ಜೂಡಿ ನ್ಯೂಸ್ :
ಕಿರ್ಲೋಸ್ಕರ್ ಫೆರಸ್ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಸೆ. 18 ರಂದು ಆರೋಗ್ಯ ತಪಾಸಣಾ ಶಿಬಿರ
ಕೊಪ್ಪಳ : ಕಿರ್ಲೋಸ್ಕರ್ ಫೆರಸ್ ಇಂಡಸ್ಟಿçಸ್ ಲಿಮಿಟೆಡ್- ಈ ಕಾರ್ಖಾನೆಯು ಪ್ರಪ್ರಥಮವಾಗಿ ಕೈಗಾರಿಕೆಯಲ್ಲಿ ಹಿಂದುಳಿದ ಪ್ರದೇಶವಾದ ಕೊಪ್ಪಳ ಜಿಲ್ಲೆಯ ಬೇವಿನಹಳ್ಳಿಯ ಹತ್ತಿರ ೧೯೯೩ ರಲ್ಲಿ ಸ್ಥಾಪಿನೆಗೊಂಡಿದ್ದು. ಪ್ರಮುಖವಾಗಿ ಬೀಡು ಕಬ್ಬಿಣ ಮತ್ತು ಬೂದು ಕಬ್ಬಿಣದ ಎರಕಗಳನ್ನು ಉತ್ಪಾದಿಸುತ್ತಿದೆ. ಈ ಉತ್ಪನ್ನಗಳು ಮುಖ್ಯವಾಗಿ ವಾಹನ ತಯಾರಿಕಾ ವಲಯಕ್ಕೆ ಬಿಡಿಭಾಗಗಳನ್ನು ಪೂರೈಸಲ್ಪಡುತ್ತದೆ.
ಕಾರ್ಖಾನೆಯ ಸ್ಪಾಪನೆಯಾದಾಗಿನಿಂದಲೂ ಹತ್ತಿರವಿರುವ ಬೇವಿನಹಳ್ಳಿ ಗ್ರಾಮ ಹಾಗೂ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಬಂದಿರುತ್ತದೆ, ಕಂಪನಿಯ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯನ್ನು (ಅSಖ) ಕ್ರಮಬದ್ದವಾಗಿ ನೆಡೆಸಲು ೨೦೦೧ ರಲ್ಲಿ ಕಿರ್ಲೋಸ್ಕರ್ ಫೆರಸ್ ಗ್ರಾಮೀಣಾಭಿವೃದ್ಧಿ ಟ್ರಸ್ಟ್ನ್ನು ಸ್ಥಾಪಿಸಲಾಗಿದ್ದು ಈ ಟ್ರಸ್ಟ್ನ ಮುಖಾಂತರ ಗ್ರಾಮದ ಮೂಲಭೂತ ಸೌಕರ್ಯ, ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯ ಇವುಗಳಿಗೆ ಒತ್ತುಕೊಟ್ಟು ವಾರ್ಷಿಕ ಯೋಜನೆಯನ್ನು ರೂಪಿಸಿ ಆದರಂತೆ, ಕೆಲಸಗಳನ್ನು ಕೈಗೆತ್ತಿಗೆಕೊಳ್ಳುತ್ತದೆ.
ಈ ಹಿನ್ನಲೆಯಲ್ಲಿ ಹುಬ್ಬಳ್ಳಿಯ ಪ್ರತಿಷ್ಠಿತ ವಿಹಾನ್ ಹೃದಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕೊಪ್ಪಳದ ಕೆ ಎಸ್ ಆಸ್ಪತ್ರೆ, ಕೊಪ್ಪಳದ ರೆಡ್‌ಕ್ರಾಸ್ ಸಂಸ್ಥೆ, ಸರ್ವೋದಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಕೆಎಫ್‌ಐಎಲ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಹಭಾಗಿತ್ವದಲ್ಲಿ ದಿನಾಂಕ ೧೮-೦೯-೨೦೨೫ ರಂದು ಬೆಳಗ್ಗೆ ೦೯:೦೦ ಘಂಟೆಗೆ ಆರೋಗ್ಯ ತಪಾಸಣಾ ಶಿಬಿರವನ್ನು ಕೊಪ್ಪಳದ ಮಧುಶ್ರೀ ಗಾರ್ಡ್ನ್‌ನಲ್ಲಿ ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಸಾರ್ವಜನಿಕರಿಗೆ ಹೃದಯ ತಪಾಸಣೆಗೆ ೩೦ ರಿಂದ ೪೫ ವಯಸ್ಸಿನವರು (ಮೊದಲ ೩೦೦ ಜನರಿಗೆ ಮಾತ್ರ ಸೀಮಿತ) ಹಾಗೂ ಮೂಳೆ ಸಾಂದ್ರತೆಯ ತಪಾಸಣೆಯನ್ನು ೪೫ ವರ್ಷ ಮೇಲ್ಪಟ್ಟವರಿಗೆ (ಮೊದಲ ೨೫೦ ಜನರಿಗೆ ಮಾತ್ರ ಸೀಮಿತ) ಮಾಡಲಾಗುವುದು. ಅಲ್ಲದೇ ರಕ್ತದಾನ ಶಿಬಿರವನ್ನು (೧೮ ವರ್ಷ ಮೇಲ್ಪಟ್ಟವರಿಗೆ) ಸಹ ಆಯೋಜಿಲಾಗಿದೆ.
ಹೆಚ್ಚಿನ ವಿವರಕ್ಕಾಗಿ ಮತ್ತು ಹೆಸರು ನೊಂದಾಯಿಸಲು ಈ ದೂರವಾಣಿಗೆ ಸಂಖ್ಯೆಗೆ ಸಂಪರ್ಕಿಸಬಹುದು. ೮೧೨೩೦೪೫೩೪೫, ೯೪೪೯೬೧೩೪೨೫ ಮತ್ತು ೯೪೮೨೮೧೩೦೩೮.
ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕೊಪ್ಪಳ ಜಿಲ್ಲೆಯ ಸುತ್ತ-ಮುತ್ತಲಿನ ಗ್ರಾಮ ಹಾಗೂ ನಗರದ ನಿವಾಸಿಗಗಳಿಗೆ ಅನುಕೂಲವಾಗಲೆಂದು ಕಿರ್ಲೋಸ್ಕರ್ ಫೆರಸ್ ಸಂಸ್ಥೆಯು ಆರೋಗ್ಯ ಶಿಬಿರವನ್ನು ಅಯೋಜಿಸಲಾಗಿದ್ದ್ಲು ಎಲ್ಲಾ ಸಾರ್ವಜನಿಕರು ಈ ಶಿಬಿರದಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕೆಎಫ್‌ಐಎಲ್ ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಡಾ. ಪಿ. ನಾರಾಯಣರವರು ಮನವಿ ಮಾಡಿಕೊಂಡಿರುತ್ತಾರೆ ಎಂದು ಸಿಎಸ್‌ಆರ್ ಮತ್ತು ಆಡಳಿತ ವ್ಯವಸ್ಥಾಪಕರಾದ ಉದ್ಧವ್ ಕುಲಕರ್ಣಿ ಅವರು ತಿಳಿಸಿದ್ದಾರೆ.
More Stories
ದಾನಿ ಸುಬ್ಬಾರೆಡ್ಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಹಂಪಾಪಟ್ಟಣ ನಾಗರಿಕರು..
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವತಿಯಿಂದ ಶಿಕ್ಷಕರ ದಿನಾಚರಣೆ
ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ವಿತರಿಸಿದ ಮುಖ್ಯೋಪಾಧ್ಯಾಯರಾದ ಕಾಂಚನ