July 13, 2025

ಅಲಕ್ಷಿತ ಸುಡುಗಾಡು ಸಿದ್ದ ಸಮುದಾಯವನ್ನು ರಾಜ್ಯ ಸರ್ಕಾರ ಗುರುತಿಸಿ, ಪ್ರೋತ್ಸಾಹಿಸಲಿ : ಪ್ರಭುಸ್ವಾಮಿಗಳು 

ಜೂಡಿ ನ್ಯೂಸ್ :

ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಸುಡುಗಾಡು ಸಿದ್ದರ ಸಮಾಜದ ಶ್ರೀ ಗಾಳಿ ದುರುಗಮ್ಮ ದೇವಸ್ಥಾನದ ನೂತನ ಗೋಪುರ ಕಳಸಾರೋಹಣ ಕಾರ್ಯಕ್ರಮದ ಪಾವನ ಸಾನಿಧ್ಯ ವಹಿಸಿದ ಸಂಡೂರಿನ ವಿರಕ್ತಮಠದ ಪ್ರಭು ಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಉದ್ಘಾಟನೆ ನುಡಿಗಳ ನಾಡಿದರು…

ಸುಡುಗಾಡು ಸಿದ್ದ ಸಮಾಜ ಮೂಲ 12ನೇ ಶತಮಾನದ ಶರಣ ಪರಂಪರೆಯ ಇತಿಹಾಸವನ್ನು ಹೊಂದಿದ್ದು, ಶರಣ ತತ್ವವನ್ನು ಪ್ರಚಾರ ಮಾಡುವ ಸಮುದಾಯವಾಗಿದೆ, ಈ ಸಮುದಾಯ ಕರ್ನಾಟಕದ ವಿಶೇಷವಾದ ಸಮುದಾಯ ವಾಗಿದ್ದು, ಜನರಿಗೆ ಮನರಂಜನೆ ತತ್ವವನ್ನು ತಿಳಿಸುವ, ಹಳ್ಳಿ ಹಳ್ಳಿಗೆ ತಮ್ಮ ಕಾಯಕವನ್ನು ಮಾಡುವ ಕಾಯಕ ಸಮಾಜ ವಾಗಿದೆ, ಸಮುದಾಯವು ಪಾರಂಪರಿಕ ನಾಟಿ ಔಷಧಿಯ ಮೂಲಕ ಸಮಾಜದ ಹಲವಾರು ರೋಗ ಬಾದೆಗಳನ್ನು ಕಳೆದು, ಸಮಾಜಕ್ಕೆ ದಿವ್ಯ ಔಷಧಿಯನ್ನು ನೀಡಿದ ಸಮಾಜ ಸುಡುಗಾಡು ಸಿದ್ಧ ಸಮಾಜ, ಇಂಥ ಸಮಾಜ ಇನ್ನೂ ಶಿಕ್ಷಣದ ಮೂಲಕ ಉತ್ತಮವಾಗಿ ಬೆಳೆಯಲಿ, ಸಮಾಜದ ಬಗ್ಗೆ ಯಾರಾದರೂ ಕಳಕಳಿ ವಹಿಸಿ ಪುಸ್ತಕವನ್ನು ಬರೆದರೆ ಆ ಪುಸ್ತಕವನ್ನು ನಮ್ಮ ಶ್ರೀಮಠದಿಂದ ಪ್ರಕಟಿಸಲಾಗುವುದು ಎಂದು ಘೋಷಣೆ ಮಾಡಿದರು , ಇಂತಹ ಅಲಕ್ಷಿತ ಸಮುದಾಯಕ್ಕೆ ಕರ್ನಾಟಕ ಸರ್ಕಾರವು ಈ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ, ರಾಜ್ಯಮಟ್ಟದಲ್ಲಿ ಈ ಸಮುದಾಯವನ್ನು ಗುರುತಿಸಬೇಕೆಂದು ತಿಳಿಸಿದರು, ಬಸವೇಶ್ವರರು, ಸಾವಿತ್ರಿ ಬಾಪುಲೆ ಜ್ಯೋತಿಬಾಪುಲೆ ಅಂಬೇಡ್ಕರ್ ಅವರ ಸಾಮಾಜಿಕ ಕ್ರಾಂತಿಯ ಬಗ್ಗೆ ಜನರಿಗೆ ತಿಳಿಸಿದರು..

 ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹೊಸಕೇರಿಯ ನಿವೃತ್ತ ಶಿಕ್ಷಕರಾದ ಮಹೇಶಪ್ಪನವರು ಇಂದು ಹಂಪಾಪಟ್ಟಣ ಗ್ರಾಮದಲ್ಲಿ ಕಳ್ಸರೋಹಣ ಅತ್ಯಂತ ವೈಭವತವಾಗಿ ಯಶಸ್ವಿಯಾಗಿ ನೆರವೇರಿದೆ, ಇಲ್ಲಿನ ಸುಡುಗಾಡು ಸಿದ್ದ ಸಮಾಜದ ಒಗ್ಗಟ್ಟು ಎಲ್ಲಾ ಗ್ರಾಮಕ್ಕೆ ಸ್ಪೂರ್ತಿಯ ಸೆಲೆಯಾಗಿದೆ, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಯಶಸ್ವಿಯಾಗಿ ಮಾಡಿದ ಸಂಘಟಗಳಿಗೆ ಅಭಿನಂದನೆಗಳು ಎಂದು ತಿಳಿಸಿದರು,

ಅತಿಥಿಗಳಾದ ಸುಡುಗಾಡು ಸಿದ್ದ ಸಮಾಜದ ನಿವೃತ್ತ ಸೆಂಟ್ರಲ್ ಪೊಲೀಸ್ ಇಲಾಖೆಯ ಮಾರುತಿ ಹುಲಿಗಿ ಅವರು ಸಮಾಜವು ಇಂತಹ ವೇದಿಕೆಯಲ್ಲಿ ನಮ್ಮೆಲ್ಲರನ್ನು ಗುರುತಿಸಿದ್ದು ನಮಗೆ ಸೌಭಾಗ್ಯವೇ ಸರಿ, ಸದಾಕಾಲ ಸಮಾಜದ ಜೊತೆಗೆ ನಾವಿರುತ್ತೇವೆ ಎಂದು ಹೇಳಿದರು,

ನೆರಳು ಪತ್ರಿಕೆಯ ಸಂಪಾದಕ ಬುಡ್ಡಿ ಬಸವರಾಜ್ ರವರು ಸುಮಾರು ವರ್ಷಗಳ ಹಿಂದೆ ಸುಡಗಾಡು ಸಿದ್ಧ ಸಮಾಜ ಅಭಿವೃದ್ಧಿಯಿಂದ ಹಿಂದೆ ಸರಿದಿತ್ತು, ಆದರೆ ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಸಂಘಟನೆ ಹೋರಾಟದ ಮೂಲಕ ಸಮಾಜ ಮುಂಜಣೆಗೆ ಬರುತ್ತಿದ್ದು ಅತಿವ ಸಂತೋಷದ ವಿಚಾರವಾಗಿದೆ, ಈ ಸಮಾಜ ಕಟ್ಟಿ ಬಳಸಿದ ಹಿರಿಯರನ್ನು ಸಹ ವೇದಿಕೆಯಲ್ಲಿ ಸ್ಮರಿಸಿದರು,

ಸುಡುಗಾಡುಸಿದ್ಧ ಸಮಾಜದ ಜಾನಪದ ಕಲಾವಿದ ಕಿಂಡ್ರಿ ಲಕ್ಷ್ಮಿಪತಿ ಮಾತನಾಡಿದರು, ಮಾತಾ ಸೇವಾ ಟ್ರಸ್ಟಿನ ಟ್ರಸ್ಟಿನ ಅಧ್ಯಕ್ಷರಾದ ಶ್ರೀನಿವಾಸ್ ರವರು ಹಂಪಾಪಟ್ಟಣ ಗ್ರಾಮದಲ್ಲಿ ಒಂದಿಲ್ಲದೆ ಒಂದು ಕಾರ್ಯಕ್ರಮ ನಡೆಯುತ್ತಲೇ ಇರುತ್ತವೆ, ಅಂತಹ ಉಪಯುಕ್ತ ಕಾರ್ಯಕ್ರಮಗಳಲ್ಲಿ ಈ ಕಾರ್ಯಕ್ರಮವು ಸಹ ಒಂದಾಗಿದ್ದು, ಹಂಪಾಪಟ್ಟಣ ಗ್ರಾಮದ ಮಣ್ಣಿನ ಸುಗುಣವೇ ಅತ್ಯಂತ ವಿಶೇಷವಾದ ಅಂಶವನ್ನು ಒಳಗೊಂಡಿದೆ, ಎಂದರು ,

ಹೊಸಪೇಟೆಯ ಅಲೆಮಾರಿ ಮುಖಂಡರಾದ, ಸಣ್ಣ ಮಾರೆಪ್ಪನವರು ಅಲೆಮಾರಿ ಸಮುದಾಯಗಳ ಮೇಲೆ ಸರ್ಕಾರವು ವಿಶೇಷ ಗಮನವನ್ನು ಅರಿಸಿ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರವು ಕಂಕಣ ಬದ್ಧವಾಗಿರಬೇಕೆಂದು ತಿಳಿಸಿದರು,

H, ಶಿವಾನಂದ,ರವರು ಹರಪನಹಳ್ಳಿಯ ಸಣ್ಣ ಅಜ್ಜಯ್ಯರವರು, ಹಂಪಾಪಟ್ಟಣ ಗ್ರಾಮ ಪಂಚಾಯತಿಯ ಸದಸ್ಯರಾದ, ಎನ್ ನಾಗರಾಜ್ ತಿಪ್ಪಿಗುಂಡಿ ಮಂಜುನಾಥ್, ಆನೆಕಲ್ಲು ಗ್ರಾಮದ ಬೆಲ್ಲದ ಮಂಜುನಾಥ್, ಅತಿಥಿಯ ನುಡಿಗಳನ್ನು ಆಡಿದರು, ಹಾಗೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕರಾದ ನೇಮರಾಜ್ ನಾಯ್ಕ ರವರು ಸರ್ವ ಸಮಾಜವು ಅಭಿವೃದ್ಧಿಯಾಗಬೇಕಾದರೆ ಶಿಕ್ಷಣದ ಮೂಲಕವೇ ಅಭಿವೃದ್ಧಿ ಸಾಧ್ಯ, ಹಬ್ಬ ಹರಿ ದಿನಗಳಲ್ಲಿ ದುಂದು ವೆಚ್ಚಕ್ಕೆ ಕಠವಾಣ ಹಾಕಿ, ಅರ್ಥಪೂರ್ಣವಾಗಿ ಹಬ್ಬವನ್ನು ಆಚರಿಸಬೇಕು,

ವಿಶೇಷವಾಗಿ ನಮ್ಮ ಕ್ಷೇತ್ರದ ಹಂಪಾಪಟ್ಟಣ ಗ್ರಾಮಕ್ಕೆ ಸುಮಾರು ಒಂದುವರೆ ಕೋಟಿ ಅನುದಾನವನ್ನು ನೀಡಲಾಗಿದೆ, ಸಮಸ್ತ ಪ್ರಜೆಗಳು ಪಕ್ಷಭೇದವನ್ನು ತೊರೆದು ನಿಮ್ಮ ನಿಮ್ಮ ಕ್ಷೇತ್ರದ ಕೆಲಸವನ್ನು ಮಾಡಿಸಿಕೊಳ್ಳಬೇಕು, ಸರ್ವರೂ ದ್ವೇಷವನ್ನು ಬಿಟ್ಟು ಪ್ರೀತಿಯನ್ನು ತೊಟ್ಟು ಸಮಾಜವನ್ನು ಕಟ್ಟುವಲ್ಲಿ ನೀವು ಸಹ ಸಹಕರಿಸಬೇಕೆಂದು, ಅತ್ಯಂತ ಉಪಯುಕ್ತವಾದ ಮಾತುಗಳನ್ನಾಡಿದರು. .

ಹಾಗೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಗರಗ ನಾಗಲಾಪುರ ಶ್ರೀ ಗುರು ಒಪ್ಪಂತೇಶ್ವರ ಮಠದ ಪ್ರಭು ಮಹಾಸ್ವಾಮಿಗಳು ಸುಡುಗಾಡು ಸಿದ್ದ ಸಮಾಜವು ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಏರ್ಪಡಿಸಿದೆ, ಸಮುದಾಯದ ಅಭಿವೃದ್ಧಿಗೆ ಸದಾವಕಾಲ ನಮ್ಮ ಬೆಂಬಲ ಇರುತ್ತದೆ ಎಂದು ಆಶೀರ್ವಚನ ಆಶೀರ್ವಚನ ನೀಡಿದರು.

