ್ವಾರ್ಥ ಜಾನಪದ ಸೇವೆಯನ್ನು ಪರಿಗಣಿಸಿ ಕನ್ನಡ ಜಾನಪದ ಪರಿಷತ್ತ ಬೆಂಗಳೂರು ಇವರಿಗೆ ಜಾನಪದ ಯುವ ಸಿರಿ ಪ್ರಶಸ್ತಿ ನೀಡಿ ಪುರಸ್ಕಾರ ಮಾಡಿದೆ… ಇವರ ತಂಡವು ಜಾನಪದ ಕ್ಷೇತ್ರದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದೆ.
ಗಂಟೆ ಶಂಕು ವಿಭೂತಿ ರುದ್ರಾಕ್ಷಿ , ಕಪಿನಿ,ಗಳಿಪಿ, ಕಾವಿ ಕಮಂಡಲವನ್ನು ಧರಿಸಿಕೊಂಡು ಅಭೂತಪೂರ್ವ ಸುಡುಗಾಡು ಸಿದ್ದ ವೇಷವನ್ನು ಧರಿಸಿ ಗಂಟೆ ಶಂಕು ಬಾರಿಸುತ್ತಾ ಮೆರವಣಿಗೆಯಲ್ಲಿ ಸಾಗಿದರೆ ಸಾಕ್ಷಾತ್ ಶಿವನೇ ಭೂಲೋಕಕ್ಕೆ ಬಂದಂತೆ ಭಾಸವಾಗುತ್ತದೆ, ಹಲವಾರು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಜನಮಾನಸಕ್ಕೆ ಸುಡುಗಾಡು ಸಿದ್ದ ಕಲೆಯ ಮೂಲಕ ಮನರಂಜನೆಯ ಜೊತೆಗೆ ತತ್ವ ಭೆರತ ಬುದ್ಧ ಬಸವ ಸಾದು ಶರಣರ ಸಂತ ಮಹಾಂತರ ತತ್ವ ವಿಚಾರಗಳನ್ನು, ದೆವ್ವ ಭೂತಾ ಪಿಚಾಚಿ ಇಂತಹ ಮೌಡ್ಯಗಳನ್ನು ಹೋಗಲಾಡಿಸಿ ಜಾನಪದ ಕಲೆಯ ಮೂಲಕ ಜನರಿಗೆ ಮನರಂಜನೆಯ ಜೊತೆಗೆ ಜಾಗೃತಿ ಮೂಡಿಸುತ್ತಿರುವುದು ಅತ್ಯಂತ ಶ್ಲಾಘನೀಯ.ಅಳಿವಿನಂಚಿನಲ್ಲಿರುವ ಪುರಾತನ ಕಲೆಯಾದ ಸುಡುಗಾಡು ಸಿದ್ದ ಜಾನಪದ ತಂಡಕ್ಕೆ ವಿಶ್ವ ವಿಖ್ಯಾತಿ ಹಂಪಿ ಉತ್ಸವದ ಮೆರವಣಿಗೆಯಲ್ಲಿ ಭಾಗವಹಿಸಲು ಅವಕಾಶ ನೀಡಿದ ವಿಜಯನಗರ ಜಿಲ್ಲಾ ಆಡಳಿತಕ್ಕೆ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಸಿದ್ದಲಿಂಗೇಶ್ ರಂಗಣ್ಣವರ್, ಹಾಗೂ ವಿಜಯನಗರ ಜಿಲ್ಲೆಯ ಎಲ್ಲಾ ಸಾಹಿತ್ಯಕ ಜಾನಪದ ಕಲಾ ಪೋಷಕರಿಗೆ, ಕಲಾಭಿಮಾನಿಗಳಿಗೆ ಸರ್ವ ಪ್ರೋತ್ಸಾಹಕರಿಗೆ ಕಲಾವಿದ ನಾಗರಾಜ್ ಗಂಟಿರವರು ಕೃತಜ್ಞತೆ ಸಲ್ಲಿಸಿದರು…

