ಜೂಡಿ ನ್ಯೂಸ್ :
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ 09,03,2026ನೇ ಸೋಮವಾರದಂದು ಶ್ರೀ ಮಾತಾ ಸೇವಾ ಟ್ರಸ್ಟ್ (ರಿ) ವತಿಯಿಂದ “ದಿವಂಗತ ಹನುಮಕ್ಕ” ಇವರ 7ನೇ ವರ್ಷದ “ಪುಣ್ಯಸ್ಮರಣೆ”ಯ ನಿಮಿತ್ತ ಹಂಪಾಪಟ್ಟಣ ಗ್ರಾಮದ “ಶ್ರೀ ಚಂದ್ರಮೌಳೇಶ್ವರ ಪ್ರೌಢಶಾಲೆ”ಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ*
‘ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ತಂದೆ-ತಾಯಿಯರ ಪಾತ್ರ’
ವಿಷಯವನ್ನು ಕುರಿತು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ಎಂಟು ಒಂಬತ್ತು ಹಾಗೂ ಹತ್ತನೇ ತರಗತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ “ಪ್ರಥಮ ದ್ವಿತೀಯ ಹಾಗೂ ತೃತೀಯ” ಈ ಪ್ರಕಾರವಾಗಿ ಒಂದು ತರಗತಿಯಿಂದ ಮೂರು ಜನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ 3 ತರಗತಿಯಿಂದ ಒಂಬತ್ತು ಜನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ “ನೆನಪಿನ ಕಾಣಿಕೆ ಜೊತೆಗೆ ಗೌರವ ಸನ್ಮಾನ”* *ಕಾರ್ಯಕ್ರಮವನ್ನು ಏರ್ಪಡಿಸಿಕೊಂಡಿದ್ದು ಹಾಗೂ “ಪ್ರಬಂಧ” ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ದಿನಾಂಕ13/03/2026 ರ ಶುಕ್ರವಾರ ದಿವಸ ತಾಯಿಯ ಪುಣ್ಯ ಸ್ಮರಣೆ ದಿನದಂದು “ಪ್ರಮಾಣ ಪತ್ರ”ವನ್ನು ನೀಡಲಾಗುವುದು ಎಂದು ಮಾತಾ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಜಿ ಶ್ರೀನಿವಾಸ ಶೆಟ್ಟಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.*

*ಇದಕ್ಕೆ ಸಹಕರಿಸಿದ ಪ್ರೌಢಶಾಲೆ ಮುಖ್ಯ ಶಿಕ್ಷಕರಾದಂತಹ ಚಂದ್ರಪ್ಪ ಹೀರಪ್ಪ ಲಮಾಣಿ ಶ್ರೀ ಕೋಟೆಪ್ಪ ಶಿಕ್ಷಕರು ರಾಘವೇಂದ್ರ ಪಿ ಶಿಕ್ಷಕರು ಪಾಂಡುರಂಗ ಪುಟಾಣಿಕರ್ ಶಿಕ್ಷಕರು ಮಧು ಶಿಕ್ಷಕರು ಮಲ್ಲಿಕಾರ್ಜುನ ಜೆ ಎಸ್ ಶಿಕ್ಷಕರು ಇನ್ನೂ ಅನೇಕ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರೆಲ್ಲರಿಗೂ ಹಾಗೂ ಮಕ್ಕಳ ಪಾಲಕ ಪೋಷಕರಿಗೂ ಶಿಕ್ಷಣ ಪ್ರೇಮಿಗಳಿಗೂ ಜಿ ಶ್ರೀನಿವಾಸ ಇವರು ಶ್ರೀ ಮಾತಾ ಸೇವಾ ಟ್ರಸ್ಟ್ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.*
– ಜಿ ಶ್ರೀನಿವಾಸ ಅಧ್ಯಕ್ಷರು ಶ್ರೀ ಮಾತಾ ಸೇವಾ ಟ್ರಸ್ಟ್ ಹಂಪಾಪಟ್ಟಣ.

More Stories
ಬೇಸಿಗೆ ಬಂತು ಆರೋಗ್ಯದ ಮೇಲೆ ಇರಲಿ ವಿಶೇಷ ಕಾಳಜಿ
ಹರಪನಹಳ್ಳಿ: ಉಚಿತ ಸಾಮೂಹಿಕ ಉಪನಯನ ಕಾರ್ಯಕ್ರಮ ಯಶಸ್ವಿ
ಬೇಟಿ ಬಚಾವೋ ಬೇಟಿ ಪಡಾವೋ ಮತ್ತು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