January 31, 2026

ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿಗೆ ಹಂಪಾಪಟ್ಟಣದ ಜಿ ಶ್ರೀನಿವಾಸ ಆಯ್ಕೆ

ಜೂಡಿ ನ್ಯೂಸ್ :

ಆತ್ಮೀಯರೇ ನಾಳೆ ಬೆಳಿಗ್ಗೆ 10.30 ಕ್ಕೆ ಪ್ರಾರಂಭವಾಗುವ 29-01-26 ರಂದು ಹರಪನಹಳ್ಳಿ ತಾಲೂಕಿನ “ಮುತ್ತಿಗೆ” ಗ್ರಾಮದಲ್ಲಿ ಶ್ರೀ ಗುರು ಹಾಲಸ್ವಾಮಿ ಮಠ ಶ್ರೀ ಕ್ಷೇತ್ರ “ಮುತ್ತಿಗೆ” ಗ್ರಾಮದಲ್ಲಿ ಐದನೆಯ ವರ್ಷದ ಜಾತ್ರಾ ಮಹೋತ್ಸವದ ಮುಳ್ಳುಗದ್ದಿಗೆ ಅಂಗವಾಗಿ “7ನೇ ವರ್ಷದ ಸಾಂಸ್ಕೃತಿಕ ಕಲೋತ್ಸವ” ವನ್ನು ಕಲಾ ಭಾರತಿ ಕಲಾ ಸಂಘ ಹಿರೇ ಹೆಗ್ಡಾಳ್ ಶ್ರೀಯುತ “ಬಣಕಾರ್ ಮೂಗಪ್ಪ” ಅಧ್ಯಕ್ಷರು ರಂಗಭೂಮಿ ಕಲಾವಿದರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ “ಸಮಾಜ ಸೇವಾ ರತ್ನ ರಾಜ್ಯಪ್ರಶಸ್ತಿ”ಗೆ ಆಯ್ಕೆ ಮಾಡಿಕೊಂಡಿದ್ದು ಶ್ರೀಗಳ ಸಮ್ಮುಖದಲ್ಲಿ ಪ್ರಶಸ್ತಿ ಸ್ವೀಕರಿಸುವ ಅವಕಾಶ ನನಗೆ ದೊರೆತಿದ್ದು ಸಂತಸ ತಂದಿದೆ ಎಂದು ಶ್ರೀಮಾತಾ ಸೇವಾ ಟ್ರಸ್ಟ್ ಅಧ್ಯಕ್ಷರಾದ ಜಿ ಶ್ರೀನಿವಾಸ ಇವರು 12/04/2025 ರಲ್ಲಿ ಬೆಂಗಳೂರಿನ ಅರಮನೆಯ ಮೈದಾನದಲ್ಲಿ ಕರ್ನಾಟಕ ರಾಜ್ಯ ಛಾಯಾಚಿತ್ರ ಗ್ರಾಹಕರ ಸಂಘ ನೀಡುವ “ಛಾಯಾ ಶ್ರೀ” ಪ್ರಶಸ್ತಿ ಸ್ವೀಕರಿಸಿದ್ದು ಹಾಗೂ 29/01/2026 ರಂದು ಸಮಾಜ ಸೇವ ರತ್ನ ರಾಜ್ಯ ಪ್ರಶಸ್ತಿ ಸನ್ಮಾನ ಸ್ವೀಕರಿಸುವುದು ಎರಡು ಕೂಡ “ರಾಜ್ಯ ಪ್ರಶಸ್ತಿ” ಆಗಿರುವುದರಿಂದ ಸಂತೋಷಕರವೆನಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.*

*ಆಯೋಜಕರಾದ ಮೂಗಪ್ಪ ಬಣಕಾರ್ ರಂಗಭೂಮಿ ಕಲಾವಿದರು ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಇವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.*