ವಿಶ್ವದ ಜನರೆಲ್ಲರೂ ಸೇರುವ ವಿಶ್ವ ವಿಖ್ಯಾತಿ ಹಂಪಿ ಉತ್ಸವದ ಜಾನಪದ ವಾಹಿನಿ ಮೆರವಣಿಗೆಯ ಕಾರ್ಯಕ್ರಮದಲ್ಲಿ ಆಯ್ಕೆಗೊಂಡಿರುವ ಹಂಪಾಪಟ್ಟಣ ಗ್ರಾಮದ ಹೆಮ್ಮೆಯ ಗ್ರಾಮಿಣ ಪ್ರತಿಭೆ ಜಾನಪದ ಕಲೆಯನ್ನು ಉಳಿಸಿ ಬೆಳೆಸಲು ಕಂಕಣಭದ್ಧರಾಗಿರುವ ನಾಗರಾಜ್ ಗಂಟಿ ಅವರಿಗೆ, . ಜನ ಸೇವಾ ಟ್ರಸ್ಟ್ ಅಧ್ಯಕ್ಷರು ಬುಡ್ಡಿ ಬಸವರಾಜ್, ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಉಪ್ಪಾರ್ ಹುಲಿಗಮ್ಮ ಕಾಳಪ್ಪ ಸದಸ್ಯರಾದ ಬಿ ನಾಗರಾಜ್, ಸಿದ್ದರ ಗಾಳೆಪ್ಪ,ಸಿದ್ದರ ಪತ್ರಿ ಗೀತಾ ಯಲ್ಲಪ್ಪ, ಏನ್ ನಾಗರಾಜ, ಸಿ ಎಲ್ ಕುಮಾರ, ಟಿ ಮಂಜುನಾಥ, ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು ಹಾಗೂ ತಾಲೂಕು ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಕೇಶವಮೂರ್ತಿ, ಎಸ್ ಟಿ ಎಂ ಸಿ. ಅಧ್ಯಕ್ಷರಾದ .ವಿ..ಹನುಮಂತ, ಸಣ್ಣ ಮಂಜುನಾಥ್ ಗಂಟಿ, ಶಿಕ್ಷಕರಾದ ಮಂಜಪ್ಪ ಗಂಟಿ,ಹನುಮಂತಪ್ಪ ಗಂಟಿ. ಪುಂಡಲಿಕಗಂಟಿ, ಹಿರಿಯ ಜಾನಪದ ಕಲಾವಿದರಾದ ಕಿಂಡ್ರಿ ಲಕ್ಷ್ಮಿಪತಿ, ಎಸ್ಎಂ ಅಯ್ಯಪ್ಪ, ದೊಡ್ಡ ಚಮಲಪ್ಪ, ಎಸ್ ಎಸ್ ನಾಗೇಂದ್ರ, ಎಸ್ ಮಹೇಶ್ ಮತ್ತು ಸರ್ವ ಸದಸ್ಯರು ವಿ ಎಸ್ ಎಸ್ ಎನ್ ಸಂಘದ ಅಧ್ಯಕ್ಷರಾದ. ಕೆ ಹುಲಗಪ್ಪ ಉಪಾಧ್ಯಕ್ಷರು ಉಮಾ ಬಿ ಕುಬೇರ,. ಕೆ ಎಸ್ ಹುಲುಗಪ್ಪ. ಎಸ್ ಚಂದ್ರು ಜೀ ಪಕೀರಪ್ಪ. ಹಾಗೂ ಸರ್ವ ಸದಸ್ಯರು, ಕಾರ್ಮಿಕ ಪರಿಷತ್ತಿನ ಅಧ್ಯಕ್ಷರಾದ ಖಾಜಾ ಹುಸೇನ್, ಎಲ್ಲಾ ಕಲಾ ಪೋಷಕರು, ಪತ್ರಕರ್ತರು ಮಾಧ್ಯಮ ಮಿತ್ರರು ಸ್ನೇಹಿತರು ನಾಗರಿಕರು ಯುವ ಕಲಾವಿದ ನಾಗರಾಜ್ ಗಂಟಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ…