July 12, 2025

ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸದೆ ಮನೆಯಲ್ಲಿಯೇ ದೇವರಂತೆ ನೋಡಿಕೊಳ್ಳಿ: ಶ್ರೀಮತಿ ಬಿ. ಭುವನಶ್ರೀ  

ಜೂಡಿ ನ್ಯೂಸ್ :

 ಹಗರಿಬೊಮ್ಮನಹಳ್ಳಿ,( ಹಂಪಾಪಟ್ಟಣ ) ಜ. 24 : ಶ್ರೀ ಮಾತಾ ಸೇವಾ ಟ್ರಸ್ಟ್ 2ನೇ ವರ್ಷದ ವಾರ್ಷಿಕೋತ್ಸವ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಸೇವಾ ಸಾಧಕರಿಗೆ ಶ್ರೀ ಮಾತಾಸೇವಾ ರತ್ನ-2025 ಪ್ರಶಸ್ತಿ ಸಮಾರಂಭವನ್ನು 24,01,25 ನೇ ಶುಕ್ರವಾರ ದಿವಸ ಹಂಪಾಪಟ್ಟಣದ ನಗರೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 11ಗಂಟೆಗೆ ಸಾಧಕರ ಮನಮುಟ್ಟುವಂತಹ ಕೆಲಸ ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಬಿ ಭುವನಶ್ರೀ” ವಿಜಯನಗರ ನ್ಯೂಸ್ ಚಾನಲ್ ನ ನ್ಯೂಸ್ ರೀಡರ್ ಇವರು ಉದ್ಘಾಟಿಸಿ ಉದ್ಘಾಟನೆ ನುಡಿಯನ್ನು ನುಡಿದರು ಸಮಾಜದಲ್ಲಿ ತಂದೆ ತಾಯಿಯ ಸೇವೆ ಅನನ್ಯ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸದೆ ಮನೆಯಲ್ಲಿಯೇ ದೇವರಂತೆ ನೋಡಿಕೊಳ್ಳಿ ಹಾಗೂ ಪೂಜಿಸಿ ಎಂದು ಹೇಳಿದರು.

ಆಶಯ ನುಡಿಯನ್ನು ನೆರಳು ಪತ್ರಿಕೆಯ ಬುಡ್ಡಿ ಬಸವರಾಜ್ ಅವರು ಮಾತನಾಡಿ ಸಂವಿಧಾನ ಕೊಟ್ಟಂತಹ ಅಂಬೇಡ್ಕರ್ ರನ್ನು ಸಮಾನತೆಗೆ ಬುದ್ಧನನ್ನು ಗೌರವಿಸಿ ಪೂಜಿಸಿದಂತೆ ವೇದಿಕೆ ಮೇಲೆ ಆಸೀನರಾದ 8 ಜನ ಸಾಧನೆ ಮಾಡಿದ ಸನ್ಮಾನಿತರನ್ನು ಗೌರವಿಸಲೇಬೇಕು ಆಗ ಜೀವನ ಯಶಸ್ಸಿಗೆ ಕಾರಣವಾಗುತ್ತದೆ. ಇಂತಹ ಸನ್ಮಾನಿತರನ್ನು ಶ್ರೀನಿವಾಸನು ಗುರುತಿಸಿ ವೇದಿಕೆಗೆ ಕರೆ ತಂದಿದ್ದು ನಮ್ಮ ನಿಮ್ಮೆಲ್ಲರ ಭಾಗ್ಯ ಎಂದರು.

ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ಕೈಜೋಡಿಸುವ ಶಕ್ತಿ ಶ್ರೀನಿವಾಸನ ಧರ್ಮಪತ್ನಿ ಸವಿತಾಗೆ ಸಲ್ಲುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಶ್ರೀ ಮಾತಾ ಸೇವಾ ರತ್ನ ಪ್ರಶಸ್ತಿ -2025 ನೀಡಿ ಗೌರವಿಸಲಾಯಿತು 

ರಾಘವೇಂದ್ರ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಹಗರಿಬೊಮ್ಮನಹಳ್ಳಿ ಇವರು ಮಾತನಾಡಿ ದುಷ್ಟ ಪ್ರಪಂಚದಲ್ಲಿ ಸದ್ಗುಣ ಬೆಳೆಸಿಕೊಳ್ಳುವ ಅವಶ್ಯಕತೆ ಸಾಕಷ್ಟಿದೆ ಪ್ರಪಂಚದಲ್ಲಿ ಏನಾದರೂ ಕೊಂಡುಕೊಳ್ಳಬಹುದು ಆದರೆ ತಾಯಿ ಎನ್ನುವ ಎರಡಕ್ಷರಕ್ಕೆ ಬಹಳ ಮಹತ್ವವಿದೆ ಎಂದು ಹೇಳಿದರು.

ಸಂಗೀತ ಶಿಕ್ಷಕಿಯಾದ ಸುರೇಖ ಹಗರಿಬೊಮ್ಮನಹಳ್ಳಿ ಇವರು ಸಂಗೀತದ ರಸದೌತಣವನ್ನೇ ಉಣಬಡಿಸಿದರು.

ಸಾಹಿತ್ಯ ರಚನೆಗಾರರಾದ ಹಾಗೂ ಪತ್ರಕರ್ತರಾದ ಸುಭಾಷ್ ಚಂದ್ರ ಹೊಳಲು ಹಡಗಲಿ ತಾಲೂಕು ಇವರು ಕೂಡ ಮಾತನಾಡಿ ವೇದಿಕೆಯಲ್ಲಿಯೇ ವಿಶೇಷ ವೇದಿಕೆ ಇದಾಗಿದ್ದು ಶ್ರೀನಿವಾಸನ ನಿಷ್ಕಲ್ಮಶ ಸೇವೆಗೆ ನಾನು ಭಾವುಕನಾದೆ. ನಾನು ಸಾಕಷ್ಟು ಕಡೆ ಪ್ರಶಸ್ತಿ ಪಡೆದರು ಸಹಿತ ವಿಶೇಷವಾಗಿ 2025ನೇ ಶ್ರೀ ಮಾತಾ ಸೇವಾ ರತ್ನ ಪ್ರಶಸ್ತಿ ವಿಭಿನ್ನವಾಗಿದೆ ಎಂದು ಹರ್ಷೋದ್ಗಾರವನ್ನು ವ್ಯಕ್ತಪಡಿಸಿದರು.

ವಿ ಅನುರಾಧ ಸುಗಮ ಸಂಗೀತಗಾರರು ಇವರು ಕೂಡ ವೇದಿಕೆಯನ್ನು ಹಂಚಿಕೊಂಡು ಮೊದಲ ಪರಿಚಯವಾಗಿ ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು ಎನ್ನುವ ಗೀತೆಯನ್ನು ಹೇಳುವಾಗ ಒಂದು ಕ್ಷಣ ನನ್ನನ್ನು ನಾನೇ ಮರೆತೆ ನನ್ನ ಕಣ್ಣಲ್ಲಿ ದುಃಖವೇ ಆವರಿಸಿತು.

