September 13, 2025

ದಾನಿ ಸುಬ್ಬಾರೆಡ್ಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಹಂಪಾಪಟ್ಟಣ ನಾಗರಿಕರು..

ಜೂಡಿ ನ್ಯೂಸ್ :

ದಾನಿ ಸುಬ್ಬಾರೆಡ್ಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಹಂಪಾಪಟ್ಟಣ ನಾಗರಿಕರು..

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ತಾಲೂಕಿನ ಉಪನಾಯಕನಹಳ್ಳಿ ಗ್ರಾಮದ ಹತ್ತಿರ ಇರುವ ಲಕ್ಷ್ಮಿ ಕೋಳಿ ಫಾರಂ ನ ಮಾಲೀಕರಾದ ಸುಬ್ಬ ರೆಡ್ಡಿರವರು ದಿನಾಂಕ 10.09.2025 ಮಧ್ಯಾಹ್ನ ಅಕಾಲಿಕ ಮರಣ ಹೊಂದಿದರು.

ಶ್ರೀ ಸುಬ್ಬಾರೆಡ್ಡಿ ಅವರ ಸಾಮಾಜಿಕ ಸೇವ ಗುಣ, ಸಾಮಾಜಿಕ ಧಾರ್ಮಿಕ ಹಲವಾರು ಕಾರ್ಯಗಳಿಗೆ ದಾನವನ್ನು ನೀಡುವ ಮೂಲಕ ಎಲ್ಲಾ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು, ಹಾಗೆ ಎಲ್ಲಾ ಕಾರ್ಮಿಕ ವರ್ಗದ ಪ್ರೀತಿಯ ಮಾಲೀಕರಾಗಿದ್ದರು, ಇಂತಹ ಆಧುನಿಕ ಯುಗದಲ್ಲಿ ಧರ್ಮರಾಯರಂತಹ ಮನಸುಳ್ಳ ಸುಬ್ಬಾರೆಡ್ಡಿ ಅಂತ ವ್ಯಕ್ತಿತ್ವ ವ್ಯಕ್ತಿ ಸಿಗುವುದು ಅತ್ಯಂತ ವಿರಳ, ಗ್ರಾಮದ ನಾಗರಿಕರು ಒಂದು ನಿಮಿಷ ಮೌನಚರಣೆ ಸಲ್ಲಿಸಿ ಘನ ವ್ಯಕ್ತಿತ್ವ ಹೊಂದಿದ್ದ ಸುಬ್ಬ ರೆಡ್ಡಿ ಅವರಿಗೆ ಶ್ರದ್ಧಾಂಜಲಿ ಮೂಲಕ ನುಡಿ ನಮನ ಸಲ್ಲಿಸಿದರು..

ಈ ಸಂದರ್ಭದಲ್ಲಿ ಹಂಪಾಪಟ್ಟಣ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು, ಗ್ರಾಮ ಪಂಚಾಯತಿಯ ಸದಸ್ಯರಾದ ಬಲ್ಲಹುನಸಿ ನಾಗರಾಜ್, ಗ್ರಾಮ ಪಂಚಾಯಿತಿಯ ಸದಸ್ಯರಾದ ಸಿದ್ದರ ಗಾಳಿಪ್ಪ, ತಿಪ್ಪೆಗುಂಡಿ ಮಂಜುನಾಥ್, ಸಿದ್ದರ.ಪತ್ರಿಯಲ್ಲಪ್ಪ. ನಾಯಕರುನಾಗರಾಜ್. ನೆರಳು ಪತ್ರಿಕೆಯ ವರದಿಗಾರರಾದ, ಭಜಂತ್ರಿ ಸೋಮನಾಥ್, ವಿಎಸ್ಎಸ್ ಏನ್ ಸಂಘದ ನಿರ್ದೇಶಕರಾದ ಜಿ ಶ್ರೀನಿವಾಸ್, ಗಾಳಿಮ್ಮನವರು ಹುಲುಗಪ್ಪ, ಜೀ ಸೋಮನಾಥ್. ಟಿ ಮಹೇಂದ್ರ. ಬಿ ಕುಬೇರ.ಮಧುಸೂದನ್ ಜೋಶಿ ಎಚ್. ರಮೇಶ.. ಎಚ್ ಸೋಮನಾಥ ಸೀಗೇನಹಳ್ಳಿ ದೊಡ್ಡ ಬಸವರಾಜ..ಸಿಗೆನಹಳ್ಳಿ ಬಸವರಾಜ, . ಎಸ್ ಚಂದ್ರು ಕೆಎಸ್ ಹುಲುಗಪ್ಪ. ಎಚ್ ದೊಡ್ಡ ಬಸವರಾಜ್ ಹಡಗಲಿ ಖಾಜಾ. ನಾಗೇಶ್. ಶರಗಾರ್ ಚಂದ್ರಪ್ಪ. ಪ್ರಭು. ಕರಕಟ್ಟಿ ನಾಗರಾಜ್ ಜಾನಪದ ಕಲಾವಿದ ನಾಗರಾಜ್ ಗಂಟಿ, ಕೇಶವಮೂರ್ತಿಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.