July 12, 2025

ಗ್ರಾಹಕರನ್ನು ಗೌರವಿಸುವುದು ನಮ್ಮ ಸಂಸ್ಥೆಯ ಉದ್ದೇಶ : ಬಿ. ರಾಜಶೇಖರ 

ಜೂಡಿ ನ್ಯೂಸ್ :

ಮರಿಯಮ್ಮನಹಳ್ಳಿ: ನಮ್ಮಬ್ಯಾಂಕಿನ ಗ್ರಾಹಕರು,ಆಡಳಿತಮಂಡಳಿ ಹಾಗು ಸಿಬ್ಬಂದಿಗಳಷ್ಟೆ ಸಮಾನರು ಮೊದಲು ಗ್ರಾಹಕರನ್ನು ಗೌರವಿಸುವುದು ನಂತರ ವ್ಯವಹರಿಸುವುದು ನಮ್ಮ ಸಂಸ್ಥೆಯ ಉದ್ದೇಶ ಎಂದು ಸಿಂಧು ಕ್ರೆಡಿಟ್ ಸೌಹಾರ್ದ ಸಹಕಾರಿಸಂಘದ ಅಧ್ಯಕ್ಷ ಬಿ.ರಾಜಶೇಖರ ತಿಳಿಸಿದರು.


ಅವರು ಪಟ್ಟಣದ ಸಂಸ್ಥೆಯ,4ನೇವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ,ಸುದ್ದಿಗಾರರೊಂದಿಗೆ ಮಾತನಾಡಿದರು.ನಮ್ಮ ಸಂಸ್ಥೆಯು ಆರಂಭಗೊಂಡು 13ವರ್ಷದಲ್ಲಿ 3ಜಿಲ್ಲೆಗಳಲ್ಲಿ 6ಶಾಖೆಗಳನ್ನು ಆರಂಭಿಸಿದೆ,ಮರಿಯಮ್ಮನಹಳ್ಳಿ ಶಾಖೆ ಆರಂಭಗೊಂಡು 4 ವರ್ಷಗಳಾಗಿದೆ.ಈವರೆಗೂ 1 ಸಾವಿರಗ್ರಾಹಕರಿಗೆ ಸುಮಾರು 7-8ಕೋಟಿರೂ.ಸಾಲ ನೀಡಲಾಗಿ,ಸುಮಾರು 10 ಕೋಟಿರೂ.ಗಳಷ್ಟು ಠೇವಣಿಸಂಗ್ರಹಿಸಲಾಗಿದೆ ಎಂದು ಮಾಹಿತಿನೀಡಿದರು.

ಗ್ರಾಮೀಣ ಪ್ರದೇಶದಲ್ಲಿ ಸೇವೆ ನೀಡುವುದು ನಮ್ಮಸಂಸ್ಥೆಯ ಉದ್ದೇಶವಾಗಿದೆಂದ ಅವರು,ನಮ್ಮ ಸಂಸ್ಥೆಯಿಂದ ಸಾಲಸುರಕ್ಷಯೋಜನೆ,ಅಂತ್ಯೊದಯ,ಉಳಿತಾಯ ವಿಮಾಯೋಜನೆಗಳಿಗಾಗಿ 25ಲಕ್ಷರೂ.ಗಳನ್ನು ಮೀಸಲಿರಿಸಲಾಗಿದ್ದು,ಇದರಿಂದ ನಮ್ಮ ಗ್ರಾಹಕರಿಗೆ ಮೃತವೇಳೆ,ಅಂತ್ಯಸಂಸ್ಕಾರಕ್ಕೆ,ನಮ್ಮ ಗ್ರಾಹಕನ ಅಕಾಲಿಕ ಮೃತರಾದವರಿಗೆ ನೀಡಲಾಗುವುದೆಂದರು.ಈ ಸಂಧರ್ಭದಲ್ಲಿ
ಉಪಾಧ್ಯಕ್ಷ ಅಮರೇಶಹಟ್ಟಿ,ನಿರ್ದೇಶಕರಾದ
ವಿಜಯಕುಮಾರ,ಬಸವರಾಜ ಬಂಗಾರಶೆಟ್ಟರ್,ಆನಂದಕುಮಾರ ಕೊಂಡ  ದುರಗಪ್ಪಕಟಾಲಿ,ಶಂಕರಗೌಡ ,ಪಿ.ಶಾರದಾ,ಮುಖ್ಯ ಕಾರ್ಯನಿರ್ವಾಹಕ ಮರಿಸ್ವಾಮಿ,ಪಟ್ಟಣಶಾಖೆಯ ವ್ಯವಸ್ಥಾಪಕಿ ಸುಮಲತ ಸೇರಿದಂತೆ ಇತರರಿದ್ದರು.
“ಚೆಕ್ ವಿತರಣೆ”
ಇದೇ ಸಂಧರ್ಭದಲ್ಲಿ ಬ್ಯಾಂಕಿನಗ್ರಾಹಕ ಮೃತ ಕೆ.ಮರ್ದಾನ್ ವಲಿ ಇವರ ವಾರಸುದಾರ ಮಾಬುನ್ನಿಬೇಗಂರವರಿಗೆ  ಸದಸ್ಯರ ಸಾಲ ಸುರಕ್ಷಾ ಯೋಜನೆ 50ಸಾವಿರೂ.
ಮತ್ತು ಸದಸ್ಯರ ಅಂತ್ಯೋದಯ ನಿಧಿ ಯೋಜನೆಅಡಿಯಲ್ಲಿ 25ಸಾವಿರ ರೂ.ಗಳ ಚೆಕ್ ನೀಡಲಾಯಿತು.