ಜೂಡಿ ನ್ಯೂಸ್ :
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ವರಕನಹಳ್ಳಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 2024 25 ನೇ ಸಾಲಿನ ವಿದ್ಯಾರ್ಥಿನಿಯರ ಬಿಳ್ಕೊಡುಗೆ ಸಮಾರಂಭದಲ್ಲಿ ಉಪನ್ಯಾಸ ನೀಡಿ ಸುಡುಗಾಡು ಸಿದ್ದ ಜಾನಪದ ಕೈಚಳಕದ ಮೂಲಕ ವಿದ್ಯಾರ್ಥಿಗಳ ಭಯವನ್ನು ಹೋಗಲಾಡಿಸಿ, ವಿದ್ಯಾರ್ಥಿಗಳಿಗೆ ಧೈರ್ಯ ಆತ್ಮಸ್ಥೈರ್ಯ ತುಂಬಿದರು…
ಯುವ ಜಾನಪದ ನಾಗರಾಜ್ ಗಂಟಿ ಸುಡುಗಾಡು ಎಂಬ ಶಬ್ದ ಕೇಳಿದರೆ ಪ್ರತಿಯೊಬ್ಬರೂ ಭಯಪಡುತ್ತಾರೆ, ಆದರೆ ಸುಡುಗಾಡು ಎನ್ನುವುದು ಮಾನವನ ನಿಜವಾದ ಪಾವನ ತಾಣ, ಇಂತಹ ಸುಡುಗಾಡು ಸಿದ್ದರು ಬುದ್ಧನ ಕಾಲದಿಂದಲೂ, ಬಸವೇಶ್ವರ ಕಾಲದಿಂದಲೂ ಅಸ್ತಿತ್ವದಲ್ಲಿದ್ದು ಅಂದಿನ ಕಾಲದಲ್ಲಿ ಸುಡುಗಾಡಿನಲ್ಲಿ ಕಾರ್ಯಕ್ಷೇತ್ರ ಮಾಡಿಕೊಂಡ.. ಇಂದಿನ ದಿನಮಾನಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ಸುಡುಗಾಡು ಸಿದ್ದ ಜಾನಪದ ಕಲಾವಿದರು ಜನರಿಗೆ ದೆವ್ವ ಭೂತ ಪಿಚಾಚಿಗಳ ಬಗ್ಗೆ ಮುಖ್ಯವಾಗಿ ಮೂಢನಂಬಿಕೆಯ ಬಗ್ಗೆ ಜಾಗೃತಿ ಮೂಡಿಸಿ.ಜನರಿಗೆ ತಮ್ಮ ಹಳ್ಳಿ ಹಳ್ಳಿ ಬೆಳಂ ಬೆಳಗ್ಗೆನೇ ದೇವರ ಶರಣರ ನಾಮ ಸ್ಮರಣೆ ಮಾಡುವ ಮೂಲಕ ತಮ್ಮ ಕಾಯಕ ಆರಂಭ ಮಾಡುತ್ತಾರೆ, ಸುಡುಗಾಡು ಸಿದ್ದರು ಮುಖ್ಯವಾಗಿ ಹಳ್ಳಿಹಳ್ಳಿಗಳಲ್ಲಿ ಮನರಂಜನೆ ಸಹಿತ ತತ್ವವನ್ನು ಬೆರೆತ ಜಾನಪದ ಕಲೆಯ ಮೂಲಕ ಸುಡುಗಾಡು ಸಿದ್ಧರು ಜನರಿಗೆ ಮನರಂಜನೆ, ಶರಣರ ಮಹಿಮೆ ಕಾಯಕ ಪ್ರಜ್ಞೆ, ಜನರಲ್ಲಿ ಜನ ಜಾಗೃತಿ ಮೂಡಿಸಿ.. ಬದುಕನ್ನು ಉತ್ಸಾಹದಂತೆ ಬದುಕಲು ಪ್ರೇರಣೆ ನೀಡುತ್ತಾರೆ, ಇಂದಿನ ಕಾಲದಲ್ಲಿ ಜಾನಪದ ಕಲೆಗೆ ಪ್ರೇರಣೆ ನೀಡುವವರು ಕಡಿಮೆಯಾಗಿದ್ದಾರೆ, ಆದರೆ ಸುಡುಗಾಡು ಸಿದ್ಧರು ಹಿಂದಿನ ಕಾಲದಲ್ಲಿ ರಾಜರ ಆಸ್ಥಾನದಲ್ಲಿ ಮೋಡಿಯ ಕೈಚಳಕದ ಮೂಲಕ ರಾಜರಿಗೆ ಮನರಂಜನೆ ನೀಡುವುದು, ಹಳ್ಳಿ ಹಳ್ಳಿಗಳಲ್ಲಿ ನಾಟಿ ಔಷಧಿಗಳನ್ನು ನೀಡುವುದು, ಒಟ್ಟಾರೆಯಾಗಿ ಜಾನಪದ ಕಲಾವಿದರು ತಮ್ಮ ಕಲೆಯ ಮೂಲಕ ಜನರಿಗೆ ಮನರಂಜನೆಯ ಎಂಬ ದಿವ್ಯ ಔಷಧಿ ನೀಡುತ್ತಿದ್ದಾರೆ , ಇಂತಹ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ಭಯ ಇದ್ದೇ ಇರುತ್ತದೆ, ಭ್ರಮೆ ಭಯವಾಗಿ ನಮ್ಮನ್ನು ಕಾಡುತ್ತದೆ, ಆದ್ದರಿಂದ ವಿದ್ಯಾರ್ಥಿಗಳು ಭಯ ಭ್ರಾಂತಿಗಳನ್ನು ಬಿಟ್ಟು ಉಪಯುಕ್ತವಾದ ಜ್ಞಾನವನ್ನು ಗಳಿಸಿಕೊಂಡು ಧೈರ್ಯದಿಂದ ಓದಿಕೊಂಡು ಸಾಧಕರಾಗಬೇಕೆಂದು ತಿಳಿಸಿ, ಮೂಡನಂಬಿಕೆ ಅಂಧಕಾರ ಅಜ್ಞಾನಗಳ ಬಗ್ಗೆ ಉಪನ್ಯಾಸ ನೀಡಿದರು….
ಜನಪದ ಲೋಕ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಜಾನಪದ ಕಲಾವಿದ ಕಿಂಡ್ರಿ ಲಕ್ಷ್ಮಿಪತಿ ಅವರು ತಮ್ಮ ಸುಡುಗಾಡು ಸಿದ್ದ ಜಾನಪದ ಕೈಚಳಕದ ಮೂಲಕ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮನರಂಜನೆ ನೀಡಿದರು, ಮಣ್ಣು ಬಿಟ್ಟು ಮಡಿಕೆ ಇಲ್ಲ, ತನ್ನ ಬಿಟ್ಟು ದೇವರಿಲ್ಲ, ತನ್ನನ್ನು ಅರೆ ತೆರೆ ತಾನೇ ದೇವರು, ಎನ್ನುವ ಶರಣರ ವಾಣಿಯ ಮೂಲಕ ತಮ್ಮ ಕೈಚಳಕವನ್ನು ಪ್ರಾರಂಭಿಸಿ, ದೆವ್ವ ಭೂತ ಪಿಚಾಚಿ ಇವೆಲ್ಲವೂ ಮೂಡನಂಬಿಕೆ, ವಿದ್ಯಾರ್ಥಿಗಳು ಇವುಗಳ ಕಡೆಗೆ ಗಮನ ಕೊಡಬಾರದು, ಯಾರೂ ತಂದೆ ತಾಯಿಗೆ ಆಶ್ರಯ, ನೀರಿಲ್ಲ ವರಿಗೆ ನೀರು, ಊಟವಿಲ್ಲದವರಿಗೆ ಊಟ, ಆಶ್ರಯ ಇಲ್ಲದವರಿಗೆ ಆಶ್ರಯ, ನೀಡುತ್ತಾರೋ ಅವರೇ ದೇವರಾಗುತ್ತಾರೆ ಎಂದು ತತ್ವದ ಮೂಲಕ ಮನರಂಜನೆ ನೀಡಿದರು, ತಮ್ಮ ಜೂಳಿಗೆಯ ಮೂಲಕ ನಸು ಪುಡಿ ನಾಗಮ್ಮ, ಮಲೆನಾಡ ಚೌಡಿ, ಭೂತ್ ರಾಮಯ್ಯ, ಹೀಗೆ ಹಲವಾರು ತಮ್ಮ ಜಾನಪದ ಮೊಜಲುಗಳ ಮನರಂಜನೆ ನೀಡಿದರು, ತಮ್ಮ ಜೋಳಗಿಯ ಕೈಚಳಕದ ಮೂಲಕ ಬಸವಣ್ಣ, ಲಿಂಗು, ರುದ್ರಾಕ್ಷಿ ವಿಭೂತಿಯನ್ನು ತರುವ ಮೂಲಕ ಅದರ ಮಹಿಮೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು