January 31, 2026

ಹಿರಿಯ ಜೀವಿ ಸಿದ್ದರ ಪರಿ ಮಾಯಮ್ಮ ಅವರಿಂದ 77ನೇ ಗಣರಾಜ್ಯೋತ್ಸವದ ಧ್ವಜರೋಹಣ…

ಜೂಡಿ ನ್ಯೂಸ್ :

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದ ಸುಡುಗಾಡು ಸಿದ್ದ ಸಮಾಜದ ವತಿಯಿಂದ ನಡೆದ 77ನೇ ಗಣರಾಜ್ಯೋತ್ಸವ ಶುಭ ಸಮಾರಂಭದ ಧ್ವಜಾರೋಹಣ ಕಾರ್ಯಕ್ರಮವನ್ನು ಗ್ರಾಮದ ಹಿರಿಯ ಕಾಯಕ ಜೀವಿ 98 ತುಂಬು ಜೀವನದ ಸಿದ್ದರ ಪರಿ ಮಾಯಮ್ಮ ನವರು 77 ನೇ ಗಣರಾಜ್ಯೋತ್ಸವದ ಧ್ವಜರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು..

ಈ ಸಂದರ್ಭದಲ್ಲಿ ಮಾತನಾಡಿದ ಜಾನಪದ ಕಲಾವಿದ ನಾಗರಾಜ್ ಗಂಟಿರವರು 1947ರಲ್ಲಿ ನಮಗೆ ಸ್ವಾತಂತ್ರ್ಯ ದೊರೆತರೂ ಸಹ ಬ್ರಿಟಿಷರ ಕಾನೂನಿನಿಂದ ಮುಕ್ತಿ ಹೊಂದಲು ಸಾಧ್ಯವಾಗಲಿಲ್ಲ..ಆದರೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಾಗೂ ಸಂವಿಧಾನ ರಚನಾ ಸಮಿತಿ ಮತ್ತು ಕರಡು ಸಮಿತಿಯ ಸರ್ವ ಸದಸ್ಯರ ಆವಿರತ ಪರಿಶ್ರಮದಿಂದಾಗಿ 1950 ಜನವರಿ 26ರಂದು ವಿಶ್ವದ ಶ್ರೇಷ್ಠ ಬೃಹತ್ ಲಿಖಿತ ಸಂವಿಧಾನ ರಚನೆ ಆಗಲು ಸಾಧ್ಯವಾಯಿತು.. ಸಂವಿಧಾನ ಶಿಲ್ಪಿ ವಿಶ್ವ ನಾಯಕ 

ಡಾ: ಬಿ ಆರ್ ಅಂಬೇಡ್ಕರ್ ಅವರ ದೂರಾಲೋಚನೆಯ ಸಮಷ್ಟಿ ವಿಶ್ವ ಪ್ರಜ್ಞೆ ನಮ್ಮ ಭಾರತ ದೇಶಕ್ಕೆ ಮೈಲುಗಲ್ಲು, ಸಂವಿಧಾನದ ಸಹೋದರತೆ , ಸೌಹಾರ್ದತೆ, ಸಮಾನತೆ,ಭ್ರಾತೃತ್ವದ ಸಂವಿಧಾನದ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಹಾಗೂ ಹಕ್ಕುಗಳನ್ನು ಮತ್ತು ನಮ್ಮ ಕರ್ತವ್ಯಗಳನ್ನು ಪಾಲಿಸುವ ಮುಖೇನ ಸಂವಿಧಾನ ರಚನೆಗೆ ಶ್ರಮಸಿದ ಮಹನೀಯರಿಗೆ ಗೌರವವನ್ನು ಸಲ್ಲಿಸಬೇಕು ಎಂದು ನುಡಿದರು..

ಇದೇ ಸಂದರ್ಭದಲ್ಲಿ ಹೊಸಪೇಟೆಯ ಕಿನ್ನರಿ ಶೇಖಪ್ಪನವರು ಗಣರಾಜ್ಯೋತ್ಸವದ ಬಗ್ಗೆ ಮಾತನಾಡಿದರು..

77ನೇ ಗಣರಾಜ್ಯೋತ್ಸವದ ಆಚರಣೆಯ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಸಿದ್ದರಗಾಳೆಪ್ಪ, ಸುಸಿ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ದೊಡ್ಡ ಚಮಲಪ್ಪ, ಸಣ್ಣ ಮಂಜುನಾಥ ಗಂಟಿ, ಎಸ್ ಕೆ ಸೋಮನಾಥ, ಮುಡಿಯಪ್ಪ ಘಂಟಿ, ಪತ್ರಿ ಮಂಜುನಾಥ, ಸಣ್ಣ ಚಮಲಪ್ಪ,ಮೊಡ್ಮಿ ಆನಂದ, ಎಸ್ ಎಂ ಉಮೇಶ್, ಮಹೇಶ್ ಗಂಟಿ,ಎಸ್ ಎಂ ಧನುಷ್ ಕುಮಾರ್, ರಾಮವ್ವ ಪತ್ರಿ ಈರಮ್ಮ, ಸರ್ಕಾರಿ ಪ್ರಾಥಮಿಕ ಶಾಲೆಯ ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳು, ಹಂಪಾಪಟ್ಟಣ ಗ್ರಾಮದ ಸಮಸ್ತ ನಾಗರಿಕ ಬಂಧುಗಳು ಭಾಗವಹಿಸಿದರು.