ಜೂಡಿ ನ್ಯೂಸ್ :
ಹಂಪಿ ಉತ್ಸವದಲ್ಲಿ ಹಕ್ಕ ಬುಕ್ಕರನ್ನು ಸ್ಮರಿಸದೆ ಆಚರಿಸುತ್ತಿರುವುದು ಇತಿಹಾಸಕ್ಕೆ ಬಗೆದ ದ್ರೋಹ: ಶ್ರೀ ಸಿದ್ದರಾಮನಂದ ಮಹಾಸ್ವಾಮಿಗಳು ಆಕ್ರೋಶ
ಹೊಸಪೇಟೆ :- ಹಂಪಿ ಉತ್ಸವದಲ್ಲಿ ಹಕ್ಕ ಬುಕ್ಕರನ್ನು ಸ್ಮರಿಸದೆ ಆಚರಿಸುತ್ತಿರುವುದು ಇತಿಹಾಸಕ್ಕೆ ಬಗೆದ ದ್ರೋಹವಾಗುತ್ತದೆ ಎಂದು ಕಾಗಿನೆಲೆ ತಿಂಥಣಿಯ ಶ್ರೀಕನಕಗುರು ಪೀಠಾದೀಶ ಶ್ರೀಸಿದ್ದರಾಮನಂದ ಸ್ವಾಮಿಗಳು ಹೇಳಿದರು.
ಹೊಸಪೇಟೆಯ ಯಲ್ಲಾ ಲಿಂಗೇಶ್ವರ ಆಶ್ರಮದಲ್ಲಿ ಕನಕ ಗುರುಪೀಠದಿಂದ ವಿಜಯನಗರ ಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯವಹಿಸಿ ಶುಕ್ರವಾರ ಆಶಿರ್ವಚನ ನೀಡಿದರು.
ಹಕ್ಕ ಬುಕ್ಕರು 1336 ಏಪ್ರಿಲ್ 18 ರಂದು ತಮ್ಮದು ಸ್ವತಂತ್ರ ಸಾಮ್ರಾಜ್ಯವೆಂದು ಘೋಷಿಸಿಕೊಂಡ ದಿನವಾಗಿದೆ. ಕರ್ನಾಟಕ ರಾಜ್ಯದಲ್ಲಿದೆಯೇ ಹಕ್ಕರಾಯ ಒಡೆಯರ್ ಬುಕ್ಕರಾಯ ಒಡೆಯರು ಕುರುಬರೆಂದು ಸಾಬೀತುಪಡಿಸುವ 68ಕ್ಕೂ ಹೆಚ್ಚು ದಾಖಲೆಗಳು ಸಿಗುತ್ತವೆ. ಇನ್ನು ಆಂಧ್ರಪ್ರದೇಶ, ತಮಿಳುನಾಡು, ಗೋವಾ, ಕೇರಳ ತೆಲಂಗಾಣ ರಾಜ್ಯದಲ್ಲಿ ದಾಖಲೆಗಳು ಲಭಿಸಿವೆ.
ಹಂಪಿ ಉತ್ಸವದಲ್ಲಿ ಹಕ್ಕ ಬುಕ್ಕರನ್ನು ಸ್ಮರಿಸದೆ ಆಚರಿಸುತ್ತಿರುವುದು ಇತಿಹಾಸಕ್ಕೆ ಬಗೆದ ದ್ರೋಹವಾಗುತ್ತದೆ. ಹಕ್ಕ ಬುಕ್ಕರ ಗುರುಗಳು ಕ್ರಿಯಾಶಕ್ತಿ ಕಾಶಿಪತಿ ಒಡೆಯರ್ ಎಂಬುದು ದಾಖಲೆಗಳ ಮೂಲಕ ಸಾಬೀಜಾಗುತ್ತದೆ. ವಿದ್ಯಾರಣ್ಯರು ಸುಮಾರು ವರ್ಷಗಳ ನಂತರ ಹಕ್ಕ ಬುಕ್ಕರಿಗೆ ಜೊತೆಯಾಗುತ್ತಾರೆ. ಹಾಗಾಗಿ ವಿದ್ಯಾರಣ್ಯರಿಂದ ಹಕ್ಕ ಬುಕ್ಕರು ವಿಜಯನಗರ ಸ್ಥಾಪನೆ ಮಾಡಿದರು ಎಂಬುದು ಸುಳ್ಳಿನ ಕಥೆಯಾಗಿದೆ.
