ಜೂಡಿ ನ್ಯೂಸ್ :
ಕೊಪ್ಪಳ : ಸುರ್ವೆ ಕಲ್ಚರಲ್ ಅಕಾಡೆಮೆ (ರಿ) ವತಿಯಿಂದ ಬೆಂಗಳೂರಿನ ನಯನ ಸಭಾಂಗಣದಲ್ಲಿ ದಿನಾಂಕ ೨೭ ರಂದು ಅಖಿಲ ಭಾರತ ಕನ್ನಡ ಕವಿಗಳ ಸಮ್ಮೇಳನ, ಕರ್ನಾಟಕ ಸಾಂಸ್ಕೃತಿಕ ಪರಂಪರೆಗೆ ಕನ್ನಡದ ಮಹಾಕಾವ್ಯಗಳ ಕೊಡುಗೆ ವಿಚಾರ ಸಂಕಿರಣ, ಅಖಿಲ ಭಾರತ ಕನ್ನಡ ಕವಿಗಳ ಕಾವ್ಯ ಪರಿಷತ್ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಂದು ಭಾರತದ ಮಾಜಿ ಪ್ರಧಾನ ಮಂತ್ರಿ ಮನಮೋಹನ ಸಿಂಗ್ ನಿಧನದಿಂದ ಶೋಕಾಚರಣೆ ಕಾರಣ ದಿಂದ ಕಾರ್ಯಕ್ರಮವನ್ನು ರದ್ದುಪಡಿಸಲಾಗಿತ್ತು.
ಸುರ್ವೆ ಕಲ್ಚರಲ್ ಅಕಾಡೆಮಿ ವತಿಯಿಂದ ಇಂದು ಕೊಪ್ಪಳದಲ್ಲಿ ಛಾಯಾಗ್ರಾಹಕ ಉಮೇಶ ಪೂಜಾರಗೆ `ಕರ್ನಾಟಕ ವಿಭೂಷಣ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷರಾದ ರಮೇಶ ಸುರ್ವೆ, ಅಖಿಲ ಭಾರತ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷರಾದ ಜಿ.ಎಸ್.ಗೋನಾಳ ಪತ್ರಕರ್ತರಾದ ಶಿವರಾಜ ನುಗುಡೋಣಿ, ಫಕೀರಪ್, ಪ್ರಭು ಗಾಳಿ, ತಾಜ್‌ಪಾಶಾ ಉಪಸ್ಥಿತರಿದ್ದರು.

More Stories
ಮಹಿಳೆ ಕೇವಲ ಗೃಹಿಣಿ ಅಲ್ಲ, ಸಮಾಜದ ನಿರ್ಮಾತೃ, ಮಾರ್ಗದರ್ಶಕಿ : ಡಾ. ಅನುಸೂಯ ಅಂಗಡಿ
ಹಂಪಾಪಟ್ಟಣದಲ್ಲಿ ವಿಶ್ವ ಜಲ ದಿನಾಚರಣೆ ಅಂಗವಾಗಿ ನೀರಿನ ಅರವಟ್ಟಿಗೆ ಪ್ರಾರಂಭ
12ನೇ ಶತಮಾನದ ಶಿವಶರಣೆಯರು ಸ್ವಾಭಿಮಾನದ ಸಂಕೇತ :ಡಾ. ಟಿ ಹೆಚ್ ಬಸವರಾಜ್