July 12, 2025

ಮಹಾ ಶಿವಯೋಗಿ ಒಪ್ಪತ್ತೇಶ್ವರ ಸ್ವಾಮಿಗಳ ರಥೋತ್ಸವ 

ಜೂಡಿ ನ್ಯೂಸ್ :

ಜಿ.ವಿ.ಸುಬ್ಬರಾವ್- 

ಮರಿಯಮ್ಮನಹಳ್ಳಿ:ಕರ್ನಾಟಕದಲ್ಲಿ ಅನೇಕ ಪವಾಡಪುರುಷರು,ತಪಸ್ವಿಗಳು, ಸತ್ಪುರುಷರು, ಬಸವಾದಿಶರಣರು,ಮಹಾಶಿವಯೋಗಿಗಳು, ವಿರಕ್ತರು,ಸಂತರು, ಹಲವಾರು ಜನಮಹಾತ್ಮರು ಆಗಿಹೋಗಿದ್ದಾರೆ. ಇವರೆಲ್ಲರ ಸಾಲಿನಲ್ಲಿ ಬರುವ ಒಪ್ಪತ್ತೇಶ್ವರಯ್ಯರವರು ಒಬ್ಬರು. ಇಂಥ ಪವಾಡ ಪುರುಷ,ಮಹಾತಪಸ್ವಿ, ಪವಾಡಪುರುಷರಾದ ಗರಗ ನಾಗಲಾಪುರದ ಶ್ರೀ ಒಪತ್ತೇಶ್ವರಸ್ವಾಮಿ ಮಹಾಶಿವ ಯೋಗಿಗಳು ಒಬ್ಬರು.ಕ್ರಿ.ಶ. 15ನೇ ಶತಮಾನದಲ್ಲಿ ಶ್ರೀಗುರು ಒಪ್ಪತ್ತೇಶ್ವರ ಮಹಾಶಿವಯೋಗಿಗಳವರಿಂದ ಪ್ರಾರಂಭವಾಗಿರುವ ಶ್ರೀಮಠದ ಇತಿಹಾಸವು ಇಂದಿನವರೆಗೆ ನಿರಂತರವಾಗಿ ಸಮಾಜೋ-ಧಾರ್ಮಿಕ, ಸಮಾಜೋ-ಸಾಂಸ್ಕೃತಿಕ ವಿಷಯಗಳಲ್ಲಿ ಸೇವೆಯನ್ನು ಸಲ್ಲಿಸುತ್ತ ಬಂದಿದೆ.

ಒಪ್ಪತ್ತಯ್ಯ:

ನಾಗಲಾಪುರ ಶ್ರೀ ಒಪ್ಪತ್ತೇಶ್ವರಸ್ವಾಮಿಯ ತಪೋ ಭೂಮಿಯಾಗಿತ್ತು. ಲೋಕಕಲ್ಯಾಣಕ್ಕಾಗಿ ಅನೇಕಸಂತರು, ಪವಾಡಪುರುಷರು ವಿಜಯನಗರ ಸಾಮಾಜ್ಯದ ಕಾಲದಲ್ಲಿ ಕಾಣಬರುತ್ತಿರುತ್ತಾರೆ. ಅಂಥ ಅವತಾರಿಪುರುಷರಲ್ಲಿ ಒಬ್ಬರಾದ ಗರಗ ನಾಗಲಾಪುರದ ಶ್ರೀಗುರುಒಪ್ಪತ್ತೇಶ್ವರರು, ವಿಜಯನಗರದ ದೊರೆ ಪ್ರೌಢದೇವರಾಯನ ಕಾಲ ನಂತರ ಅವರ ಮಗ ಸದಾಶಿವರಾಯನ ಕಾಲದಲ್ಲಿ ಪ್ರೌಢದೇವರಾಯನ ಭಕ್ತಿ ಸೇವೆಯಲ್ಲಿ ಮಿಂದಿದ್ದ ಇಲ್ಲಿನ ಅನೇಕ ಪವಾಡ ಪುರುಷರು ಇವರ ಅಗಲಿಕೆಯಿಂದ ಶೋಕಿತರಾಗಿ ದಶದಿಕ್ಕುಗಳಿಗೆ ಚದುರಿದರು, ಅವರಲ್ಲಿ ಶ್ರೀ ಗುರುಒಪತ್ತೇಶ್ವರರು ಕಲ್ಯಾಣ ಕಾರ್ಯ ಕೈಗೊಂಡು ಇಂದಿನ ಗರಗ ನಾಗಲಾಪುರ (ಮ್ಯಾಸರಹಟ್ಟಿ) ಗ್ರಾಮಕ್ಕೆ ಬಂದರು.

