ಜೂಡಿ ನ್ಯೂಸ್ :
ಸ್ವಾರ್ಥರಹಿತ ಸಮಾಜಮುಖಿ ಸ್ನೇಹ ಮುಖ್ಯ : ಸಂತೋಷ್ ನಾಯ್ಕ
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದ ಶ್ರೀ ಚಂದ್ರಮೌಳೇಶ್ವರ ಪ್ರೌಢಶಾಲೆಯ ಆವರಣದಲ್ಲಿ ದಿನಾಂಕ. 20/4 ./2025. ಭಾನುವಾರ 11 ಗಂಟೆಗೆ 2002-2003 ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು…
ಹಿಂದಿನ ಕಾಲದಲ್ಲಿ ಹಣ ಇರಲಿಲ್ಲ.. ಆದರೆ ಎಲ್ಲರಲ್ಲಿ ಒಳ್ಳೆಯ ಗುಣ ಇರುತ್ತಿತ್ತು , ಆದರೆ ಪ್ರಸ್ತುತ ದಿನಮಾನದಲ್ಲಿ ಎಲ್ಲರಲ್ಲಿ ಹಣ ಇದ್ದು ಪ್ರೀತಿ ಸಹಕಾರ ಕಣ್ಮರೆಯಾಗಿದೆ, ಇಂದಿನ ಆಧುನಿಕ ಯುಗದಲ್ಲಿ ಮೊಬೈಲ್ ವ್ಯಾಮೋಹದಿಂದ ಮಾನವಿಯ ಸಂಬಂಧಗಳು ಕಣ್ಮರೆಯಾಗುತ್ತಿರುವುದು ಅತ್ಯಂತ ವಿಷಾದ ಸಂಗತಿ, ಇಂತಹ ಸಂದರ್ಭದಲ್ಲಿ ಸುಮಾರು 23 ವರ್ಷಗಳ ಬಳಿಕ ಹಂಪಾಪಟ್ಟಣ ಗ್ರಾಮದ ಚಂದ್ರಮೌಳೇಶ್ವರ ಪ್ರೌಢಶಾಲೆಯ 2002-2003ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಕಾರ್ಯಕ್ರಮವು ಸಮಾಜಕ್ಕೆ ಮಾದರಿಯಾದದ್ದು, ಜೀವನಕ್ಕೆ ಹಲವು ತಿರುಗುಗಳು ಇರುತ್ತವೆ, ಆದ್ದರಿಂದ ನಿಸ್ವಾರ್ಥವಾದ ಸ್ನೇಹ ಎಲ್ಲರಲ್ಲಿಯೂ ಮುಖ್ಯ ಸತತ ಪ್ರಯತ್ನದಿಂದ ಸಾಧನೆ ಸಾಧ್ಯ ಎಂದು ತಮ್ಮ ಜೀವನದ ಅನುಭವಗಳನ್ನು ತಮ್ಮ ಸಾಧನೆಯನ್ನು ತಮ್ಮ ಮುಖ್ಯ ಅತಿಥಿಯ ನುಡಿಗಳಲ್ಲಿ ತಿಳಿಸಿದರು….
