September 13, 2025

ಗಣೇಶೋತ್ಸವದಲ್ಲಿ ಸುಡುಗಾಡು ಸಿದ್ದ ಜಾನಪದ ಕೈಚಳಕ ಕಾರ್ಯಕ್ರಮ ಯಶಸ್ವಿ…

ಜೂಡಿ ನ್ಯೂಸ್ : 

ಗಣೇಶೋತ್ಸವದಲ್ಲಿ ಸುಡುಗಾಡು ಸಿದ್ದ ಜಾನಪದ ಕೈಚಳಕ ಕಾರ್ಯಕ್ರಮ ಯಶಸ್ವಿ…

ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಶ್ರೀ ಶರಣಬಸವೇಶ್ವರ ನಗರದ ಶ್ರೀ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದ ಶ್ರೀ ಗಣೇಶೋತ್ಸವ ಸಮಾರಂಭದಲ್ಲಿ ಸುಡುಗಾಡು ಸಿದ್ದ ಜಾನಪದ ಕೈಚಳಕವನ್ನು ಜಾನಪದ ಕಲಾವಿದರು ಪ್ರದರ್ಶನ ನೀಡಿದರು…

ಸುಡುಗಾಡು ಸಿದ್ದ ಜಾನಪದ ಕಲಾವಿದರಾಗಿ ಹಿರಿಯ ಜಾನಪದ ಕಲಾವಿದ ಬಳ್ಳಾರಿ ಬಾದಿಗಿ ಬಸಪ್ಪ , ಮತ್ತು ಯುವ ಜಾನಪದ ಕಲಾವಿದ ನಾಗರಾಜ್ ಗಂಟಿ ಹಂಪಾಪಟ್ಟಣ, ಸುಡುಗಾಡು ಸಿದ್ದ ಜಾನಪದ ಕಲೆಯನ್ನು ಪ್ರಸ್ತುತಪಡಿಸಿ ಸಮಿತಿಯ ವತಿಯಿಂದ ಮೆಚ್ಚುಗೆಯನ್ನು ಪಡೆದರು…

ಪ್ರಾರಂಭದಲ್ಲಿ ಎಲ್ಲಾ ಮಹಾನಿಯರನ್ನು ಸ್ಮರಿಸಿಕೊಂಡು ಯುವ ಜಾನಪದ ಕಲಾವಿದ ನಾಗರಾಜ್ ಗಂಟಿ ಸುಡುಗಾಡು ಸಿದ್ದ ಸಮುದಾಯ ಮತ್ತು ಕಲೆ ಬುದ್ಧನ ಕಾಲದಿಂದಲೂ ಸಿದ್ಧಿಯನ್ನು ಪಡೆದುಕೊಂಡ ಸಮುದಾಯ, ಈ ಜಾನಪದ ಕಲೆಗೆ ಬುದ್ಧನ ಹಾಗೂ ಕನ್ನಡ ನಾಡಿನ ಬಸವಾದಿ ಶರಣರ ನಂಟು ಶತಶತಮಾನಕ್ಕೂ ಉಳಿಸಿಕೊಂಡು ಬಂದಿದೆ, ಈ ಸುಡುಗಾಡು ಸಿದ್ದ ಜಾನಪದ ಕಲೆಯು ಸ್ಮಶಾನವನ್ನೇ ಆರಾಧನೆ ಸ್ಥಳ ಮಾಡಿಕೊಂಡು ಜನರಿಗೆ ಮನರಂಜನೆಯ ಜೊತೆಗೆ ಕಾಯಕ ತತ್ವ ವೈಚಾರಿಕ ತತ್ವವನ್ನು ಪ್ರಚಾರ ಮಾಡುವ ಕಲೆಯಾಗಿದೆ, ಜನರಿಗೆ ಮೂಢನಂಬಿಕೆ ಹೋಗಲಾಡಿಸುವುದು, ಸೋದರತ್ವ ಬೆಳೆಸುವುದು, ಕಾಯಕ ಪ್ರಜ್ಞೆ ಬೆಳೆಸುವುದು, ಜನರಲ್ಲಿ ಐಕ್ಯತೆ, ಶಿವ ಭಕ್ತಿ ಮೂಡಿಸುವುದು ಈ ಕಲೆಯ ಮುಖ್ಯ ಉದ್ದೇಶ.. ಸುಡುಗಾಡು ಸಿದ್ದ ಕಾಯಕದ ಬಗ್ಗೆ ವಿವರವಾಗಿ ತಿಳಿಸಿದರು