ದಿನವಿಡೀ ಈ ಭಾಗದಲ್ಲಿ ಸಂಚರಿಸುತ್ತಾ ಶ್ರೀ ಒಪತ್ತೇಶ್ವರಯ್ಯರವರು ವೇದ,ಪುರಾಣ, ಪ್ರವಚನಗಳ ಮೂಲಕ, ಆಧ್ಯಾತ್ಮಿಕ ಜಾಗೃತಿ ಮೂಡಿಸುತ್ತಿದ್ದರು.ಪ್ರತಿದಿನ ಒಂದು ಬಾರಿ ಪ್ರಸಾದ ಸೇವಿಸುತ್ತಿರುವುದರಿಂದಲೇ ಇವರಿಗೆ ಭಕ್ತರು.ಒಪ್ಪತ್ತೇಶ್ವರ,ಒಪ್ಪತ್ತಯ್ಯ ಎಂದೇ ಕರೆಯುತ್ತಿದ್ದರು.

ಜಾಗೃತಿ:

ಇವರು ವೇದ,ಪುರಾಣ,ಪ್ರವಚನಗಳ ಮೂಲಕ ಜನರಿಗೆ ಅರಿವು ಮೂಡಿಸುತ್ತಿದ್ದರಿಂದ ಸುತ್ತಲಿನ ಅನೇಕ ಗ್ರಾಮಗಳ ಜನರು ಇವರ ಶಿಷ್ಯರಾಗಿ ಇವರ ಬಳಗಸೇರಿದರು,ಕಾಲಾನಂತರ ದಟ್ಟ ಅಭಯಾರಣ್ಯದಂತಿದ್ದ ಮ್ಯಾಸರ ಹಟ್ಟಿಯಲ್ಲಿ ಒಪ್ಪತ್ತಿನ ಅಯ್ಯ ಜೀವಸಮಾಧಿಯಾಗಿ ಇಂದಿಗೂ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದಾರೆ.

ಐತಿಹಾಸಿಕ ಹಿನ್ನೆಲೆ:

ದಕ್ಷಿಣಕಾಶಿಯೆಂದೇ ಪ್ರಸಿದ್ಧವಾದಪಂಪಾಕ್ಷೇತ್ರದ(ಹಂಪಿ) ಸನಿಹದಲ್ಲಿರುವ ಗರಗ ನಾಗಲಾಪುರಕ್ಕೆ ವಿಹಾರಕ್ಕೆಂದು ಒಮ್ಮೆ ವಿಜಯನಗರ ಸಾಮ್ರಾಜ್ಯದ ದೊರೆ ತಮ್ಮ ಮಹಾರಾಣಿಯೊಂದಿಗೆ ವಿಹಾರಕ್ಕೆಂದು ಬರುತ್ತಿರುತ್ತಾರೆ.ಹೀಗೆ ಒಮ್ಮೆ ಒಂದು ದಿನ ಬಂದಾಗ,ಮಹಾರಾಣಿಯೊಂದಿಗೆ ವಿಹಾರಕ್ಕೆಂದು ಒಮ್ಮೆ ಒಂದು ದಿನ ಬಂದಾಗ, ಮಹಾರಾಣಿಗೆ ಅನತಿ ದೂರದಲ್ಲಿ ಒಂದು ಜ್ಯೋತಿಯ ಪ್ರಖರತೆ ಕಂಡು ಬಂದಿತು, ನಂತರ ಜ್ಯೋತಿಯು ರಾಣಿಯ ಸನಿಹ ಬಂದಿತು, ಮಹಾರಾಣಿ ತನ್ಮಯತೆಯಲ್ಲಿ ಜ್ಯೋತಿಯನ್ನು ಹಿಂಬಾಲಿಸುತ್ತಾ ನಡೆದಳು, ಜ್ಯೋತಿಯು ಒಪತ್ತೇಶ್ವರನ ಸಮಾಧಿಯ ಸ್ಥಳಕ್ಕೆ ಬಂದಿತು.ನಂತರ ಜ್ಯೋತಿ ಮತ್ತು ಮಹಾರಾಣಿಯನ್ನು ಸದಾಶಿವರಾಯನ ಬಳಿಗೆ ಬಿಟ್ಟು ಮಾಯವಾಯಿತು. ಕೆಲ ಕ್ಷಣಗಳಲ್ಲಿ ನಡೆದ ಘಟನೆಯಿಂದ ಆಶ್ಚರ್ಯ ಚಕಿತಳಾದ ರಾಣಿ, ದೊರೆಗೆ ಈ ವಿಷಯ ತಿಳಿಸಿದರು. ವಿಷಯ ಅರಿತ ಸದಾಶಿವರಾಯ,ಸಮಾದಿ ಸ್ಥಳದಲ್ಲಿ ಒಂದು ಸುಂದರ ಮಠ ನಿರ್ಮಿಸಿದರು.