ಕಾರ್ಯಕ್ರಮದಲ್ಲಿ ಇನ್ನೋರ್ವ ಅತಿಥಿಗಳಾಗಿ ಭಾಗವಹಿಸಿದ್ದ ರಮೇಶ್. ನಾಯಕ ರವರು ಸರ್ವರಲ್ಲಿ ಸಹಕಾರ ಗುಣ ಅತ್ಯಂತ ಮುಖ್ಯವಾದದ್ದು , ನಮ್ಮೆಲ್ಲರ ಹಳೆ ವಿದ್ಯಾರ್ಥಿಗಳ ಏಳಿಗೆಗೆ ನಮ್ಮೆಲ್ಲರ ಸಹಕಾರ ಬೆಂಬಲ ಸದಾಕಾಲ ಇರುತ್ತದೆ ಎಂದು, ನಮ್ಮ ಸ್ನೇಹ ಪ್ರೀತಿ ಸದಾ ಕಾಲ ಚಿರಕಾಲ ಇರಲಿ ಎಂದು ಸ್ನೇಹಕ್ಕೆ ಶುಭ ಹಾರೈಸಿದರು…
ಶಿಕ್ಷಕರಾದ ಹುಲಿಗೇಶ್ ಉಪ್ಪಾರ್ ರವರು ಎಲ್ಲಾ ಕಾರ್ಯಗಳಿಗಿಂತ ಶಿಕ್ಷಕನ ಸೇವಾ ಕಾರ್ಯ ಅತ್ಯಂತ ಶ್ರೇಷ್ಠವಾದದ್ದು, ಆದ್ದರಿಂದ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಅತ್ಯಮೂಲ್ಯವಾದದ್ದು ಎಂದು ಹೇಳಿದರು…
ಹಾಗೆ ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ತಮ್ಮ ಸ್ವ ಪರಿಚಯ, ವಿದ್ಯಾರ್ಥಿಯ ಜೀವನದ ಬಗ್ಗೆ ಮೆಲುಕು ಹಾಕಿ, ಅತ್ಯಂತ ಸ್ನೇಹ ಸೌಹಾರ್ದತೆಯಿಂದ ಛಾಯಾಚಿತ್ರಕ್ಕೆ ಪೋಸ್ ನೀಡಿ, ತಮ್ಮ ಅಮೂಲ್ಯ ವಿದ್ಯಾರ್ಥಿ ಸುವರ್ಣ ಯುಗವನ್ನು ಸ್ಮರಿಸಿ, ಸಂತೋಷಪಟ್ಟು, ತಮ್ಮ ಸ್ನೇಹಮಯ ಬದುಕನ್ನು ಗಟ್ಟಿಗೊಳಿಸಿಕೊಂಡರು..
2002-2003 ಹಳಿಯ ವಿದ್ಯಾರ್ಥಿಗಳಿಂದ ಈ ಸಾಲಿನ ವಿದ್ಯಾರ್ಥಿನಿಯರಿಗೆ ಅತ್ಯಂತ ಗೌರವ ಪೂರಕವಾಗಿ ಸನ್ಮಾನಿಸಲಾಯಿತು..
ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿನಿಯರು. ಸುಜಾತಾ. ಎನ್ ಹನುಮಕ್ಕ. ಅನಂತ. ಉಪ್ಪಾರ್ ಬಸಕ್ಕ. ಇಟ್ಟಿಗೆ ಹನುಮಕ್ಕ. ಕಮಲಾಕ್ಷಿ. ಮುನಿಸಿರ ಬೇಗಂ . ಹೊಸಳ್ಳಿ ಲಕ್ಷ್ಮಿ .ರುದ್ರೇಶ್. ನಿಂಗರಾಜ್. ಕೆ ಎಸ್.ಹುಲುಗಪ್ಪ ಮೊಮ್ಮದ್ ರಫಿ. ಚಂದ್ರ ನಾಯಕ್. ಎಚ್ ಡಿ ಪರಶುರಾಮ್ ಹೊಸಳ್ಳಿ ಹೇಮಣ್ಣ ಲೋಕೇಶ್ ನಾಯಕ್. ಎನ್ ಅರುಣ್ ಕುಮಾರ್. ವಿದ್ಯಾರ್ಥಿಗಳು.ಸ್ನೇಹಿತ ಬಳಗದವರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.. ನಾಗರಾಜ್ ಗಂಟೆ ನಿರೂಪಣೆ. ಸ್ವಾಗತ ಎ ಕೇಶವಮೂರ್ತಿ. ವಂದನಾರ್ಪಣ ಉಪ್ಪಾರ್ ಕನಕಪ್ಪ.
More Stories
ಗ್ರಾಮ ಪಂಚಾಯತಿ ಸದಸ್ಯನ ಸಂಭಾವನೆಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ…
ಮಠ-ಮಂದಿರಗಳಿಗೆ ಮಂಜೂರಾದ ಅನುದಾನ ಬಿಡುಗಡೆಗೆ 25% ಕಮೀಷನ್: ಜಿ. ಜನಾರ್ಧನ ರೆಡ್ಡಿ ಗಂಭೀರ ಆರೋಪ
ಹಂಪಾಪಟ್ಟಣದಲ್ಲಿ ಮೊಹರಂ ವಿಶೇಷ ಆಚರಣೆ