July 13, 2025

ನಿಂದನೆ ಅಪಮಾನಗಳಿಗೆ ಹೆದರದೆ ಮುನ್ನುಗ್ಗಿ :ಅಹಿಂದ ವೇದಿಕೆಯ ಜಿಲ್ಲಾಧ್ಯಕ್ಷ ಬುಡ್ಡಿ ಬಸವರಾಜ್

ಜೂಡಿ ನ್ಯೂಸ್ :

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಸೇವಾ ಹಾಗೂ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ 20ನೇ ವರ್ಷದ ಮಹಾದಾಸೋಹಿ ಕಲಬುರ್ಗಿ ಶರಣಬಸವೇಶ್ವರ ಪುರಾಣ ಕಾರ್ಯಕ್ರಮದ ಬಯಕೆ ಬುತ್ತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಹಿಂದ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ಬುಡ್ಡಿ ಬಸವರಾಜ್ ರವರು ಮಾತನಾಡಿದರು…

ವಿಶ್ವದಲ್ಲೇ ಸಾಮಾಜಿಕ ಕ್ರಾಂತಿ ಮಾಡಿದ ಬುದ್ದ ಬಸವ ಅಂಬೇಡ್ಕರ್ ಅವರಿಗೂ ಸಹ ಈ ಸಮಾಜ ಬಿಟ್ಟಿಲ್ಲ, ಆದ್ದರಿಂದ ಲೋಕ ಉದ್ಧಾರವನ್ನು ಮಾಡಿದ ಮಹಾತ್ಮರನ್ನು ಆದರ್ಶವಾಗಿಟ್ಟುಕೊಂಡು ಸಮಾಜದಲ್ಲಿ ಯಾವುದೇ ನಿಂದನೆ ಅಪಮಾನಗಳಿಗೆ ಕಿವಿ ಕೊಡದೆ ಸಮಾಜ ಸೇವೆ ಮಾಡಲು ಕಂಕಣ ಬದ್ಧರಾಗಿ ಇರಬೇಕೆಂದು ತಿಳಿಸಿದರು..

18ನೇ ಶತಮಾನದ ಶರಣ ಕಲಬುರ್ಗಿ ಶರಣಬಸವೇಶ್ವರರು ಜಾತ್ಯತೀತ ನಾಯಕರಾಗಿ 12ನೇ ಶತಮಾನದ ಶರಣರನ್ನು ಆದರ್ಶವಾಗಿಟ್ಟುಕೊಂಡು ಕಲ್ಬುರ್ಗಿಯನ್ನೇ ಕಲ್ಯಾಣವನ್ನಾಗಿ ಮಾಡಿದ ಮಹಾಮಹಿಮ ಶರಣಬಸವೇಶ್ವರರು, ಸಂಸಾರಿಕ ರಾಗಿದ್ದರೂ ಸಹ ಮಹಾ ಭಕ್ತಿಯ ವಿರಾಗಿಯಾಗಿ ಮನುಕುಲವನ್ನು ಉದ್ದರಿಸಿದವರು ಶರಣರು.. ಇಂದಿನ ಪೀಳಿಗೆಗೆ ನಿಜವಾದ ಹೀರೋಗಳೆಂದರೆ ಅವರೇ ತಂದೆ ತಾಯಿಗಳು ಗುರು ಹಿರಿಯರು, ಸಿನಿಮಾ ಹುಚ್ಚು ಜೂಜಾಟ ಇಂತಹ ಸಾಮಾಜಿಕ ಪಿಡುಗುಗಳಿಂದ ಹೊರಬಂದು ಶರಣರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಮ್ಮ ಅತಿಥಿ ನುಡಿಗಳ ನಾಡಿದರು…

ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ ಸೊಂಡೂರಿನ ಪ್ರಭುದೇವರ ವಿರಕ್ತ ಮಠದ ಪ್ರಭು ಮಹಾಸ್ವಾಮಿಗಳು ಕೋಮು ಸೌಹಾರ್ದತೆ ಈ ನಾಡಿನಲ್ಲಿ ಹಳ್ಳಿಗಳಿಂದ ಸಾಧ್ಯ, ಧರ್ಮ ಎಂದರೇನು ಗುಡಿಗಳಲ್ಲಿಲ್ಲ ಮಸೀದಿಗಳಲ್ಲಿಲ್ಲ, ಚರ್ಚ್ ಗಳಲ್ಲಿಲ್ಲ ಧರ್ಮ ಇರುವುದು ಮನುಷ್ಯನ ಅಂತ ಕರ್ಣದಲ್ಲಿ, ಮನುಷ್ಯತ್ವದಲ್ಲಿ. ಎಂದು ತಿಳಿಸಿ ಪುರಾಣಗಳಿಂದ ಜನರನ್ನು ಹೆಚ್ಚಿಸುವ ಕಾರ್ಯ ನಡೆಯಬೇಕಾಗಿದೆ, ಹೆಣ್ಣು ಮಕ್ಕಳು ಮೌಢ್ಯದಿಂದ ದೂರವಾಗಿ ಶರಣರ ನಿಜದ ಅರಿವನ್ನು ಪಡೆದುಕೊಂಡು ಬದುಕನ್ನು ಕಟ್ಟಿಕೊಳ್ಳಬೇಕು, ರಾಘವಾಂಕರು ಜನ ಬದುಕಲಿ ಜಗ ಉಳಿಯಲಿ ಎಂದು ಸಾಹಿತ್ಯ ರಚಿಸಿ ಈ ನಾಡನ್ನು ಉದ್ದರಿಸಿದರು, ಹಾಗೆಯೇ 12ನೇ ಶತಮಾನದ ಬಸವ ಶರಣರು ಜನರ ಮಧ್ಯ ಅನುಭವ ಮಂಟಪ ನಿರ್ಮಾಣ ಮಾಡಿ ಸರ್ವರಿಗೂ ವ್ಯಕ್ತಿ ಗೌರವ ಸಮಾನತೆ, ದಾಸೋಹ ಕಾಯಕ ಎಂಬ ವಿಶಿಷ್ಟ ಪರಿಕಲ್ಪನೆಗಳನ್ನು ಜಾಗತಿಕ ಮಟ್ಟಕ್ಕೆ ತಿಳಿಸಿದರು, ಇಂತಹ ಬಸವೇಶ್ವರರನ್ನು ಆದರ್ಶವಾಗಿಟ್ಟುಕೊಂಡು 18ನೇ ಶತಮಾನದ ಕಲಬುರಗಿ ಶರಣಬಸವೇಶ್ವರರು ಸಮಾಜವನ್ನ ಉದ್ದಾರ ಮಾಡಿ ಕೃಷಿ ಕಾಯಕಕ್ಕೆ ದಾಸೋಹಕ್ಕೆ ಪ್ರಾಮುಖ್ಯತೆಯನ್ನು ನೀಡಿದರು,ವಿಜಯನಗರ ಸಾಮ್ರಾಜ್ಯದಲ್ಲಿ ಪ್ರೌಢದೇವರಾಯ ಶ್ರೀ ಕೃಷ್ಣದೇವರಾಯ ಆಡಳಿತದಲ್ಲಿ ರೈತರಿಗೆ ಅತ್ಯಂತ ಶ್ರೇಷ್ಠವಾದ ಸ್ಥಾನಮಾನ ನೀಡಲಾಗಿತ್ತು, ಆದ್ದರಿಂದ ಈ ಜಗತ್ತಿನಲ್ಲಿ ರೈತನೇ ಸಾರ್ವಭೌಮ, ರೈತನೇ ಈ ದೇಶದ ಈ ಜಗತ್ತಿನ ಬೆನ್ನೆಲುಬು ರೈತರಿಗೆ ಸಿಗಬೇಕಾದ ಗೌರವ ಎಲ್ಲೆಡೆ ಸಿಗಬೇಕೆಂದು ತಿಳಿಸಿದರು, ಈ ನಾಡಿನಲ್ಲಿ ಶರಣ ಪರಂಪರೆಯ ಲಿಂಗಾಯತ ಮಠಗಳಿಂದ ಅನ್ನ ಅರಿವು ಅಕ್ಷರ ಎಂಬ ತ್ರಿವಿಧ ದಾಸೋಹದ ಮೂಲಕ ಜಾತಿ ಧರ್ಮ ಭೇದಗಳನ್ನು ತೊರೆದು ಸಮಾಜಕ್ಕೆ ಬೆಳಕಾದ ಶರಣ ಪರಂಪರೆಯ ಮಠಗಳು ಎಲ್ಲಾ ಕಾಲಕ್ಕೂ ಗೌರವಕ್ಕೆ ಅರ್ಹ, ಆದ್ದರಿಂದ ಸ್ವಾಮಿಗಳು ಸಹ ನೈತಿಕ ಹಕ್ಕನ್ನು ಬೆಳೆಸಿಕೊಂಡು ಸಮಾಜವನ್ನು ತಿದ್ದುವ ಕಾರ್ಯ ಮಾಡಬೇಕೆಂದು ತಿಳಿಸಿದರು.. ಇಂತಹ ಉಪಯುಕ್ತ ಕಾರ್ಯಕ್ರಮ ವಿಜಯನಗರ ಜಿಲ್ಲೆಯಲ್ಲಿ ನಡೆಯುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ಶರಣಬಸವೇಶ್ವರ ಪುರಾಣ ಸಮಿತಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು, ಸರ್ವರು ಶರಣ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಮ ಸಮಾಜ ಕಟ್ಟುವಲ್ಲಿ ಸರ್ವರು ಪಣ ತೊಡಬೇಕೆಂದು ತಿಳಿಸಿದರು,ಈ ಸಂದರ್ಭದಲ್ಲಿ ಅತಿಥಿಗಳಾಗಿ ಟಿ ಹುಲಗಪ್ಪ, ಕೇಶವರಾಯನ ಬಂಡಿ ಗ್ರಾಮದ ಗಣೇಶ್, ಶಿವ ನಾಗಪ್ಪ, ಹುಲಿಗೆಮ್ಮ ವೇದಿಕೆ ಮೇಲೆ ಉಪಸ್ಥಿತರಿದ್ದರು. ಶರಣರ ಪುರಾಣ ಪ್ರವಚನಕಾರರಾಗಿ ಓಂ ಗುರೂಜಿ ಓಂ ಸುಕುಮಾರ , ಯೋಗಾಶ್ರಮ ಸಂಸ್ಥೆ ಕುಳವಳ್ಳಿ ಬೆಳಗಾವಿ, ಸಂಗೀತ ಸೇವೆ ಶ್ರೀ ದೀಪಕ್ ಸಿಂಗ್ ಬಿ ಅಜೇರಿ ಆಕಾಶವಾಣಿ ಕಲಾವಿದರು ತಾಳಿಕೋಟೆ, ತಬಲಾ ಸಾಥ್ ರಾಜಶೇಖರ ಗೆಜ್ಜೆ ರುಕ್ಮಾಪುರ,

