March 1, 2026

ಹರಪನಹಳ್ಳಿ: ಉಚಿತ ಸಾಮೂಹಿಕ ಉಪನಯನ ಕಾರ್ಯಕ್ರಮ ಯಶಸ್ವಿ

ಜೂಡಿ ನ್ಯೂಸ್ :

 ದಿನಾಂಕ 26.2.2026 ನೇ ಗುರುವಾರ ದಿವಸ ಹರಪನಹಳ್ಳಿಯ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಉಚಿತ ಸಾಮೂಹಿಕ ಉಪನಯನ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು. 

ಶ್ರೀಮತಿ ದಿವಂಗತ ಕೋಡಿಹಳ್ಳಿ ಗಂಗಮ್ಮ ದಿವಂಗತ ಶ್ರೀ ಕೋಡಿಹಳ್ಳಿ ನಾಗರಾಜ ಶಟ್ರು ಇವರ ಸವಿ ನೆನಪಿಗಾಗಿ ಸಮಾಜಕ್ಕೆ ಏನಾದರೂ ಒಂದು ಕೊಡುಗೆ ಅಥವಾ ಸೇವೆಯನ್ನು ಸಲ್ಲಿಸೋಣ ಎಂದು ಸಂಕಲ್ಪ ಮಾಡಿಕೊಂಡ ಇವರ ಮಕ್ಕಳಾದ ಶ್ರೀಯುತ ಕೆ ಹನುಮಂತ ಶೆಟ್ರು ಶ್ರೀಮತಿ ರಂಜನಿ ಮತ್ತು ಶ್ರೀಯುತ ಕೆ ರಾಘವೇಂದ್ರ ಶೆಟ್ರು ಶ್ರೀಮತಿ ವಿಜಯಲಕ್ಷ್ಮಿ” ಇವರು ಆಯೋಜಿಸಿರುವ ಉಚಿತ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ವಿವಿಧ ತಾಲೂಕು ಹಾಗೂ ಜಿಲ್ಲೆಯಿಂದ ಆಗಮಿಸಿದ 26 ವಟುಗಳಿಗೆ ಯಜ್ಞೋಪವೀತ(ಜನಿವಾರ)ಉಪನಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

 ಉಪನಯನ ಕಾರ್ಯಕ್ರಮದ ಪೌರೋಹಿತ್ಯವನ್ನು ಗಂಗರಾಜ್ ಗುರುಗಳು ನಡೆಸಿಕೊಟ್ಟರು.

ಈ ಕಾರ್ಯಕ್ರಮಕ್ಕೆ ನಗರೇಶ್ವರ ದೇವಸ್ಥಾನದ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಹಾಗೂ ಮಹಿಳಾ ಸಂಘದವರು ಪಾಲ್ಗೊಂಡು ಅದ್ದೂರಿಯಾಗಿ ನಡೆಸಿಕೊಟ್ಟರು.

ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಆಗಮಿಸಿದಂತ ಎಲ್ಲಾ ಆರ್ಯವೈಶ್ಯ ಬಂದು ಬಾಂಧವರಿಗೆ ಎಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರು ಸಾಲದು ಎಂದು ಆಯೋಜಕರಾದ ಶ್ರೀಯುತ ಹನುಮಂತ ಶೆಟ್ರು ಹಾಗೂ ರಾಘವೇಂದ್ರ ಶಟ್ರು ಕುಟುಂಬದವರು ಹರ್ಷವನ್ನು ವ್ಯಕ್ತಪಡಿಸಿದರು. 

ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಬೆಳಿಗ್ಗೆ ಉಪಹಾರ ಹಾಗೂ ಮಧ್ಯಾಹ್ನ ಹೋಳಿಗೆ ಸಿಹಿಯುಟದ ವ್ಯವಸ್ಥೆ ಮಾಡಿದ್ದರು.

ಕೋಡಿಹಳ್ಳಿ ಕುಟುಂಬದವರಿಗೆ ಹರಪನಹಳ್ಳಿಯ ಆರ್ಯವೈಶ್ಯ ಸಂಘದವರು ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕು ಹಂಪಾಪಟ್ಟಣ ದ ಶ್ರೀ ಮಾತಾ ಸೇವಾ ಟ್ರಸ್ಟ್ ಅಧ್ಯಕ್ಷರಾದ ಶ್ರೀನಿವಾಸ ಇವರು ಗೌರವ ಸನ್ಮಾನವನ್ನು ಮಾಡಿದರು.

ಸಮಾಜ ಸೇವೆ ಮಾಡುವಂತಹ ಇಂತಹ ಅನೇಕ ಕುಟುಂಬಗಳು ಮುಂದೆ ಬರಲಿ ಎಂದು ಶ್ರೀ ಮಾತಾ ಸೇವಾ ಟ್ರಸ್ಟ್ ಅಧ್ಯಕ್ಷರಾದ ಶ್ರೀನಿವಾಸ ಹಂಪಾಪಟ್ಟಣ ಇವರು ಸಂತಸ ವ್ಯಕ್ತಪಡಿಸಿದರು.

– ವರದಿ ಜಿ. ಶ್ರೀನಿವಾಸ ಹಂಪಾಪಟ್ಟಣ