January 31, 2026

ರಂಗಭೂಮಿಯನ್ನೇ ಕಲೆಯನ್ನಾಗಿಸಿಕೊಂಡ : ಪ್ರೇಮ ಗುಳೇದಗುಡ್ಡ

ಜೂಡಿ ನ್ಯೂಸ್ :

 ಕೊಪ್ಪಳ.. ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ ಬಸಪ್ಪ ಹಾಗೂ ಸುಲೋಚನ ಕರಿಗೋಳಣ್ಣವರ್ ದಂಪತಿಗಳ ಉದರದಲ್ಲಿ 1958ರಲ್ಲಿ ಜನ್ಮ ತಾಳಿದರು. ಕಲಾ ದೇವಿ ಪ್ರೇಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಪೂರೈಸಿ ಮುಂದೆ ಕಲೆಯ ತವರಾದ ಗುಳೇದಗುಡ್ಡದಲ್ಲಿ ತಮ್ಮ ಕಲೆಯನ್ನು ರಚಿಸಿಕೊಂಡರು.

ರಂಗಭೂಮಿಯೇ ಅವರಿಗೆ ಸಮಗ್ರ ಜ್ಞಾನಾರ್ಜನೆ ನೀಡುವುದರೊಂದಿಗೆ ಅನುಭವವನ್ನು ನೀಡಿತ್ತು. ಬಾಲ್ಯದಲ್ಲಿಯೇ ಅಮರೇಶ್ವರ ನಾಟ್ಯ ಸಂಘದಲ್ಲಿ ನೃತ್ಯ ಗಾರಥಿ ರಂಗಭೂಮಿ ಪ್ರವೇಶ ಮಾಡಿದಳು. ಪ್ರೇಮ ಅವರ ತಾಯಿ ಸುಲೋಚನಾ ಮಹಾರಾಷ್ಟ್ರದ ಪ್ರಸಿದ್ಧ ನೃತ್ಯ ಗಾರತಿ ಇಂಥವರ ಮಡಿಲಿನಲ್ಲಿ ಜನ್ಮ ತಾಳಿದ ಪ್ರೇಮಾ ಅವರಿಗೆ ಕಲೆಯು ತಾಯಿಂದಲೇ ಬಳುವಳಿಯಾಗಿ ಬಂದಿತ್ತು ಗೌಡರ ಗದ್ದಲ ನಾಟಕದಲ್ಲಿ ಪ್ರಮುಖ ಪಾತ್ರದಲ್ಲಿ ಮೈ ಚಳಿ ಬಿಟ್ಟು ಅಭಿನಯಿಸಿದ ಪ್ರೇಮ ಅವರು ಅಂತರದಲ್ಲಿ ಮಹಾ ನಟಿ ಎನಿಸಿಕೊಂಡ ನಟಿಯರೆಲ್ಲ ಹುಬ್ಬೇರಿಸುವಂತೆ ಮಾಡಿದ್ದು ಪ್ರೇಮ ಅವರಿಗೆ ರಕ್ತಗತವಾಗಿ ಮೂಡಿಬಂದ ಅಭಿನಯದ ಗತ್ತುಗಾರಿಕೆ.

ಪ್ರೇಮ ಅವರು ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಅವರ ನಾಟಕಗಳು ಪ್ರಸಿದ್ಧಿಯನ್ನು ಪಡೆದಿದೆ ಏಕೆಂದರೆ ಅದರಲ್ಲಿ ಇರುವಂತಹ ಸಾಹಿತ್ಯ ಮತ್ತು ಆಸೆ ಎಲ್ಲವನ್ನು ಒಳಗೊಂಡು ಪಾತ್ರಗಳಲ್ಲಿ ಪ್ರಮುಖವಾಗಿ ತನ್ನದೇ ಆದ ಒಂದು ಚಾಪನ್ನು ಮೂಡಿಸಿದಂತಹ ಪ್ರೇಮ ಅವರು ಇಡೀ ಕರ್ನಾಟಕದ ನಾಟಕ ರಂಗದಲ್ಲಿ ತನ್ನ ಒಂದು ಹೆಜ್ಜೆ ಗುರುತನ್ನು ಇರಿಸಿದಾರೆ ಹಾಗೂ ವರ್ಷದಂತೆ ಸಾಕಷ್ಟು ಕಾಲ ಕಲಾ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನಾಟಕವೇ ತಮ್ಮನ ತಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಮಾಡಿಕೊಂಡು ಅದನ್ನು ಮುನ್ನಡೆಸುವಂತಹ ಕೀರ್ತಿಯು ಕೂಡ ಪ್ರೇಮಾ ಅವರಿಗೆ ಸಲ್ಲುತ್ತದೆ. 

