September 13, 2025

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವತಿಯಿಂದ ಶಿಕ್ಷಕರ ದಿನಾಚರಣೆ

ಜೂಡಿ ನ್ಯೂಸ್ :

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವತಿಯಿಂದ ಶಿಕ್ಷಕರ ದಿನಾಚರಣೆ

 ಬೆಂಗಳೂರು, ಸೆ.06:ರಾಜ್ಯದ ಎಲ್ಲಾ ತಾಲೂಕಿನ ಒಬ್ಬೊಬ್ಬ ಶಿಕ್ಷಕರನ್ನು ಸನ್ಮಾನಿಸಲಾಯಿತು ಈ ಕಾರ್ಯಕ್ರಮವನ್ನು ಮಾನ್ಯ ಡಿ ಕೆ ಶಿವಕುಮಾರ ಉಪ ಮುಖ್ಯಮಂತ್ರಿಗಳು ಉದ್ಘಾಟಿಸಿ ಹರ ಮುನಿದರೂ ಗುರು ಕಾಯುವನು. ಈ ಜಗತ್ತು ಇರುವವರೆಗೂ ಶಿಕ್ಷಕರನ್ನೂ ಸ್ಮರಿಸಬೇಕು ಎಂದುvಹೇಳಿದರು.

ಕೊಪ್ಪಳ ತಾಲೂಕಿನ ರೇಣುಕಾ ಸುರ್ವೆ, ಭರಮಪ್ಪ ಕಟ್ಟಿಮನಿ.(ಉಪಾಧ್ಯಕ್ಷರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಜಿಲ್ಲಾ ಘಟಕ ಕೊಪ್ಪಳ) ಯಲಬುರ್ಗಾದ ಕಳಕಪ್ಪ ಕುರಿ ಕುಷ್ಟಗಿಯ ಶಿವಲಿಂಗಯ್ಯ ಮಠ, ಸಿದ್ದರಾಮಪ್ಪ ಅಮರಾವತಿ, ಗಂಗಾವತಿಯಿಂದ ಮಲ್ಲೇಶಪ್ಪ ಬೆಂಕಿ ಕನಕಗಿರಿಯಿಂದ ಮುತ್ತಪ್ಪ ಇವರಿಗೆ ರಾಜೀವಗಾಂಧಿ ರಾಜ್ಯ ಶ್ರೇಷ್ಠ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯ ಸಭಾ ಸದಸ್ಯರಾದ ಶ್ರೀ ಚಂದ್ರಶೇಖರ ವಹಿಸಿದ್ದರು ಎಲ್ಲಾ ವೃತ್ತಿಗಿಂತ ಶಿಕ್ಷಕರ ವೃತ್ತಿ ಶ್ರಷ್ಟವಾದದ್ದು ನುಡಿದರು

ಕೆಪಿಸಿಸಿ ರಾಜ್ಯ ಅಧ್ಯಕ್ಷರಾದ ಬಸವರಾಜ ಗುರಿಕಾರ, ತಿಮ್ಮಯ್ಯ ಪುರಲೆ, ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ N. ಯಂಕಪ್ಪ,ಕಾರ್ಯದರ್ಶಿಗಳಾದ ಉಮೇಶಬಾಬು ಸುರ್ವೆ,ಉಪಾಧ್ಯಕ್ಷರಾದ ಭರಮಪ್ಪ ಕಟ್ಟಿಮನಿ, ತಾಲೂಕು ಘಟಕದ ಅಧ್ಯಕ್ಷರಾದ ಸಂಗಪ್ಪ ಅಂಗಡಿ ಉಪಸ್ಥಿತರಿದ್ದರು.