 ಶ್ರೀನಿವಾಸ ನಿನ್ನ ಉತ್ತಮ ಸೇವೆ ಅನನ್ಯ ಇಂತಹ ವೇದಿಕೆ ಸಿಕ್ಕಿದ್ದು ನನ್ನ ಭಾಗ್ಯ ಎಂದು ಹಾರೈಸಿ ಶ್ರೀನಿವಾಸ ಸರ್ ನನ್ನದೊಂದು ಚಿಕ್ಕ ಮನವಿ ಇದೆ ಅದು ನಿನ್ನಿಂದ ಸಾಧ್ಯ ನಡೆಸಿಕೊಡು ಎಂದು ಕೇಳಿದರು ಆ ಒಂದು ಚಿಕ್ಕ ಮನವಿಯೇ ವೃದ್ಧಾಶ್ರಮ ಸ್ಥಾಪಿಸುವುದು ಎಂದರು. ಆಗ ಶ್ರೀನಿವಾಸನು ಅನುರಾಧ ಮೇಡಮ್ ಅವರೇ ಜನಸಾಮಾನ್ಯರು ತಂದೆ ತಾಯಿಯನ್ನು ಸಾಕಿ ಸಲಹಲು ಆರು ತಿಂಗಳ ವರ್ಷ ಹಂಚಿಕೊಳ್ಳುವ ದಿನಮಾನಗಳಲ್ಲಿ ವೃದ್ಧಾಶ್ರಮ ತೆರೆದರೆ ಸಾಕಷ್ಟು ಮಕ್ಕಳು ವೃದ್ಧಾಶ್ರಮ ಸೇರಿಸಿಬಿಡುತ್ತಾರೆ ಹೀಗಾಗಿ ಅದರ ಬದಲಾಗಿ ತಾವುಗಳೆಲ್ಲರೂ ಇಂತಹ ಕಾರ್ಯಕ್ಕೆ ಕೈಜೋಡಿಸಿದರೆ ಮುಂದಿನ ದಿನಮಾನಗಳಲ್ಲಿ ಅವಕಾಶ ದೊರೆತರೆ ಅನಾಥಾಶ್ರಮ ತೆರೆದು ಅನಾಥರಿಗೆ ಬೆಳಕು ಕೊಡುವ ಕೆಲಸ ಶ್ರೀ ಮಾತಾ ಸೇವಾ ಟ್ರಸ್ಟಿನದಾಗಲಿ ಎಂದರು.

ಹಾಗೆ ವಿಪ್ರಾಕೃಷಿ ಗ್ರಾಮೀಣ ಸಹಕಾರ ಸಂಘ ನಿರ್ದೇಶಕ ಸತೀಶ್ ಮಗಿಮಾವಿನಹಳ್ಳಿ ಇವರು ಕೂಡ ಮಾತನಾಡಿ ಇಂತಹ ವೇದಿಕೆಯಲ್ಲಿ ತಂದೆ ತಾಯಿಯ ಮಹತ್ವ ತಿಳಿದುಕೊಳ್ಳಲು ಆಗಮಿಸಿದ್ದು ಈ ವೇದಿಕೆಯೇ ಸಾಕ್ಷಿಯಾಗಿತ್ತು.

ಹಾಗೂ ನಿಷ್ಕಲ್ಮಶದಿಂದ ಸೇವೆ ಮಾಡುತ್ತಿರುವ ಸಹೋದರ ಶ್ರೀನಿವಾಸನಿಗೆ ನನ್ನದೊಂದು ಸಲಾಂ ಎಂದರು.

ಕುಂಬಾರ ರವಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಸನ್ಮಾನಿತರು ಕೂಡ್ಲಿಗಿ ಇವರು ಕೂಡ ಇಂತಹ ತಾಯಿಯ ವೇದಿಕೆ ನನಗೆ ಸಿಕ್ಕಿದ್ದು ನನ್ನ ಭಾಗ್ಯ ಎಂದು ಕೆಲವು ತಾವೇ ಸ್ವತಹ ರಚಿಸಿದ ಕವನಗಳನ್ನು ಹಂಚಿಕೊಂಡರು.

