ಜೂಡಿ ನ್ಯೂಸ್ :
ಹಂಪಾಪಟ್ಟಣ, ಮಾ 14: ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ತಂದೆ ತಾಯಿಯರ ಪಾತ್ರ” ಕುರಿತು ಪ್ರಬಂಧ ಸ್ಪರ್ಧೆಯಲ್ಲಿ 56 ವಿದ್ಯಾರ್ಥಿ ವಿದ್ಯಾರ್ಥಿನಿಯರು ದಿನಾಂಕ 09/03/2026 ನೇ ಸೋಮವಾರ ಪ್ರಬಂಧವನ್ನು ಬರೆದಿದ್ದು ಇದರಲ್ಲಿ ವಿಜೇತರಾದ ಒಂಬತ್ತು ಜನ ಮಕ್ಕಳಿಗೆ ಈ ದಿವಸ “ಗೌರವ ಸನ್ಮಾನ” ಮಾಡುವುದರ ಜೊತೆಗೆ ಇನ್ನು 47 ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ “ಅಭಿನಂದನಾಪತ್ರ”ವನ್ನು ಶ್ರೀ ಮಾತಾ ಸೇವಾ ಟ್ರಸ್ಟ್ ವತಿಯಿಂದ ನೀಡಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ ವೇದಿಕೆ ಮೇಲಿನ ಗಣ್ಯ ಮಾನ್ಯರಿಗೂ ಪ್ರೌಢಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರಿಗೂ ಗ್ರಾಮದ ಹಿತೈಷಿಗಳಿಗೂ ಶಿಕ್ಷಣ ಪ್ರೇಮಿಗಳಿಗೂ ಪಾಲಕ ಪೋಷಕರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಜಿ ಶ್ರೀನಿವಾಸ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಶ್ರೀಮಾತಾ ಸೇವಾ ಟ್ರಸ್ಟ್ ಹಂಪಾಪಟ್ಟಣ. ಪ್ರಬಂಧ ಸ್ಪರ್ಧೆಯ ವಿಜೇತರು.

8 ನೇ ತರಗತಿಯಿಂದ
*1) ಹೆಚ್ ಕೆ ಬಿಂದುಶ್ರೀ ಪ್ರಥಮ*
*2) ಎಸ್ ಪವಿತ್ರ ದ್ವಿತೀಯ*
*3) ಹೆಚ್ ಮಾನಸ ತೃತಿಯ*
9 ನೇ ತರಗತಿಯಿಂದ
*1) ಹೆಚ್ ಗಣೇಶಗೌಡ ಪ್ರಥಮ*
*2) ಬಿ ಅನುಷ ದ್ವಿತೀಯ*
*3) ಉಪ್ಪಾರ ಗಣೇಶ ತೃತೀಯ*
10 ನೇ ತರಗತಿಯಿಂದ
*1) ಹೆಚ್ ಮಾನಸ ಪ್ರಥಮ*
*2) ಎ ಪ್ರತಿಭಾ ದ್ವಿತೀಯ*
*3) ಹೆಚ್ ಪೂಜಾ ತೃತೀಯ.*

More Stories
ಹಂಪಾಪಟ್ಟಣ : ಶ್ರೀ ಚಂದ್ರಮೌಳೇಶ್ವರ ಪ್ರೌಢ ಶಾಲೆಯಲ್ಲಿ ಪ್ರಬಂಧ ಸ್ಪರ್ಧೆ.
ಬೇಸಿಗೆ ಬಂತು ಆರೋಗ್ಯದ ಮೇಲೆ ಇರಲಿ ವಿಶೇಷ ಕಾಳಜಿ
ಹರಪನಹಳ್ಳಿ: ಉಚಿತ ಸಾಮೂಹಿಕ ಉಪನಯನ ಕಾರ್ಯಕ್ರಮ ಯಶಸ್ವಿ