ಮ್ಯಾಸರಹಟ್ಟಿ ನಾಗಲಾಪುರ ಆಗಿದ್ದು:

ಸದಾಶಿವರಾಯರ ತನ್ನತಾಯಿ ನಾಗಲಾಂಬಿಕೆ ದೇವಿಯ ಸವಿನೆನಪಿಗೆ ಮ್ಯಾಸರಹಟ್ಟಿ, ಗ್ರಾಮಕ್ಕೆನಾಗಲಾಪುರ ಎಂದು ನಾಮಕರಣ ಮಾಡಿದನೆಂದು ಪ್ರತೀತಿ ಇದೆ. ಹೀಗೆ ಅನೇಕ ಐತಿಹ್ಯಗಳಿರುವ ಶ್ರೀ ಒಪತ್ತೇಶ್ವರಸ್ವಾಮಿ ಈ ಭಾಗದ ಜನರ ಆರಾಧ್ಯದೈವ. ಅಲ್ಲದೇ ಹರಪನಹಳ್ಳಿಯ ಪಾಳೆಗಾರ ಸೋಮಶೇಖರ ನಾಯಕಕೂಡ ಶ್ರೀಒಸತ್ತೇಶ್ವರರ ಭಕ್ತನಾಗಿದ್ದ, ತನ್ನ ಎರಡನೇ ರಾಜಧಾನಿ ನಾರಾಯಣದೇವರಕೆರೆಗೆ ಭೇಟಿ ನೀಡಿದಾಗಲೆಲ್ಲಾ ನಾಗಲಾಪುರ ಗ್ರಾಮದಲ್ಲಿನ ಶ್ರೀಓಪತ್ತೇಶ್ವರಸ್ವಾಮಿ ಮಠಕ್ಕೆ ಭೇಟಿ ನೀಡಿ,ತನ್ನ ಸೇವೆ ಸಲ್ಲಿಸುತ್ತಿದ್ದನೆಂದು ಪ್ರತೀತಿ ಇದೆ. ಸುಮಾರು 500 ವರ್ಷಗಳ ಹಿಂದೆ ಫಾಲ್ಗುಣಿ ಮಾಸದಲ್ಲಿ ಆರಂಭಗೊಂಡ ಶ್ರದ್ಧಾ,ಭಕ್ತಿಗಳಿಂದ ಸಾವಿರಾರು ಭಕ್ತಗಣದ ಮದ್ಯೆ ರಥೋತ್ಸವ ಜರುಗುತ್ತದೆ.

