February 5, 2026

ಮಡಿವಾಳ ಮಾಚಯ್ಯ ಜಯಂತಿ ಆಚರಣೆ: ಜೀವನ ಮೌಲ್ಯಗಳು ಸಮಾಜಕ್ಕೆ ದಾರಿದೀಪ – ಎಚ್. ಭೀಮಪ್ಪ

ಜೂಡಿ ನ್ಯೂಸ್ :

ಹಂಪಾಪಟ್ಟಣ: ಸ್ಥಳೀಯ ಮಡಿವಾಳ ಮಾಚಯ್ಯ ಸಮಾಜದ ವತಿಯಿಂದ ಗ್ರಾಮದ ಮಡಿವಾಳರ ಓಣಿಯಲ್ಲಿ 12ನೇ ಶತಮಾನದ ಶರಣ ಮಡಿವಾಳ ಮಾಚಯ್ಯನವರ ಜಯಂತಿಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗ್ರಾಮದ ಹಿರಿಯ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎಚ್. ಭೀಮಪ್ಪ ಅವರು,

“ಶರಣ ಮಡಿವಾಳ ಮಾಚಯ್ಯನವರ ಕಾಯಕ ನಿಷ್ಠೆ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿವೆ. ಕಾಯಕವೇ ಕೈಲಾಸ ಎಂಬ ತತ್ತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸುತ್ತದೆ,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಜಿ. ತಿಮ್ಮಣ್ಣ, ತಳವಾರ ಹುಲುಗಪ್ಪ, ಶಿವ ನಾಗಪ್ಪ, ಕೆ. ನಾಗಪ್ಪ , ಡಿ. ಹನುಮಂತಪ್ಪ ಕೆ ಹುಲುಗಪ್ಪ ಉಪಸ್ಥಿತರಿದ್ದರು.

ಮಡಿವಾಳ ಸಮಾಜದ ಮುಖಂಡರಾದ ಮಡಿವಾಳ ಗ್ರಾಮ ಘಟಕ ಹಂಪಾಪಟ್ಟಣ.ಸಂಘದ ಅಧ್ಯಕ್ಷರು ಮಡಿವಾಳರ ರಾಮಪ್ಪ, ಗ್ರಾಮ ಘಟಕದ ಉಪಾಧ್ಯಕ್ಷ ಕಾಳಪ್ಪ.ಮಹಾಂತೇಶ ಎಂ . ನಾಗರಾಜ ಎಂ. ಲಕ್ಷ್ಮಣ ಎಂ , ಶ್ರೀಧರ್ ಎಂ , ದುರುಗಪ್ಪ ಎಂ, ಶ್ರೀನಿವಾಸ್ ಮೂರ್ತಿ ಎಂ , ಮಡಿವಾಳ ಯಮನಪ್ಪ , ಮಾರುತಿ ಎಂ. ಎಂ ಶಿವಣ್ಣ,. ಕೃಷ್ಣ ಹಾಗೂ ಮಡಿವಾಳ ಮಾಚಯ್ಯ ಸಂಘದ ತಾಲೂಕು ಅಧ್ಯಕ್ಷ ರಾಮಣ್ಣ, ಕಾರ್ಯದರ್ಶಿ ಪ್ರಕಾಶ್ ಮತ್ತು ಶ್ರೀನಿವಾಸ್, ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಎನ್. ನಾಗರಾಜ್, ಟಿ. ಮಂಜುನಾಥ, ಯುವ ಮುಖಂಡ ಟಿ. ಕೊಟ್ರೇಶ್ ಸೇರಿದಂತೆ ಸಮಾಜದ ಅನೇಕ ಗಣ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡು ಇದೇ ಸಂದರ್ಭದಲ್ಲಿ ಹಂಪಾಪಟ್ಟಣ ವಿವಿಧ ಸಮಾಜ ಮುಖಂಡರಿಗೆ ಮಡಿವಾಳ ಸಮಾಜ ವತಿಯಿಂದ ಸನ್ಮಾನ ಮಾಡಲಾಯಿತುಮಡಿವಾಳ ಮಾಚಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಕಾರ್ಯಕ್ರಮವು ಭಕ್ತಿಗೀತೆಗಳು ಮತ್ತು ಶರಣರ ತತ್ತ್ವ ಸಂದೇಶಗಳೊಂದಿಗೆ ಭಕ್ತಿಭಾವದಿಂದ ನಡೆಯಿತು.