ಜೂಡಿ ನ್ಯೂಸ್ :
ಹೊಸಪೇಟೆ : ನಗರದ ಬಳ್ಳಾರಿ ವಿ ವಿ ಸಂಘದ ಷಾ ಭಾವರಲಾಲ್ ಬಾಬುಲಾಲ್ ನಾಹರ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಾ. 24 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಥಿಯೊಸೊಫಿಕಲ್ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ ಅನುಸೂಯ ಅಂಗಡಿಯವರು ಮಹಿಳಾ ದಿನಾಚರಣೆಯ ಪ್ರಯುಕ್ತ ವಿಶೇಷ ಉಪನ್ಯಾಸ ನೀಡಿದರು.
ಸಮಾಜವು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದರೆ, ಸಮಾಜವು ಅಭಿವೃದ್ಧಿ ಪದದತ್ತ ಸಾಗುತ್ತದೆ, ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಕಿ ಮತ್ತು ಮಹಿಳೆಗೆ ಆಧುನಿಕ ದಿನಮಾನಗಳಲ್ಲಿ ಹಲವಾರು ಸವಾಲುಗಳಿದ್ದರೂ ಅವುಗಳನ್ನು ಲೆಕ್ಕಿಸದೆ ಸಮಾಜದ ಅಭಿವೃದ್ಧಿಗಾಗಿ ಮಹಿಳೆಯರು ನಿಸ್ವಾರ್ಥವಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಾಳೆ, ಮನೆಯಲ್ಲಿ ಗೃಹಿಣಿಯಾಗಿ, ಶಾಲೆಯಲ್ಲಿ ಶಿಕ್ಷಕಿಯಾಗಿ, ಸಮಾಜದಲ್ಲಿ ತಾಯಿಯಾಗಿ ಹಲವಾರು ಪಾತ್ರಗಳನ್ನು ನಿರ್ವಹಿಸುವ ಮಹಿಳೆಯ ಕಾರ್ಯ ಅವಳ ಸೇವೆ ಅತ್ಯಂತ ಶ್ಲಾಘನೀಯವಾದದ್ದು ಆದ್ದರಿಂದ ಮಹಿಳೆಯು ಸೇವೆಗೆ ಅಷ್ಟೇ ಅಲ್ಲದೆ ಉತ್ತಮ ಸಮಾಜದ ನಿರ್ಮಾತೃ, ಯಾವುದೇ ಸಮಸ್ಯೆ ಬಂದರೂ ಅದಕ್ಕೆ ಅಂಜದೆ ಗಟ್ಟಿತನದಿಂದ ಎಲ್ಲರನ್ನೂ ಪೊರೆಯುವ ಮಾರ್ಗದರ್ಶಕಿ ಹಾಗೂ ಪುರುಷ ಹಾಗೂ ಮಹಿಳೆ ಸಮಾನರು ಎಂದು ಹೇಳಿದರು.
ಉಪನ್ಯಾಸ ನೀಡಿದ. ಡಾ: ಅನುಸೂಯ ಅಂಗಡಿಯವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ ಶಿವನಗೌಡ ಸಾತ್ಮರ್ ಮಹಿಳೆ ಕೇವಲ ಅಬಲೆ ಅಲ್ಲ ಸಬಲೆ. ಜೊತೆಗೆ ಸಂಸಾರದ ಕಣ್ಣು ಅಷ್ಟೇ ಅಲ್ಲದೆ ನಮ್ಮ ಸಮಾಜದ ಕಣ್ಣು ನುಡಿದರು ಐಕ್ಯೂಐಸಿ ಸಂಯೋಜಕರಾದ ಡಾ ಜಗದೀಶ್ ಅವರು ಮಹಿಳೆಯ ಸಾಧನೆ ಅತ್ಯಂತ ವಿಶ್ಲೇಷಣಾತ್ಮಕವಾಗಿ ಮಾತನಾಡಿದರು. ಅಮ್ಮನ ಕುರಿತು ಡಾ ಶೋಭಾ ಪಾಟೀಲ್ ಹಾಡಿದರು.
ಮಹಾವಿದ್ಯಾಲಯದ ಆಧ್ಯಾಪಕರಾದ ಡಾ: ಕೆಎಂ ಪಾರ್ವತಿ, ಡಾ: ಮಲ್ಲಿಕಾ. ಡಾ: ಸತಿಶ್ ಸೂರಿಮಠ, ಡಾ. ಪಿ ಎಂ ಸಿದ್ದಲಿಂಗಸ್ವಾಮಿ, ಡಾ: ವಿಶ್ವನಾಥ್ ಗೌಡ. ಇಟಗಿ ಮಲ್ಲಿಕಾರ್ಜುನ, ಡಾಕ್ಟರ್ ಉಮೇಶ್ ಹಡಗಲಿ, ಮತ್ತು ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕು. ಸ್ಫೂರ್ತಿ ಪ್ರಾರ್ಥಿಸಿದರು, ಕು: ನಿಸರ್ಗ ಸ್ವಾಗತಿಸಿದರು. ಕು. ಮೇಘ ನಿರ್ವಹಿಸಿದರು

More Stories
ಹಂಪಾಪಟ್ಟಣದಲ್ಲಿ ವಿಶ್ವ ಜಲ ದಿನಾಚರಣೆ ಅಂಗವಾಗಿ ನೀರಿನ ಅರವಟ್ಟಿಗೆ ಪ್ರಾರಂಭ
12ನೇ ಶತಮಾನದ ಶಿವಶರಣೆಯರು ಸ್ವಾಭಿಮಾನದ ಸಂಕೇತ :ಡಾ. ಟಿ ಹೆಚ್ ಬಸವರಾಜ್
ಎಡದಂಡೆ ಮುಖ್ಯ ಕಾಲುವೆ ಒಡೆದು ಬೆಳೆ ಹಾನಿ : ಬಿಜೆಪಿ ಪ್ರತಿಭಟನೆ