ಪ್ರೇಮ ಅವರಿಗೆ ಸಾಕಷ್ಟು ಪ್ರಶಸ್ತಿಯೂ ಕೂಡ ಲಭಿಸಿದೆ. ಕಲಾ ರತ್ನ ರಾಜ್ಯ ಪ್ರಶಸ್ತಿ, ಬಳ್ಳಾರಿ ರಾಘವ ರಾಜ ಪ್ರಶಸ್ತಿ, ಸರ್ವ ಶ್ರೇಷ್ಠ ಕಲಾಭೂಷಣ ರಾಜ್ಯ ಪ್ರಶಸ್ತಿ, ಧ್ರುವ ಪ್ರಶಸ್ತಿ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ರಾಣಿ ಚೆನ್ನಮ್ಮ ಪ್ರಶಸ್ತಿ ಇನ್ನು ಸಾಕಷ್ಟು ಪ್ರಶಸ್ತಿಗಳು ಕೂಡ ದೊರೆಕಿವೆ. 

ಕೊಪ್ಪಳದಲ್ಲಿಯೂ ಕೂಡ ವರ್ಷದಂತೆ ಈ ವರ್ಷವೂ ಕೂಡ ತಮ್ಮ ಒಂದು ಸಂಗಮೇಶ್ವರ ನಾಟ್ಯ ಸಂಘದಲ್ಲಿ ಈ ವರ್ಷದ ನಾಟಕ ಹುಬ್ಬು ಹಾರಿಸಾಳ ಧೂಳ್ ಹೇಬ್ಬಿಸಾಳ ಎಂಬ ನಾಟಕವು ಕೂಡ ಜನರ ಬಾಯಿಯಲ್ಲಿ ಅತ್ಯುತ್ತಮ ನಾಟಕ ಎಂಬ ಹೆಸರು ಕೂಡ ಈ ಒಂದು ನಾಟಕಕ್ಕೆ ಬಂದಿದೆ. ಹಾಗೆ ಪ್ರೇಮ ಗುಳೇದಗುಡ್ಡವರು ನಾಟಕಕ್ಕೆ ಅಪಾರವಾದ ಕೊಡುಗೆಯನ್ನು ಕೂಡ ನೀಡಿದ್ದಾರೆ. ಅದಲ್ಲದೆ ನಾಟಕ ರಂಗದ ಒಳ್ಳೆಯ ಒಬ್ಬ ಶ್ರೇಷ್ಠ ಕಲಾವಿದೆ ಎಂದರೂ ಕೂಡ ತಪ್ಪಾಗಲಾರದು 

ಏಕೆಂದರೆ ಸಾಕಷ್ಟು ಪರಿಶ್ರಮದಿಂದ ನಾಟಕವನ್ನು ಕಟ್ಟಿಕೊಂಡು ತಮ್ಮ ಜೀವನವನ್ನೇ ನಾಟಕ ರಂಗದಲ್ಲಿ ಕಳೆದು ಬಿಟ್ಟಿದಾರೆ. ಪ್ರೇಮ ಗುಳೇದಗುಡ್ಡ ಅವರು. ಅವರ ಕಲರಂಗ ಸೇವೆ ಇನ್ನೂ ಎತ್ತರಕ್ಕೆ ಬೆಳೆಯಲಿ ಹಾಗೂ ಇವರಿಗೆ ಇನ್ನೂ ಅನೇಕ ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಲಿ.