ಜೂಡಿ ನ್ಯೂಸ್ :
ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ 25-01-26 ರಂದು ಶ್ರೀ ಮಾತಾ ಸೇವಾ ಟ್ರಸ್ಟ್ ನ ಮೂರನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ವಲಯಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಸಮಾರಂಭ ಕಾರ್ಯವು ಯಶಸ್ವಿಯಾಗಿ ನೆರವೇರಿತು ಎಂದು ಶ್ರೀ ಮಾತಾ ಸೇವಾ ಟ್ರಸ್ಟ್ ಅಧ್ಯಕ್ಷರಾದ ಜಿ ಶ್ರೀನಿವಾಸ ಅವರು ಹರ್ಷ ವ್ಯಕ್ತಪಡಿಸಿದರು.
ವಿಶೇಷ ಆಹ್ವಾನಿತರಾಗಿ ಮಾತಾ ಮಂಜಮ್ಮ ಜೋಗತಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಮರಿಯಮ್ಮನಹಳ್ಳಿ ಇವರು ಉದ್ಘಾಟಿಸಿದರು.
ಶ್ರೀ ಮಾತಾ ಮಾಣಿಕ್ಯ ಸೇವಾ ರತ್ನ -2026 ರ ಪ್ರಶಸ್ತಿ ಪುರಸ್ಕೃತರಲ್ಲಿ ಒಬ್ಬರಾದ ಮಲ್ಲೇಶ್ ದೊಡ್ಡಮನಿ, ಡಿ ವೈ ಎಸ್ ಪಿ ಉಪವಿಭಾಗ ಕೂಡ್ಲಿಗಿ ಇವರ ಜೊತೆ ಇನ್ನೂ ಎಂಟು ಸಾಧಕರು ಪ್ರಶಸ್ತಿ ಸನ್ಮಾನವನ್ನು ಸ್ವೀಕರಿಸಿದರು.
ಉದ್ಘಾಟನೆ ಮಾಡಿದ ಮಾತಾ ಮಂಜಮ್ಮ ಜೋಗತಿ ಮರಿಯಮ್ಮನಹಳ್ಳಿ ಇವರು ಉದ್ಘಾಟನೆ ನುಡಿ ನುಡಿದರು.
ದಿ ಹೊಂಬೆಳಕು ಪತ್ರಿಕೆಯ ಸಂಪಾದಕರಾದ ಬುಡ್ಡಿ ಬಸವರಾಜ್ ಇವರು ಪ್ರಾಸ್ತವಿಕ ನುಡಿಗಳನ್ನಾಡಿದರು .
ರಂಗಲೋಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮಸಾರಿ ನೆಲ್ಕುದಿರಿ ಗ್ರಾಮದ ಶ್ರೀಯುತ ಮಹಾಂತೇಶ್ ಹಾಗೂ ತಂಡದವರು ತಮ್ಮ ಗೀತೆಯ ಮುಖಾಂತರ ನಡೆಸಿಕೊಟ್ಟ “ಅರಿವು ಮತ್ತು ಜನಜಾಗೃತಿ” ಕಾರ್ಯಕ್ರಮ ಅತ್ಯದ್ಭುತವಾಗಿ ನೆರವೇರಿಸಿಕೊಟ್ಟರು.
ಸನ್ಮಾನ ಸ್ವೀಕರಿಸಿದ ಸನ್ಮಾನಿತರು ಹಾಗೂ ವಿಶೇಷ ಆಹ್ವಾನಿತರು ತಮ್ಮ ಮನದಾಳದ ಅನಿಸಿಕೆಯನ್ನು ಹಂಚಿಕೊಂಡರು.
ಉತ್ತಮವಾದ ವೇದಿಕೆಯಲ್ಲಿ ಸೊಬಗು ನೀಡಿದ ಕಾರ್ಯಕ್ರಮ ಇದಾಗಿತ್ತು ಎಂದು ಮಲ್ಲೇಶ್ ದೊಡ್ಮನಿ ಡಿವೈಎಸ್ಪಿ ಉಪ ವಿಭಾಗ ಕೂಡ್ಲಿಗಿ ಇವರು ಸಂತಸ ವ್ಯಕ್ತಪಡಿಸಿದರು.
ಗಣ್ಯರು ವಿಶೇಷ ಆಹ್ವಾನಿತರು ಶಾಲಾ ಶಿಕ್ಷಕರು ಸಂಘ ಸಂಸ್ಥೆಯ ಪದಾಧಿಕಾರಿಗಳು ಗ್ರಾಮದ ಅನೇಕರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿ ಎಲ್ಲರಿಗೂ ಹೃದಯಪೂರ್ವಕ ಅಭಿನಂದನೆಗಳನ್ನು ಶ್ರೀನಿವಾಸ ಅವರು ತಿಳಿಸಿದರು.
ಸ್ವಾಗತವನ್ನು ಮಹಾಂತೇಶ ಹಾಗೂ ತಂಡದವರು ನಿರೂಪಣೆ ಮತ್ತು ನಿರ್ವಹಣೆಯನ್ನು ಬಾರಿಕರ ಹುಲುಗಪ್ಪ ನಿರ್ವಹಿಸಿದರು.

More Stories
ಬೆಂಗಳೂರು ರಾಷ್ಟ್ರೀಯ ನಾಟಕ ಶಾಲೆಯ ರೆಪರ್ಟರಿಗೆ ಹಂಪಾಪಟ್ಟಣದ ಕಲಾವಿದ ಸುನಿಲ್ ಕುಮಾರ್ ಆಯ್ಕೆ
ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿಗೆ ಹಂಪಾಪಟ್ಟಣದ ಜಿ ಶ್ರೀನಿವಾಸ ಆಯ್ಕೆ
ರಂಗಭೂಮಿಯನ್ನೇ ಕಲೆಯನ್ನಾಗಿಸಿಕೊಂಡ : ಪ್ರೇಮ ಗುಳೇದಗುಡ್ಡ