ಕಾರ್ಯಕ್ರಮದಲ್ಲಿ ಕೇಶವರಾಯನಬಂಡಿಯ ಸಮಸ್ತ ಸದ್ಭಕ್ತರು ಹಂಪಾಪಟ್ಟಣ ಗ್ರಾಮದ ಸುತ್ತಮುತ್ತಲಿನ ಸದ್ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಪುರಾಣ ಸಮಿತಿಯ ಸದಸ್ಯರಾದ ಎಚ್ ಶಿವಾನಂದ್, ಬುಳ್ಳನ ಗೌಡ್ರು, ಈಶ್ವರ ಗೌಡ್ರು, ಉಪ್ಪಾರ್ ನಾಗಪ್ಪ, ತಳವಾರ್ ಬಿದ್ದಪ್ಪ, ಮಾಲ್ವಿ ಕಿಟ್ಟಪ್ಪ, ಕೊಟ್ರೇಶ್, ಸಮಿತಿಯ ಇತರೆ ಸದಸ್ಯರಿದ್ದರು, ಹಂಪಾಪಟ್ಟಣ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರೂ ಕಾರ್ಯಕ್ರಮದ ನಿರೂಪಣೆಯನ್ನು ಮಾತಾ ಸೇವಾ ಟ್ರಸ್ಟ್ ಅಧ್ಯಕ್ಷರಾದ ಜಿ ಶ್ರೀನಿವಾಸ್, ಸ್ವಾಗತ ಎಚ್ ಶಿವಾನಂದ್,ವಂದನೆ ನಾಗರಾಜ್ ಗಂಟಿ ನೆರವೇರಿಸಿದರು.