ರಥೋತ್ಸವ:

ಪ್ರಸ್ತುತ ಓಪ್ಪಶ್ವೇಶ್ವರ ಮಠವು ಹೊಸಪೇಟೆ,ಬಳ್ಳಾರಿ,ಹಾಲಕೆರೆಯ ಜಗದ್ಗುರು ಕೊಟ್ಟೂರುಸಾಮಿ ಸಂಸ್ಥಾನಮಠದ ಶಾಖಾಮಠವಾಗಿದೆ. ರಥೋತ್ಸವದ ನಿಮಿತ್ತ ಕಂಕಣ ಧಾರಣೆ, ಪ್ರತಿದಿನ ಗದ್ದುಗೆಗೆ ರುದ್ರಾಭಿಷೇಕ, ಗಣಾರಾಧನೆ, ಭಕ್ತರಮನೆಗಳಿಗೆ ಪಾದಪೂಜೆ, ನಂದಿ ಉಚ್ಚಾಯ, ಭಿಕ್ಷಾಟನೆ, ಭಕ್ತರೊಂದಿಗೆ ಗ್ರಾಮದ ವಿವಿಧೆಡೆಗಳಲ್ಲಿ ಅರಿವು ಮೂಡಿಸುವ ಸಂಚಾರ ಸೇರಿದಂತೆ ವಿವಿಧ ಸೇವೆಗಳು ನಡೆಯುವವು. ರಥೋತ್ಸವದಂದು ಸಾವಿರಾರು ಭಕ್ತರು, ಆಳವಾದ ಹಳ್ಳದಲ್ಲಿ ರಥವನ್ನು ಎಳೆಯುತ್ತಾರೆ. ಒಪ್ಪತ್ತೇಶ್ವರ ಸ್ವಾಮಿಗಳ ಪವಾಡ ಎಂಬಂತೆ ರಥವು ಹಳ್ಳದಲ್ಲಿಯೂ ಸರಾಗವಾಗಿ ಸಾಗುತ್ತದೆ.

ನಿರಂಜನಪ್ರಭು:

ಶ್ರೀ ಮಠಕ್ಕೆ ಮರಿಮಹಾಂತಸ್ವಾಮಿಗಳು 13ನೇ ಪೀಠಾಧಿಪತಿಗಳಾಗಿ ಮೂರು ದಶಕಗಳ ಮಠವನ್ನು ಮುನ್ನಡೆಸಿ,ಕಾಲವಾದ ನಂತರ ಮಠವನ್ನು ಮುನ್ನಡೆಸಲು ಹಾಲಕೆರೆಯ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಪೂಜ್ಯ ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು,ನಿರಂಜನಪ್ರಭು ಮಹಾಸ್ವಾಮಿಗಳನ್ನು ನೇಮಿಸಿದರು.ಪೂಜ್ಯರು ನೇಮಿಸಿದ ನಂತರ ಶ್ರೀಗಳು ದಲಿತರಕೇರಿಯ ಮೂಲಕ ಪುರಪ್ರವೇಶ ಮಾಡಿ,ಹೊಸ ಪರಂಪರೆಗೆ ನಾಂದಿ ಹಾಡಿದರು.

ಇವರ ಚರಪಟ್ಟಾಧಿಕಾರ ಕಳೆದವರ್ಷನಡೆದಿದೆ.ಸ್ವಾಮಿಗಳ ತರಬೇತಿ ವಿಶ್ವವಿದ್ಯಾಲಯ ಎಂದು ಪ್ರಸಿದ್ದಿ ಪಡೆದಿರುವ ಶ್ರೀಮದ್ವೀರಶೈವ ಶಿವಯೋಗಮಂದಿರ ಸಂಸ್ಥೆಯಲ್ಲಿ ಶಿವಯೋಗ,ಸಂಸ್ಕೃತ,ಯೋಗಶಾಸ್ತ್ರ, ವಚನಶಾಸ್ತ್ರ,ತತ್ವಶಾಸ್ತ್ರ,ಸಂಗೀತ ಮತ್ತು ಅಧ್ಯಾತ್ಮಿಕ ವಿಷಯಗಳನ್ನು ಅಭ್ಯಸಿಸಿದ್ದಾರೆ.ಇದರಪರಿಣಾಮ ಇವರು ಶ್ರೀಮಠವನ್ನು ಜನರಮಠವನ್ನಾಗಿ ರೂಪಿಸುತ್ತಿದ್ದಾರೆ.ದಿನೆ-ದಿನೆ ಈ ಭಾಗದಲ್ಲಿ ಜನಮಾನಸರಾಗಿ ಜನರಿಗೆ ಗುರುಗಳಾಗಿ,ಬುದ್ದಿಗಳಾಗಿ,ಸ್ವಾಮಿಜಿಯಾಗಿದ್ದಾರೆ.