July 12, 2025

ಕೊಪ್ಪಳ ಜಿಲ್ಲೆಯ ಉತ್ಸವಗಳಲ್ಲಿ ಹಣ ದುರುಪಯೋಗ : ರವಿ ಆಗೋಲಿ ಆರೋಪ

ಜೂಡಿ ನ್ಯೂಸ್ :

ಕೊಪ್ಪಳ: ಜಿಲ್ಲೆಯಲ್ಲಿ ಆಯೋಜಿಸಲಾದ 2023-24 ನೇ ಸಾಲಿನ ಕನಕಗಿರಿ ಉತ್ಸವ ಆಚರಣೆ, 2023-24 ಸಾಲಿನ ಆನೆಗೊಂದಿ ಉತ್ಸವ ಆಚರಣೆ, 2023 ನೇ ಸಾಲಿನ ಕೊಪ್ಪಳ ರಜತ ಮಹೋತ್ಸವ ಆಚರಣೆ ಈ ಮೂರು ಕಾರ್ಯಕ್ರಮದಲ್ಲಿ ಉಸ್ತುವಾರಿ ತೆಗೆದುಕೊಂಡವರು ಹಣ ದುರುಪಯೋಗವಾಗಿದೆ ಎಂದು ಆರೋಪಿಸಿ ಸೂಕ್ತ ರೀತಿಯ ತನಿಖೆ ಕೈಗೊಳ್ಳುವಂತೆ ರಾಜ್ಯಪಾಲರು, ಮುಖ್ಯಮಂತ್ರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಾಮಾಜಿಕ ಕಾರ್ಯಕರ್ತ ರವಿ ಆಗೋಲಿ ಮನವಿ ಸಲ್ಲಿಸಿದ್ದಾರೆ.

     ಅವರು ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ, ಉದ್ದೇಶಿಸಿ ದುರುಪಯೋಗವಾದ ಹಣದ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕನಕಗಿರಿ ಉತ್ಸವ ಆಚರಣೆ 2023-24 ಸಾಲಿನಲ್ಲಿ ಮಾರ್ಚ 02, 03 ರಂದು ಆಯೋಜನೆ. ಹಣ ಬಿಡುಗಡೆ 8 ಕೋಟಿ 23 ಲಕ್ಷ ರೂಪಾಯಿಗಳು,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆನೆಗೊಂದಿ ಉತ್ಸವ ಆಚರಣೆ 2023-24 ಸಾಲಿನಲ್ಲಿ ಮಾರ್ಚ 11, 12 ರಂದು ಆಯೋಜನೆ. ಹಣ ಬಿಡುಗಡೆ 50 ಲಕ್ಷ ರೂಪಾಯಿಗಳು,ಪ್ರವಾಸೋದ್ಯಮ ಇಲಾಖೆಯಿಂದ ಆನೆಗೊಂದಿ ಉತ್ಸವ ಆಚರಣೆ 2023-24 ನೇ ಸಾಲಿನಲ್ಲಿ ಮಾರ್ಚ 11, 12 ರಂದು ಆಯೋಜನೆ. ಹಣ ಬಿಡುಗಡೆ 1 ಕೋಟಿ ರೂಪಾಯಿಗಳು,

ಪ್ರವಾಸೋದ್ಯಮ ಇಲಾಖೆಯಿಂದ ಕೊಪ್ಪಳ ರಜತ ಮಹೋತ್ಸವ ಆಚರಣೆ 2023 ನೇ ಸಾಲಿನಲ್ಲಿ ಮಾರ್ಚ 10,12 ರಂದು ಆಯೋಜನೆ. ಹಣ ಬಿಡುಗಡೆ 50 ಲಕ್ಷ ರೂಪಾಯಿಗಳು ಮತ್ತು ಕಛೇರಿಯಿಂದ ಸಂಗ್ರಹಿಸಿದ ಅನುಧಾನ 50 ಲಕ್ಷಕ್ಕೂ ಹೆಚ್ಚು ಎಂದ ಅವರು ಸರಿಯಾದ ರೀತಿಯಲ್ಲಿ ದಾಖಲೆಗಳನ್ನು ಪರಿಶೀಲನೆ ಮಾಡದೆ ಹಣ ಬಿಡುಗಡೆ ಮಾಡಿರುವುದು ಕಂಡು ಬಂದಿರುತ್ತದೆ.

ಸರ್ಕಾರದ ಹಣ ಅನಗತ್ಯವಾಗಿ ಬಳಕೆ ಮಾಡಿರುವುದು ಕಂಡು ಬಂದಿರುತ್ತದೆ, ಖರ್ಚು ವೆಚ್ಚದ ವೋಚರ್ ದಾಖಲೆಗಳನ್ನು ನಿರ್ವಹಣೆ ಮಾಡದಿರುವುದು ಕಂಡು ಬಂದಿರುತ್ತದೆ ಸೂಕ್ತ ತನಿಖೆ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ರವಿ ಆಗೋಲೇ ತಿಳಿಸಿದ್ದಾರೆ.