ವಿದ್ಯಾರ್ಥಿಗಳಿಗೆ ಭಯವನ್ನು ಹೋಗಲಾಡಿಸಿ ಧೈರ್ಯವನ್ನು ತುಂಬಿದರು, ನಂತರ ತಮ್ಮ ಅದ್ಭುತವಾದ ಕಂಠದಿಂದ ಹಲವಾರು ಶರಣರ ವಿಚಾರಧಾರಿಗಳನ್ನು ತಮ್ಮ ಜಾನಪದ ಕಲಿಯ ಮೂಲಕ ಪ್ರಸ್ತುತಪಡಿಸಿದರು, ನಂತರ ಗುಂಡುಗಳನ್ನು ನುಂಗಿ… ವಿದ್ಯಾರ್ಥಿಗಳನ್ನು ಶಿಕ್ಷಕರನ್ನು ಬೆರೆಗು ಗೊಳಿಸಿದರು, ವಿದ್ಯಾರ್ಥಿಗಳೇ ಉತ್ತಮವಾಗಿ ಓದುವ ಮೂಲಕ ನಿಮ್ಮ ತಂದೆ ತಾಯಿಗಳಿಗೆ ನೀವು ಓದಿದ ಶಾಲೆಗಳಿಗೆ, ಸಮಾಜಕ್ಕೆ ಕೀರ್ತಿ ತರಬೇಕೆಂದು ತಮ್ಮ ಮಾತಿನ ಮೂಲಕ ಹೇಳಿದರು,
ಸುಡುಗಾಡು ಸಿದ್ದ ಜಾನಪದ ಕೈಚಳಕ ಕಲೆಯನ್ನು ನೋಡಿದ ಪ್ರಾಂಶುಪಾಲರು ಬಸವರಾಜ ಗುತ್ತಲ. ರವರು ಈ ಕಲೆಯ ಮೂಲಕ ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳ ಭಯಗಳನ್ನು ಹೋಗಲಾಡಿಸಿ, ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಜಾನಪದ ಕಲಾವಿದರಿಗೆ ತುಂಬು ಹೃದಯದ ಧನ್ಯವಾದಗಳು ಎಂದು ತಿಳಿಸಿ, ಇಂತಹ ಮೌಲ್ಯುತವಾದ ಪರಂಪರೆ ಉಳಿಯಲಿ ಬೆಳೆಯಲಿ ಮುಂದಿನ ಪೀಳಿಗೆ ತಿಳಿಯಲಿ ಎಂದು ಹಾರೈಸಿದರು ನಂತರ ಜಾನಪದ ಕಲಾವಿದರಿಗೆ ಸನ್ಮಾನಿಸಿದರು, ಈ ಸಂದರ್ಭದಲ್ಲಿ ಸಂಗೀತ ಶಿಕ್ಷಕರಾದ ಯುವರಾಜ ಗೌಡ ಮತ್ತು ಇತರೆ ಶಿಕ್ಷಕರಾದ ರಾಜಪ್ಪ ಬಾರಿಕರ್. ರವಿ ನಾಯಕ. ರಜಿಯಾ ಬಾನು. ಥೌಸೀಕ್ ಸೈಯದ್. ವಿಜಯ್ ಚುಚಣಿ.ರಾಘವೇಂದ್ರ. ವೀರಚಾರಿ. ಗೀತಮ್ಮ.ಕೊಟ್ರಮ್ಮ. ಅನುರಾಧ.ರೇಣುಕಾ.ಅಶ್ವಿನಿ. ನಾಗರಾಜ ಮತ್ತೆ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಪರಶುರಾಮ ಅಂಗೂರು ಇತರರಿದ್ದರು.
More Stories
ಗ್ರಾಮ ಪಂಚಾಯತಿ ಸದಸ್ಯನ ಸಂಭಾವನೆಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ…
ಮಠ-ಮಂದಿರಗಳಿಗೆ ಮಂಜೂರಾದ ಅನುದಾನ ಬಿಡುಗಡೆಗೆ 25% ಕಮೀಷನ್: ಜಿ. ಜನಾರ್ಧನ ರೆಡ್ಡಿ ಗಂಭೀರ ಆರೋಪ
ಹಂಪಾಪಟ್ಟಣದಲ್ಲಿ ಮೊಹರಂ ವಿಶೇಷ ಆಚರಣೆ