ವೇದಿಕೆ ಕಾರ್ಯಕ್ರಮದಲ್ಲಿ ಭಜನಾ ತಂಡದವರಿಗೆ ಅಂಗನವಾಡಿ ಆಶಾ ಕಾರ್ಯಕರ್ತೆಯರಿಗೆ ಕೋಲಾಟ ಹಾಗೂ ಕುದುರೆ ತಂಡದವರಿಗೆ ಹಾಗೂ ಗೊಂದಲಿ ರಾಮಣ್ಣನವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಸನ್ಮಾನಿತರಲ್ಲಿ ಒಂದನೇ ತರಗತಿ ವಿದ್ಯಾರ್ಥಿನಿ ಪ್ರಸಿದ್ಧಿ ಶಾಲೆಯ ಹೆಚ್ ಶ್ರೀರಕ್ಷ ಕರಾಟೆಯಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು ವೇದಿಕೆ ಮೇಲೆ ಸನ್ಮಾನಿಸುವಾಗ ಎಲ್ಲರ ದೃಷ್ಟಿಯೇ ಆ ಮಗುವಿಗೆ ತಾಗುವಂತಿತ್ತು.

ಕಾರ್ಯಕ್ರಮದಲ್ಲಿ ಮಾತಾ ಸೇವಾ ಟ್ರಸ್ಟ್ ಉಪಾಧ್ಯಕ್ಷರಾದ ಜಿ ವೆಂಕಣ್ಣ, ಸತ್ಯನಾರಾಯಣ, ಜಿ ಸರಸ್ವತಿ ಗ್ರಾಮ ಪಂಚಾಯಿತಿ ಅಧ್ಯಕ್ಕ್ಷೆ ಉಪ್ಪಾರ್ ಹುಲಿಗೆಮ್ಮ, ಟಿ ಮಹೇಂದ್ರ, ಪಿ ಗುರುರಾಜ್, ಅಂಬಳಿಸಂಗೀತ, ಕಾತ್ರಿಕಿ ಶ್ರೀನಿವಾಸ, ಮಾನ್ವಿಬ್ಯಾಂಕ್ ನ ದೇವಿ ಪ್ರಸಾದ್ ಸುಮಾ, ಪದ್ಮ, ಮ್ಯಾಗಳಮನಿ ಉಪ್ಪಾರ್ ಕನಕಪ್ಪ, ವೀರೇಶ್ ಪಾನಗಂಟಿ,ಪ್ರಸಿದ್ಧ ಶಾಲೆಯ ಶಿಕ್ಷಕರಾದ ನಾಗರಾಜ್ ಅಲಬೂರು, ಜಿ ಪ್ರಶಾಂತ್, ಗೊಂದಲಿ ಫಕೀರೇಶ್, ವೆಂಕಟಾಚಲಪತಿ, ಕೆ,ಮಲ್ಲಿಕಾರ್ಜುನ ರಾಕೇಶ್ ನಿವೃತ್ತ ಯೋಧರಾದ, ಶಿವಾನಂದ ಬೇವೂರ್, ಅನಿತಾ ಆನೆಗುಂದಿ ಗೊಂದಳಿ ರವಿ ಅನ್ನಪೂರ್ಣ ದಾವಣಗೆರೆ ಟಿ ಸುನಿಲ್ಉ, ಭೋವಿ ಗೋವಿಂದಪ್ಪ ಸೇರಿದಂತೆ ಇನ್ನಿತರರು ಪಸ್ಥಿತರಿದ್ದರು

ಸ್ವಾಗತವನ್ನು ಶ್ರೀನಾಥ್ ಪ್ರಾರ್ಥನೆಯನ್ನು ಮಾಧವಿ ಚಿದ್ರಿ ಹಾಗೂ ಸಂಗಡಿಗರು ಹಗರಿಬೊಮ್ಮನಹಳ್ಳಿ, ನಿರೂಪಣೆಯನ್ನು ಬಾರಿಕರ ಹುಲುಗಪ್ಪ ನಿರ್ವಹಿಸಿದರೆ ನಾಗರಾಜ್ ಘಂಟಿಯವರು ವಂದರ್ನಾರ್ಪಣೆಯನ್ನು ಮಾಡಿದರು.