February 22, 2026

ಬೇಟಿ ಬಚಾವೋ ಬೇಟಿ ಪಡಾವೋ ಮತ್ತು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ

ಜೂಡಿ ನ್ಯೂಸ್ :

ಕೊಪ್ಪಳ : ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಮತ್ತು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ನಟರಾಜ ರವರು ಉದ್ಘಾಟಿಸಿ, ಮಾತನಾಡಿದರು. 

ಸಂಕಷ್ಟದಲ್ಲಿರುವ ಮಕ್ಕಳು ಮತ್ತು ಮಹಿಳೆಯರ ಸಂರಕ್ಷಣೆಗಾಗಿ ಮಕ್ಕಳ ಸಹಾಯವಾಣಿ 10‍98 ಹಾಗೂ ಮಹಿಳಾ ಸಹಾಯವಾಣಿ 181 ಜಿಲ್ಲಾ ಹಂತದಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್ ಘಟಕ ಹಾಗೂ ತಾಲೂಕ ಹಂತದಲ್ಲಿ ಸಾಂತ್ವನ ಕೇಂದ್ರಗಳು ಮತ್ತು ಮಕ್ಕಳ ರಕ್ಷಣಾ ಘಟಕಗಳು ಕಾರ್ಯನಿರ್ವಹಣೆ ಮಾಡುತ್ತದೆ ಇದರ ಸದುಪಯೋಗಪಡಿಸಿ ಕೊಳ್ಳುವಂತೆ ಸೂಕ್ತ ತಿಳುವಳಿಕೆ ನೀಡಿದರು. ಮಹಿಳಾ ಸಹಾಯವಾಣಿ 181 ಮತ್ತು ಸಖ ಒನ್ ಸ್ಟಾಪ್ ಸೆಂಟರ್ ಘಟಕದ ಬಿತ್ತಿ ಪತ್ರಗಳ ಬಿಡುಗಡೆಗೆ ಮಾಡಲಾಯಿತು.  

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಸವಿನೆನಪಿಗಾಗಿ ಕಾಲೇಜು ಆವರಣದಲ್ಲಿ ಸಸಿ ನೆಡುವುದರ ಮೂಲಕ ಉಸಿರೇ ಹಸಿರು ಹೆಣ್ಣು ಮಕ್ಕಳ ಭವಿಷ್ಯವೂ ಉಜ್ವಲವಾಗಲೆಂದು ಮಕ್ಕಳನ್ನು ಪ್ರೋತ್ಸಾಹಿಸಲಾಯಿತು.  

ವಿಜೇತರಿಗೆ ಬಹುಮಾನ – ಅಭಿನಂದನಾ ಪತ್ರ, ಸೆಲ್ಫಿ ವಿತ್ ಫ್ಯಾಮಿಲಿ & ಸೆಲ್ಫಿ ವಿತ್ ಅಮ್ಮ ಫೋಟೋ ದೊಂದಿಗೆ ಚಿತ್ರ ಬರವಣಿಗೆಯ ಲೇಖನ – ಪ್ರಸಂಶನೀಯ , ಪ್ರಥಮ ಸ್ಥಾನ ರತ್ನ M.U. 6ನೇ ಸೆಮಿಸ್ಟರ್, ದ್ವಿತೀಯ ಸ್ಥಾನ ಶ್ರೀದೇವಿ ಬಸವರಾಜ್ ಕಿನ್ನಾಳ – 2ನೇ ಸೆಮಿಸ್ಟರ್, ತೃತೀಯ ಸ್ಥಾನ ಪೀರಮ್ಮ.. ಸಮಾಧಾನಕರ ಬಹುಮಾನ ಕು.ಮಂಜುಳ, ಕು.ಅಕ್ಷತಾ ಬನ್ನಿ ಕೊಪ್ಪ, ಕು. ಬಾನು ಬೇಗಂ – ಉದ್ಘಾಟಕರು ಮತ್ತು ಮುಖ್ಯ ಅತಿಥಿವೃಂದರು ವಿದ್ಯರ್ಥಿಗಳಿಗೆ ಅಭಿನಂದನಾ ಪತ್ರವನ್ನು ನೀಡಿ ವಿದ್ಯಾರ್ಥಿಗಳನ್ನು ಪ್ರಶಂಶಿಸಿದರು.

ಹೆಣ್ಣು ಮಕ್ಕಳ ಸುರಕ್ಷತೆ ಮತ್ತು ಭದ್ರತೆಯ ಪ್ರತಿಜ್ಣೆ ವಿಧಿಯನ್ನು ಪ್ರಮಾಣಿಕರಿಸಲಾಯಿತು. 

ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ರೋಹಿಣಿ ಕೊಟಗಾರ್ , ವಿಠ್ಠೋಬಾ ಪ್ರಾಚಾರ್ಯರು, ಸುಧಾಕರ್, ಹುಲಿಗೆಮ್ಮ, ಅಕ್ಕಮ್ಮ ಉಪನ್ಯಾಸಕರು, ಎಂ.ಪಿ. ಹೂಗಾರ್ ರಾಜ್ಯಾಧ್ಯಕ್ಷರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಂಡ ಶ್ರೀಮತಿ ಸುಧಾ ಅಧಿಕ್ಷಕರು, ಶ್ರೀಮತಿ ಹುಲಿಗೆಮ್ಮ ಸೋಶಿಯಲ್ ವರ್ಕರ್ ಭಾಗವಹಿಸಿದ್ದರು.

ನಿರೂಪಣೆ ಶ್ರೀಮತಿ ಯಮುನಾ ಸಖಿ ಘಟಕ ಆಡಳಿತಾಧಿಕಾರಿಗಳು, ಪ್ರಾರ್ಥನೆಯನ್ನು ರತ್ನ ವಿದ್ಯಾರ್ಥಿ, ಸ್ವಾಗತ ಶ್ರೀಮತಿ ಫಾತಿಮಾ ಜೆಂಡರ್ ಸ್ಪೆಷಲಿಸ್ಟ್, ವಂದನಾರ್ಪಣೆ ಶ್ರೀಮತಿ ನಾಗರತ್ನ ತಮ್ಮಿನಾಳ, ಸಹಪ್ರಾಧ್ಯಾಪಕರು ಮತ್ತು ಸ್ಟುಡೆಂಟ್ ವೆಲ್ಫೇರ್ ವಿಭಾಗ ಮತ್ತು ಡಿಗ್ರಿ ಕಾಲೇಜಿನ ವಿದ್ಯಾರ್ಥಿನಿಯರೆಲ್ಲರೂ ನಾವಿನ್ಯತೆಯ ಸೃಜನಶೀಲ ಕಾರ್ಯಕ್ರಮದೊಂದಿಗೆ ಯಶಸ್ವಿಗೊಳಿಸ್ವಿಗೊಂಡಿದೆ.