ಹಿರಿಯ ಜಾನಪದ ಕಲಾವಿದ ಬಾದಿಗಿ ಬಳ್ಳಾರಿ ಬಸಪ್ಪನವರು ತಮ್ಮ ಅಮೋಘವಾದ ಜೋಳಿಗೆಯ ಮೂಲಕ ಸಿದ್ದರಾಟ ಶಿವನಾಟ ಎಂದು ಆಟವನ್ನು ಪ್ರಾರಂಭಿಸಿ ಜೋಳಗಿಯ ವಿಶೇಷ ಶಬ್ದದ ಮೂಲಕ ಮಕ್ಕಳನ್ನು ರಂಜಿಸಿದರು, ಮಲೆನಾಡ ಜೋಡಿ, ನಡುಪುಡಿ ಮಲ್ಲಮ್ಮ, ಉರ್ಕಡ್ಲಿ ಬಸಮ್ಮ, ತಮ್ಮ ವಿವಿಧ ಜಾನಪದ ಕೈಚಳಕದ ಮೂಲಕ ಬಸವಣ್ಣ, ಇಷ್ಟಲಿಂಗ ರುದ್ರಾಕ್ಷಿ, ಗಣಪತಿ, ವಿರುಪಾಕ್ಷೇಶ್ವರ, ತಿರುಪತಿ ತಿಮ್ಮಪ್ಪ, ಮೂರ್ತಿಗಳನ್ನು, ಜೂಳಿಗೆಯ ಮೂಲಕ ತೆಗೆದು ಜನರಿಗೆ ಮನರಂಜನೆಯ ಜೊತೆಗೆ ಸಾದು ಶರಣರ ಸಂತ ಮಹಾಂತರ ತತ್ವವನ್ನು ಸಾರಿದರು, ನಂತರ ಕಲ್ಲಿನ ಮೂಲಕ ನೀರು ತರಿಸುವುದು,ದೊಡ್ಡ ದೊಡ್ಡ ಗುಂಡುಗಳನ್ನು ಮತ್ತೆ ಮತ್ತೆ ಕ್ಷಣ ಮಾತ್ರದಲ್ಲಿ ಪಟಪಟನೆ ತೆಗೆದು ಮೇಲಿದ್ದ ಜನರನ್ನು ಮೂಕ ವಿಸ್ಮಿತರನ್ನಾಗಿ ಮಾಡಿದರು… 

ಕಾರ್ಯಕ್ರಮವನ್ನು ವೀಕ್ಷಿಸಿ ಮಾತನಾಡಿದ SBBN ಬಿಎಡ್ ಕಾಲೇಜಿನ ಸಹಾಯಕ ಅಧ್ಯಾಪಕರಾದ ಗಣೇಶ್ ಉತ್ಸವ ಸಮಿತಿ ಸದಸ್ಯರಾದ ಡಾ:ಜಗದೀಶ್ ಶೇಖರಯ್ಯ ಹಿರೇಮಠ ಸರ್ ಅವರು ಮಾತನಾಡುತ್ತಾ ಈ ಜಾನಪದ ಕಲೆ ಇಂದಿನ ದಿನಮಾನಗಳಲ್ಲಿ ನಶಿಸುತ್ತಿರುವುದು ಅತ್ಯಂತ ವಿಷಾದ ಸಂಗತಿಯಾಗಿದೆ, ಆದರೆ ನಮ್ಮ ಸಮಿತಿಯವರು ಇಂತಹ ಕಲೆಗೆ ಅವಕಾಶ ನೀಡಿದ್ದು ನಮ್ಮೆಲ್ಲರ ಸೌಭಾಗ್ಯ, ಇಂತಹ ಪುರಾತನ ಜಾನಪದ ಪರಂಪರೆಯನ್ನು ಉಳಿಸಿ ಬೆಳೆಸುವುದು ಪ್ರೋತ್ಸಾಹಿಸುವುದು ನಾಗರಿಕ ಸಮಾಜದ ಕರ್ತವ್ಯ ಎಂದು ಮಾತನಾಡಿದರು…

ನಂತರ ಕಲೆ ಪ್ರದರ್ಶನ ನೀಡಿದ ಕಲಾವಿದರಿಗೆ ಗಣೇಶ ಉತ್ಸವ ಸಮಿತಿ ವತಿಯಿಂದ ಸನ್ಮಾನಿಸಿ ಸತ್ಕರಿಸಲಾಯಿತು,

ಈ ಸಂದರ್ಭದಲ್ಲಿ ಶ್ರೀ ಗಣೇಶೋತ್ಸವ ಸಮಿತಿ  ಶ್ರೀ ಶರಣಬಸವೇಶ್ವರ ನಗರ ಹೊಸಪೇಟೆ  ಅಮರ ಜ್ಯೋತಿ ನಗರ ಜಗಜ್ಯೋತಿ ನಗರ ಮತ್ತು ಶರಣಬಸವೇಶ್ವರ ನಗರ ಸದಸ್ಯರಗಳಾದ ಸಿದ್ಲಿಂಗಪ್ಪ, ಪೂಜಾರಪ್ಪ, ಮಲ್ಲಿಕಾರ್ಜುನ್ ಹಿರೇಮಠ, ರೋಹಿತ್ ಸರ್, ದಿವಾಕರ್, ಶಿವರಾಜ್ ಜವಳಿ, ಬಿರಾದರ್, ಅಯ್ಯಪ್ಪ ಸನತ್ ಕುಮಾರ್, ಮಧುರ ಚೆನ್ನ ಶಾಸ್ತ್ರಿ, ಜಗದೀಶ್ ಹಿರೇಮಠ, ಶಿಕ್ಷಕರಾದ ಮಂಜಪ್ಪ ಗಂಟಿ ಹಾಗೂ ನಗರದ ಮಾತೇಯರು ಹಿರಿಯರು, ಚಿನ್ನರ ಬಳಗ ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.