ಜೂಡಿ ನ್ಯೂಸ್ :
ಗಂಗಾವತಿ: ಶ್ರೀ ದ್ಯಾಮವ್ವ ದೇವಿ ಹಾಗು ವೆಂಕಲಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಹೆಬ್ಬಾಳ ಗ್ರಾಮದಲ್ಲಿ ಇಂದು ಡಿ.೩೦ ಸೋಮವಾರ ರಾತ್ರಿ ೮.೩೦ ರಿಂದ ಅಹೋರಾತ್ರಿ ಶ್ರೀ ರೇಣುಕಾ ಜಮದಾಗ್ನಿ ಕಲ್ಯಾಣ ಅರ್ಥತ್ ಕಾರ್ತ್ಯ ವೀರಾರ್ಜುನ ವಧೆ ಬಯಲಾಟ ಪ್ರದರ್ಶನಗೊಳ್ಳಲಿದೆ.
ನಿಜ ಶರಣ ಅಂಬಿಗರ ಚೌಡಯ್ಯ ಬಯಲಾಟ (ದೊಡ್ಡಾಟ) ಟ್ರಸ್ಟ್ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪ್ರಮುಖ ಪಾತ್ರಗಳಲ್ಲಿ ಯಮನೂರಪ್ಪ ವಕೀಲರು, ಭರಮಪ್ಪ ಭುನಳ್ಳಿ, ಮೌಲಪ್ಪ ಕನಕಗಿರಿ, ಗಂಗಪ್ಪ ಸಂತAಗಿ, ಹನುಮಂತಪ್ಪ ಪತಂಗಿ, ಪ್ರದೀಪ್, ಸತೀಶ್ ನಾಗೇನಹಳ್ಳಿ, ದೇವೆಂದ್ರ ಪೂಜಾರ್, ತಿಮ್ಮಪ್ಪ ಸಿಂಗ್ರಿ, ಮಲ್ಲಿಕಾರ್ಜುನ ಬಿಸೆಟ್ಟಿ, ರಾಜು ಆಗೋಲಿ, ಚಾಮುಂಡಿ ಎಳ್ಳಾರ್ಥಿ, ಸುಜಾತ ವಿರುಪಾಪುರ, ಬ್ಲಾಕ್ ಸುಮ ಇವರು ನಟಿಸಲಿದ್ದಾರೆ. ಜೆ.ಶಿವಲಿಂಗಯ್ಯಸ್ವಾಮಿ ನಾರಾಯಣಪುರ ಇವರ ನಿರ್ದೇಶನವಿದ್ದು, ಎಮ್ಮಿಗನೂರು ಎಸ್. ಬಸಪ್ಪ ಇವರು ರಂಗಸಜ್ಜಿಕೆ ನಿರ್ವಹಿಸುತ್ತಿದ್ದಾರೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಆಗಮಿಸಿ ಪ್ರೋತ್ಸಾಹಿಸಲು ಸಂಘಟಕರು ಕೋರಿದ್ದಾರೆ.
More Stories
ಗ್ರಾಮ ಪಂಚಾಯತಿ ಸದಸ್ಯನ ಸಂಭಾವನೆಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ…
ಮಠ-ಮಂದಿರಗಳಿಗೆ ಮಂಜೂರಾದ ಅನುದಾನ ಬಿಡುಗಡೆಗೆ 25% ಕಮೀಷನ್: ಜಿ. ಜನಾರ್ಧನ ರೆಡ್ಡಿ ಗಂಭೀರ ಆರೋಪ
ಹಂಪಾಪಟ್ಟಣದಲ್ಲಿ ಮೊಹರಂ ವಿಶೇಷ ಆಚರಣೆ