ಗದ್ದಿಕೇರಿಯ ಶ್ರೀ ಗುರು ಯಡಿಯೂರು ಸಿದ್ದಲಿಂಗೇಶ್ವರ ವಿರಕ್ತಮಠದ ಇಮ್ಮಡಿ ಮಹಾಂತ ಮಹಾಸ್ವಾಮಿಗಳು, ಹಾಗೂ ಬಾಚಿಗೊಂಡನಹಳ್ಳಿಯ ಕೌದಿ ಮಹಾಂತೇಶ್ವರ ಮಠದ ಶ್ರೀ ಶಿವ ಮಹಾಂತ ಮಹಾಸ್ವಾಮಿಗಳು, ಹಾಲಸ್ವಾಮಿ ಮಠದ ಹಾಲ ಸಿದ್ದೇಶ್ವರ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಸುಡುಗಾಡುಸಿದ್ಧ ಸಮಾಜಕ್ಕೇ ತಮ್ಮ ಅಶ್ರೀವಾಚನದ ಮೂಲಕ ಸ್ಪೂರ್ತಿ ತುಂಬಿದರು…

ನೂತನ ಗೋಪುರದ ಶಿಲ್ಪಿ ಮಂಜುನಾಥ ಮತ್ತು ದಾನ ನೀಡಿದ ಸದ್ಭಕ್ತ ಮಹಾಶಯರನ್ನು ವೇದಿಕೆ ಮೇಲೆ ಸನ್ಮಾನಿಸಲಾಯಿತು ಎಲ್ಲಾ ನೂತನ ಗೋಪುರದ ಪೂಜಾ ಕಾರ್ಯಕ್ರಮವನ್ನು ಗ್ರಾಮದ ಪೊರೋಹಿತರಾದ ಮದುಸೂಧನ ಜೋಶಿರವರು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸುಡುಗಾಡು ಸಿದ್ಧ ಸಾಮಾಜದ ಎಲ್ಲಾ ಗ್ರಾಮಸ್ಥರು, ಹಾಗೆಯೆ ಕಾರ್ಯಕ್ರಮದ ಸಂಘಟಕರಾದ ಮಹೇಶ್ ಕಿನ್ನೂರಿ, ಪತ್ರಿ ಯಲ್ಲಪ್ಪ, ದೊಡ್ಡ ಚಮಲಪ್ಪ, ಸಣ್ಣ ಮಂಜುನಾಥ್, ಮಾಯಪ್ಪ್ ಗಂಟಿ, ಸಿದ್ದರ ಗಾಳೆಪ್ಪ, ಗಂಟಿ ಮಂಜುನಾಥ,ದುರುಗಪ್ಪ ಗಂಟಿ, ಮುಡಿಯಪ್ಪ ಗಂಟಿ, ಎಸ್,ಎಂ,ಅಯ್ಯಪ್ಪ, ಎಸ್ , ಎಮ್,ನಾಗರಾಜ ,ಬೆಲ್ಲದ ಮಾಯಪ್ಪ,ಸಿ, ಮಲ್ಲಪ್ಪ, ಭರಮಪ್ಪ ಕಿನ್ನೂರಿ,ವಿ ನಾಗರಾಜ,ಮಂಜಪ್ಪ ಕಿನ್ನೂರಿ, ಹಂಪಾಪಟ್ಟಣ ಗ್ರಾಮದ ಸುಡುಗಾಡುಸಿದ್ಧ ಸಮಾಜದವರು,ಗ್ರಾಮದ ಎ ಕೇಶವ ಮೂರ್ತಿ,ಶರಣಪ್ಪ , ಮೇಸಿ ಹುಲುಗಪ್ಪ,ಹಾಗೂ ಗ್ರಾಮಸ್ಥರು, ಸರ್ವರು ಭಾಗವಹಿಸಿದ್ದರು, ಕಾರ್ಯಕ್ರಮದ ಪ್ರಾರ್ಥನೆ ಸುರೇಖಾ ,ನಿರೂಪಣೆ ನಾಗರಾಜ್ ಗಂಟಿ, ಸ್ವಾಗತ ಮಂಜಪ್ಪ ಗಂಟಿ,ಶಿಕ್ಷಕರು,ವಂದನಾರ್ಪಣೆ ಎಸ್,ಎಂ,ವಿಠಲ್ ನೆರೆವಿಸಿದರು.