July 13, 2025

ಪುಸ್ತಕ ಖರೀದಿಗೆ ಅರ್ಜಿ ಆಹ್ವಾನ

ಜೂಡಿ ನ್ಯೂಸ್ :

ಕೊಪ್ಪಳ ಫೆಬ್ರವರಿ 25 : ಕಲ್ಯಾಣ ಕರ್ನಾಟಕ ಭಾಗದ ಲೇಖಕರಿಗೆ ಉತ್ತೇಜನ ನೀಡಲು ಹಾಗೂ ಈ ಭಾಗದ ಲೇಖಕರು ಬರೆದ ಪುಸ್ತಕಗಳನ್ನು ಪರಿಚಯಿಸುವ ಪ್ರಮುಖ ಉದ್ದೇಶದ ಹಿನ್ನಲೆಯಲ್ಲಿ  ಹಾಗೂ ಕಲ್ಯಾಣ ಕರ್ನಾಟಕ ಭಾಗದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಸಾರ್ವಜನಿಕರಿಗೆ ಓದುವ ಉತ್ತೇಜನ ನೀಡಲು ಕೆ.ಕೆ.ಆರ್.ಡಿ.ಬಿ. ಕಲಬುರಗಿ ಮ್ಯಾಕ್ರೋ ಯೋಜನೆಯಡಿ ಸ್ಥಳೀಯ ಲೇಖಕರಿಂದ 2018-19ನೇ ಸಾಲಿನ ಜನೇವರಿ-2018 ರಿಂದ 2023-24 ನೇ ಸಾಲಿನ ಡಿಸೆಂಬರ-2023 ರವರೆಗೆ ಪ್ರಥಮವಾಗಿ ಮುದ್ರಣಗೊಂಡು ಸಾಹಿತ್ಯ/ಲಲಿತಕಲೆ/ವಿಜ್ಞಾನ/ಮಾನವಿಕ/ವೈದ್ಯಕೀಯ/ತಾಂತ್ರಿಕ/ಸ್ಪರ್ಧಾತ್ಮಕ/ಪರಾಮಾರ್ಶನ ಕೃತಿಗಳು ಹಾಗೂ ಮಕ್ಕಳ ಸಾಹಿತ್ಯ/ನವಸಾಕ್ಷರರ ಕೃತಿಗಳು ಇತ್ಯಾದಿ ವಿಷಯಗಳ ಕನ್ನಡ/ಆಂಗ್ಲ/ಇತರೆ ಭಾರತೀಯ ಭಾಷೆಯ ಗ್ರಂಥಗಳ ಆಯ್ಕೆಗೆ ಲೇಖಕರು, ಲೇಖಕ ಪ್ರಕಾಶಕರು, ಪ್ರಕಟಣಾ ಸಂಸ್ಥೆಗಳು ವಿತರಕರಿಂದ ಪುಸ್ತಕಗಳನ್ನು ಅಹ್ವಾನಿಸಿದೆ.
ಸದರಿ ಪುಸ್ತಕಗಳ ಖರೀದಿಗಾಗಿ, ಮುಖ್ಯ ಗ್ರಂಥಾಲಯಾಧಿಕಾರಿ ಕಛೇರಿಯಲ್ಲಿ ಅರ್ಜಿ ಪಡೆದು ದಿನಾಂಕ 11.03.2025 ರ ಸಂಜೆ 5 ಘಂಟೆಯ ಒಳಗಾಗಿ ಮುಖ್ಯ ಗ್ರಂಥಾಲಯಾಧಿಕಾರಿ ಕಛೇರಿ ಡಾ ಬಿ.ಆರ್ ಅಂಬೇಡ್ಕರ್ ರೀಡಿಂಗ್ ಸೆಂಟರ್ ಎನ್.ಜಿ.ಓ ಕಾಲೋನಿ ಕಿನ್ನಾಳ ರಸ್ತೆ ಕೊಪ್ಪಳ ಇಲ್ಲಿಗೆ ಅರ್ಜಿಯೊಂದಿಗೆ ಪುಸ್ತಕದ ಒಂದು ಪ್ರತಿ, ಕಾಪಿರೈಟಿನ ನೊಂದಣಿಯ ದೃಡೀಕರಿಸಿದ ನಕಲು ಪ್ರತಿ, ವಿತರಕರು ಸರಬರಾಜು ಹಕ್ಕನ್ನು ಪಡೆದಿದ್ದಲ್ಲಿ ಅದರ ನಕಲು ಪ್ರತಿಯನ್ನು  
ಈ ದಾಖಲೆಗಳನ್ನು ಕಡ್ಡಾಯವಾಗಿ ಲಗತ್ತಿಸಿ ಸಲ್ಲಿಸಲು ಮುಖ್ಯ ಗ್ರಂಥಾಲಯಾಧಿಕಾರಿ ಜಿಲ್ಲಾ ಕೇಂದ್ರ ಗ್ರಂಥಾಲಯ ಕೊಪ್ಪಳ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.