ಜೂಡಿ ನ್ಯೂಸ್ :
ಉತ್ತಮ ಜೀವನ ಶೈಲಿಯಿಂದ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ : ಮನೋವೈದ್ಯ ಡಾ. ಜಿ ಅನಿಲ್ ಕುಮಾರ್
ವಿಜಯನಗರ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ್,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ವಿಶ್ವ ಮಾನಸಿಕ ಆರೋಗ್ಯ ಕಾರ್ಯಕ್ರಮ, ಷಾ ಭವರ್ ಲಾಲ್ ಬಾಬುಲಾಲ್ ನಾಹರ್ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು…
ಪ್ರಸ್ತುತ ದಿನಮಾನಗಳಲ್ಲಿ ಆಧುನಿಕತೆಯ ಭರಾಟೆಯಿಂದಾಗಿ ಮಾನಸಿಕ ಆರೋಗ್ಯ ಕುಂಠಿತಗೊಳ್ಳುತ್ತಿರುವುದು ವಿಷಾದ ಸಂಗತಿಯಾಗಿದೆ, ಪ್ರತಿನಿತ್ಯ ಯೋಗ ಧ್ಯಾನ ಉತ್ತಮ ವಿಚಾರಗಳ ಮೂಲಕ ದೈಹಿಕ ಪರಿಶ್ರಮದ ಮೂಲಕ ನಮ್ಮ ಆರೋಗ್ಯವನ್ನು ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಬೇಕೆಂದು ಸಾಮಾಜಿಕವಾಗಿ ಮಾನಸಿಕವಾಗಿ ದೈಹಿಕವಾಗಿ ವೈಯಕ್ತಿಕವಾಗಿ ಮಾನಸಿಕ ಆರೋಗ್ಯದ ಸವಾಲುಗಳು ಮತ್ತು ಪರಿಹಾರಗಳ ಬಗ್ಗೆ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು…
ಹಾಗೆಯೇ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಶಿವನಗೌಡ ಸಾತ್ಮಾರ ರವರು ಪ್ರಸ್ತುತ ದಿನಮಾನಗಳಲ್ಲಿ ಮಾನಸಿಕ ಅನಾರೋಗ್ಯದಿಂದ ವಿದ್ಯಾರ್ಥಿ ಯುವ ಸಮೂಹ ಹಲವಾರು ದುಶ್ಚಟ ದುರಾಚಾರಗಳಿಗೆ ಬಲಿಯಾಗುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ, ಪರಸ್ಪರರು ಸಾಮಾಜಿಕ ಗುಣಗಳಿಂದ ನಮ್ಮಲ್ಲಿರುವ ಸಮಸ್ಯೆಗಳನ್ನು ಆಪ್ತರ ಬಳಿ ಹಂಚಿಕೊಳ್ಳುವ ಮೂಲಕ ನಮ್ಮ ಸಮಸ್ಯೆಗಳಿಗೆ ನಾವು ಪರಿಹಾರ ಕಂಡುಕೊಳ್ಳಬೇಕೆಂದು.. ಈ ದಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳಿಗೆ ಉಪಯೋಗವಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ರೋಟರಿ ಹಂಪಿ ಪಲರ್ಸ್ ಕಾರ್ಯದರ್ಶಿಗಳಾದ ಅನ್ನಪೂರ್ಣ ಸದಾಶಿವ, ದೀಪ ಅಗ್ರವಾಲ್ , ಹಾಗೆ ಕಾಲೇಜಿನ ಆಯ್ಕೆ ಐ ಕ್ಯೂ ಎ ಸಿ ಸಂಯೋಜಕರಾದ ಡಾ: ಜಗದೀಶ್ ಹಿರೇಮಠ್, ವಿದ್ಯಾರ್ಥಿ ಸಂಘದ ಸಂಚಾಲಕರಾದ, ಡಾ: ಸಿದ್ದಲಿಂಗ ಸ್ವಾಮಿ, ಡಾ: ಪಾರ್ವತಿ ಕೆಎಂ. ಬಿದರಕುಂದಿ ಮಲ್ಲಿಕಾರ್ಜುನ ವಿಶ್ವ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸದಸ್ಯರಾದ ಜಿ ಮಾರೆಪ್ಪನವರು ಪ್ರಾಸ್ತಾವಿಕ ನುಡಿ, ಕೆ ಕಾವ್ಯ ರವರು ಸ್ವಾಗತ, ವಂದನಾರ್ಪಣೆ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿ ರೇಷ್ಮಾ, ಕಾರ್ಯಕ್ರಮದ ನಿರೂಪಣೆಯನ್ನು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿ ನಾಗರಾಜ್ ಗಂಟಿ ನೆರವೇರಿಸಿದರು..

More Stories
ಹಂಪಾಪಟ್ಟಣದಲ್ಲಿ ವಿಶ್ವ ಜಲ ದಿನಾಚರಣೆ ಅಂಗವಾಗಿ ನೀರಿನ ಅರವಟ್ಟಿಗೆ ಪ್ರಾರಂಭ
12ನೇ ಶತಮಾನದ ಶಿವಶರಣೆಯರು ಸ್ವಾಭಿಮಾನದ ಸಂಕೇತ :ಡಾ. ಟಿ ಹೆಚ್ ಬಸವರಾಜ್
ಎಡದಂಡೆ ಮುಖ್ಯ ಕಾಲುವೆ ಒಡೆದು ಬೆಳೆ ಹಾನಿ : ಬಿಜೆಪಿ ಪ್ರತಿಭಟನೆ