ಜೂಡಿ ನ್ಯೂಸ್ :
ಹಗರಿಬೊಮ್ಮನಹಳ್ಳಿ ತಾಲೂಕು ಹಂಪಾಪಟ್ಟಣ ಗ್ರಾಮದಲ್ಲಿ ದಿನಾಂಕ 22-03-2026 ರವಿವಾರದಂದು ವಿಶ್ವ ಜಲ ದಿನ”ದ ಅಂಗವಾಗಿ ಶ್ರೀ ನಗರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಎರಡನೇ ವರ್ಷದ ನೀರಿನ ಅರವಟ್ಟಿಗೆ ಯನ್ನು ಪ್ರಾರಂಭಿಸಲಾಯಿತು.

ಗ್ರಾಮದ ಹಿರಿಯ ಮುಖಂಡರಾದ ಗೆದ್ದಲಗಟ್ಟಿ ತಿಮ್ಮಣ್ಣನವರು ಹಾಗೂ ಸೈನಿಕರಾದ ಭೈರವ ಪತ್ತಾರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗೆದ್ದಲಗಟ್ಟಿ ತಿಮ್ಮಣ್ಣನವರು, ಬೇಸಿಗೆಯ ತೀವ್ರ ಬಿಸಿಲಿನಲ್ಲಿ ನೀರಿನ ಅವಶ್ಯಕತೆ ಅತ್ಯಂತ ಮುಖ್ಯವಾಗಿದ್ದು, ನೀರಿನ ಅರವಟ್ಟಿಗೆ ಮೂಲಕ ಜನರ ದಾಹವನ್ನು ತಣಿಸುವುದು ಮಹತ್ತರ ಸೇವೆ ಎಂದರು. ಮಾತಾ ಸೇವಾ ಟ್ರಸ್ಟ್ ವತಿಯಿಂದ ಕೈಗೊಂಡ ಈ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು. ಜೊತೆಗೆ ಹಂಪಾಪಟ್ಟಣದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಬೇಕೆಂಬ ತಮ್ಮ ಆಶಯವನ್ನೂ ವ್ಯಕ್ತಪಡಿಸಿದರು.
ಜಿ. ಶ್ರೀನಿವಾಸ ಶ್ರೀ ಮಾತಾ ಸೇವಾ ಟ್ರಸ್ಟ್ ಅಧ್ಯಕ್ಷರು ಮಾತನಾಡಿ, ವಿಶ್ವ ಜಲ ದಿನದ ಮಹತ್ವವನ್ನು ವಿವರಿಸಿ, ನೀರು ಜೀವನದ ಮೂಲವಾಗಿದ್ದು ಅದನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು. ಬೇಸಿಗೆ ಕಾಲದಲ್ಲಿ ಬಾಯಾರಿಕೆಯಿಂದ ಬಳಲುವ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ನೀರಿನ ಅರವಟ್ಟಿಗೆಯನ್ನು ಆರಂಭಿಸಲಾಗಿದೆ ಎಂದು ಹೇಳಿದರು. ಇಂತಹ ಸೇವಾ ಕಾರ್ಯಗಳು ಮುಂದುವರೆಯಲಿದ್ದು, ಜನರ ಸಹಕಾರ ಅತ್ಯಗತ್ಯವೆಂದು ಮನವಿ ಮಾಡಿದರು.
ವಿಶ್ವಗುರು ಮುಖ್ಯಗುರು ಉಮೇಶ್ ಮಣಿಗಾರ್ ಅವರು ಮಾತನಾಡಿ, ಬಿಸಿಲಿನ ತಾಪಮಾನ ಹೆಚ್ಚಾಗಿರುವ ಈ ಸಮಯದಲ್ಲಿ ನೀರಿನ ಅರವಟ್ಟಿಗೆ ಪ್ರಾರಂಭಿಸಿರುವುದು ಅತ್ಯಂತ ಉಪಯುಕ್ತ ಕಾರ್ಯವಾಗಿದೆ. ಬಾಯಾರಿದವರಿಗೆ ನೀರು ನೀಡುವುದು ಅತ್ಯಮೂಲ್ಯ ಸೇವೆಯಾಗಿದ್ದು, ಇದು ನಿಜವಾದ ಮಾನವೀಯತೆ ಎಂದು ಹೇಳಿದರು.
ರೈತ ಮುಖಂಡರಾದ ಸೀಗೆನಹಳ್ಳಿ ಬಸವರಾಜ್ ಅವರು ಮಾತನಾಡಿ, ಸಮಾಜ ಸೇವೆ ಅಪಾರವಾಗಿದ್ದು, ಜನಪರ ಕಾರ್ಯಗಳಲ್ಲಿ ಸದಾ ಸೇವೆಯಲ್ಲಿ ತೊಡಗಿರುವ ಕಾರ್ಯಕರ್ತರು ನೀರಿನ ಅರವಟ್ಟಿಗೆ ಮೂಲಕ ಮತ್ತೊಂದು ಮಹತ್ವದ ಸೇವೆ ಸಲ್ಲಿಸಿದ್ದಾರೆ ಎಂದು ಪ್ರಶಂಸಿಸಿದರು.
ಮತ್ತೋರ್ವ ಮುಖಂಡರಾದ ಸಿ. ನಾಗರಾಜ್ ಅವರು ಮಾತನಾಡಿ, ಈ ಕಾರ್ಯಕ್ರಮಗಳಲ್ಲಿ ಸದಾ ವಿಶೇಷತೆ ಇರುತ್ತದೆ ನೀರಿನ ಅರವಟ್ಟಿಗೆ ಜೊತೆಗೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿವೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಎ. ಕೇಶವಮೂರ್ತಿ, ಹಡಗಲಿ ಖಾಜಾಸಾಬ್, ಗವಿರಾಜ್ ಕೆ.ಎಸ್. ಹುಲುಗಪ್ಪ, ಸತ್ಯನಾರಾಯಣ, ಟಿ. ನಾಗೇಶ್, ಬಿ.ಎಸ್. ಹನುಮಂತಣ್ಣ, ಗೊಂದಲಿ ರಾಘವೇಂದ್ರ, ಮರಿಸ್ವಾಮಿ, ಬೇಕರಿ ಸಂಜಯ್, ಟಿ. ರಾಘವೇಂದ್ರ, ಟಿ. ರಾಜು, ಸೋಮು ವಾಲ್ಮೀಕಿ ಸೇರಿದಂತೆ ಅನೇಕ ಗ್ರಾಮಸ್ಥರು ಹಾಗೂ ಮುಖಂಡರು ಭಾಗವಹಿಸಿದ್ದರು.

More Stories
ಮಹಿಳೆ ಕೇವಲ ಗೃಹಿಣಿ ಅಲ್ಲ, ಸಮಾಜದ ನಿರ್ಮಾತೃ, ಮಾರ್ಗದರ್ಶಕಿ : ಡಾ. ಅನುಸೂಯ ಅಂಗಡಿ
12ನೇ ಶತಮಾನದ ಶಿವಶರಣೆಯರು ಸ್ವಾಭಿಮಾನದ ಸಂಕೇತ :ಡಾ. ಟಿ ಹೆಚ್ ಬಸವರಾಜ್
ಎಡದಂಡೆ ಮುಖ್ಯ ಕಾಲುವೆ ಒಡೆದು ಬೆಳೆ ಹಾನಿ : ಬಿಜೆಪಿ ಪ್ರತಿಭಟನೆ