ಹಂಪಿಯನ್ನು ಕೇಂದ್ರವಾಗಿಸಿಕೊಂಡು ದಕ್ಷಿಣ ಭಾರತದ ಆರು ರಾಜ್ಯಗಳನ್ನು ಆಳ್ವಿಕೆ ಮಾಡಿದ ಜಗತ್ತಿನ ಶ್ರೀಮಂತ ಸಾಮ್ರಾಜ್ಯವಾದ ವಿಜಯನಗರದ ಆಡಳಿತದ ಸ್ಮರಣೆಗಾಗಿ ವರ್ಷಕ್ಕೊಮ್ಮೆಯಾದರೂ ಸರ್ಕಾರ ಸಂಪುಟದ ಸಭೆಯನ್ನು ಹೊಸಪೇಟೆಯಲ್ಲಿ ಮಾಡುವುದು, ಹಂಪಿ ಉತ್ಸವವನ್ನು ವಿಜಯನಗರ ಸ್ಥಾಪನೆಯ ದಿನವಾದ ಏಪ್ರಿಲ್ 18ರಂದು ಮಾಡುವುದು ಮತ್ತು ಹೊಸಪೇಟೆಯ ಪ್ರದೇಶದಲ್ಲಿ 15-16 ನೇ ಶತಮಾನದ ಹಂಪಿಯ ವೈಭವವನ್ನು ಪ್ರಾತ್ಯಕ್ಷಿಕೆಯ ಮೂಲಕ ಮರುಸ್ಥಾಪನೆ ಗೊಳಿಸುವ ಪ್ರಯತ್ನವನ್ನು ಸರ್ಕಾರ ಮಾಡಬೇಕೆಂದು ಮತ್ತು ಇದರಿಂದ ಈ ಭಾಗದ ಪ್ರವಾಸೋದ್ಯಮಕ್ಕೆ ಬೆಳೆಯುತ್ತದೆ. ಮತ್ತು ಇತಿಹಾಸಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ ಶ್ರೀ ಸಿದ್ದರಾಮಾನಂದ ಸ್ವಾಮೀಜಿಯವರು ಹೇಳಿದರು.
ಇದೇ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷರಾದ ಕುರಿ ಶಿವಮೂರ್ತಿಯವರು ಹಕ್ಕ ಬುಕ್ಕರ ಮತ್ತು ವಿಜಯನಗರ ಸಂಸ್ಥಾಪನಾ ದಿನಾಚರಣೆಯನ್ನು ಸರಕಾರದ ವತಿಯಿಂದ ಮುಂದಿನ ವರ್ಷಗಳಲ್ಲಿ ಮಾಡುವ ಕೆಲಸವಾಗಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಲಿಂಗಬೀರದೇವ ಸ್ವಾಮೀಜಿ, ಸಿದ್ದಯ್ಯ ಗುರುವಿನವರು, ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ಶ್ರೀಮತಿ ರಶ್ಮಿ ರಾಜಶೇಖರ್ ಹಿಟ್ನಾಳ, ಕೊಪ್ಪಳ ತಾಲೂಕು ಹಾಲುಮತ ಮಹಾಸಭಾ ಮುದ್ದಪ್ಪ ಜಿ ಬೇವಿನಹಳ್ಳಿ, ಕೊಪ್ಪಳ ಮಹಾಸಭಾ ಕಾರ್ಯದರ್ಶಿ ರಾಜಶೇಖರ್ ಬಂಡಿಹಾಳ, ಕೊಟ್ಟೂರಿನ ಭರಮಪ್ಪ, ಕಾಮೇಶ ವಕೀಲರು, ಕುಮರೆಪ್ಪ ಕುರಿ, ಘಂಟೆ ಸೋಮಶೇಖರ್, ಎರ್ರಿಸ್ವಾಮಿ ವಕೀಲರು, ಸಿದ್ದು ಕಾರಟಗಿ, ಮುತ್ತಣ್ಣ ಕಂಪ್ಲಿ, ಮಾರುತಿ ಸಿಂದೋಗಿ, ವಿಜಯನಗರ ಹಾಗೂ ಬಳ್ಳಾರಿ ಕೊಪ್ಪಳ ಜಿಲ್ಲೆಯ ನೂರಾರು ಜನರು ಭಾಗವಹಿಸಿದ್ದರು.
More Stories
ಗ್ರಾಮ ಪಂಚಾಯತಿ ಸದಸ್ಯನ ಸಂಭಾವನೆಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ…
ಮಠ-ಮಂದಿರಗಳಿಗೆ ಮಂಜೂರಾದ ಅನುದಾನ ಬಿಡುಗಡೆಗೆ 25% ಕಮೀಷನ್: ಜಿ. ಜನಾರ್ಧನ ರೆಡ್ಡಿ ಗಂಭೀರ ಆರೋಪ
ಹಂಪಾಪಟ್ಟಣದಲ್ಲಿ ಮೊಹರಂ ವಿಶೇಷ ಆಚರಣೆ