July 12, 2025

ಹಿರಿಯ ಚೇತನ ಸುಡುಗಾಡು ಸಿದ್ದ ವಿರೂಪಾಕ್ಷಪ್ಪ ಕಲ್ಯಾಣದವರು ಅವರಿಗೆ ಶ್ರದ್ಧಾಂಜಲಿ

ಜೂಡಿ ನ್ಯೂಸ್ :

ವಿರೂಪಾಕ್ಷಪ್ಪ ಕಲ್ಯಾಣದವರು ಅವರಿಗೆ ಶ್ರದ್ಧಾಂಜಲಿ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಜಾನಪದ ಚೇತನ ವಿರೂಪಾಕ್ಷಪ್ಪ ಕಲ್ಯಾಣದವರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಹಂಪಾಪಟ್ಟಣ ಗ್ರಾಮದ ಸುಡುಗಾಡು ಸಿದ್ದ ಬಾಂಧವರು..

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಸಾಂಸ್ಕೃತಿಕ ಗ್ರಾಮ ಹಂಪಾಪಟ್ಟಣ ಗ್ರಾಮದಲ್ಲಿ 17-5-2025 ರಂದು ಸಂಜೆ ಸುಡುಗಾಡು ಸಿದ್ದ ಜಾನಪದ ಕಲೆಯನ್ನು ಕರ್ನಾಟಕದಲ್ಲಿ ಮನೆ ಮಾತಾಗಿಸಿದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ವಿರುಪಾಕ್ಷಪ್ಪ ಕಲ್ಯಾಣದವರು ಹಿರಿಯ ಜಾನಪದ ಕಲಾವಿದರಿಗೆ ಹಂಪಾಪಟ್ಟಣ ಗ್ರಾಮದ ಸುಡುಗಾಡು ಸಿದ್ದ ಸಮಾಜದ ಬಾಂಧವರು ಮೌನಚರಣೆ ಮಾಡಿ ಶ್ರದ್ಧಾಂಜಲಿಯನ್ನು ಸಲ್ಲಿಸಿದರು…

ಈ ಸಂದರ್ಭದಲ್ಲಿ ಸುಡುಗಾಡು ಸಿದ್ದ ಸಮುದಾಯದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಸಮುದಾಯಕ್ಕೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ತಂದುಕೊಟ್ಟ ಧೀಮಂತ ವ್ಯಕ್ತಿ .. ಜಿಲ್ಲೆಯ ಹಿರಿಯ ಜಾನಪದ ಕಲಾವಿಧ ಎಂದು VSSN ಮಾಜಿ ಅಧ್ಯಕ್ಷರು SK ಮಹೇಶ ಮಾತನಾಡಿದರು..

ಇಡೀ ಭವ್ಯವಾದ ಸುಡುಗಾಡು ಸಿದ್ಧ ಜಾನಪದ ಸಂಸ್ಕೃತಿಯನ್ನು ಜಗತ್ತಿಗೆ, ಲೋಕಕ್ಕೆ ತಿಳಿಸಿ, ಸಮುದಾಯಕ್ಕೆ ರಾಜ್ಯಮಟ್ಟದಲ್ಲಿ ಉತ್ತಮವಾದ ಹೆಸರು ಕೀರ್ತಿ ತಂದುಕೊಟ್ಟ ಶ್ರೇಯಸ್ಸು ವಿರೂಪಾಕ್ಷಪ್ಪ ನವರಿಗೆ ಸಲ್ಲುತ್ತದೆ, ಹೊಸಪೇಟೆ ನಗರದ ಜಂಬುನಾಥನಹಳ್ಳಿ ಆಶ್ರಯ ಕಾಲೋನಿಯಲ್ಲಿ ನೆಲೆಸಿ ರಾಜ್ಯ ವರರಾಜ್ಯಗಳಲ್ಲಿಯೂ ಸಹ ಜಾನಪದ ವಿದ್ವತ್ ಮಾತು, ಜಾನಪದ ಕೈಚಳಕದ ಮೂಲಕ ಜನರಿಗೆ ಅರಿವು ಮನರಂಜನೆ ನೀಡುವ ಮೂಲಕ ಇಡೀ ಕರ್ನಾಟಕದಲ್ಲಿಯೇ ಹಿರಿಯ ಜಾನಪದ ಕಲಾವಿದರಾಗಿದ್ದು, ವಿರುಪಾಕ್ಷಪ್ಪ ಕಲ್ಯಾಣದವರು ಮಹಾರಾಷ್ಟ್ರ ತಮಿಳುನಾಡು ಕರ್ನಾಟಕ ರಾಜ್ಯದಲ್ಲಿ ಪ್ರದರ್ಶನ ನೀಡಿ, ಕರ್ನಾಟಕದ ಹಂಪಿ ಉತ್ಸವ ಮೈಸೂರು ದಸರಾ ಉತ್ಸವ, ಆಳ್ವಾಸ್ ನುಡಿಸಿರಿ ಉತ್ಸವ, ಜಾನಪದ ಉತ್ಸವ, ಹಲವಾರು ಪ್ರತಿಷ್ಠಿತ ಉತ್ಸವಗಳಲ್ಲಿ ಭಾಗಿಯಾಗಿ ತಮ್ಮ ಜ್ಞಾನಭರಿತವಾದ ಜಾನಪದ ಕೈಚಳಕವನ್ನು ಪ್ರದರ್ಶನ ನೀಡಿ ಜನ ಮನ್ನನೆ ಗಳಿಸಿದ ಜಾನಪದ ಚೇತನರಾಗಿದ್ದಾರೆ ತಮ್ಮ ಇಡೀ ಜೀವನದಕ್ಕೂ ಜಾನಪದ ಸೇವೆಯ ಮೂಲಕ ಭಗವಂತನಲ್ಲಿ ಲೀನರಾದ ವಿರೂಪಾಕ್ಷಪ್ಪನವರ ಜಾನಪದ ಸೇವೆ ಸೂರ್ಯ ಚಂದ್ರ ತಾರೆಗಳು ಇರುವಷ್ಟು ದಿನಗಳು ಅಮರ ಅವರ ನಿಸ್ವಾರ್ಥ ಸಮಾಜ ಸೇವೆ ಸರ್ವರಿಗೂ ಪ್ರೇರಣೆ.. ಎಂದು ಯುವ ಜಾನಪದ ಕಲಾವಿದ ನಾಗರಾಜ್ ಗಂಟಿ ಮಾತನಾಡಿದರು.

ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗ್ರಾಮದ ಜನನಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಕೇಶವ ಮೂರ್ತಿರವರು ನಮ್ಮ ಕರ್ನಾಟಕದಲ್ಲಿ ವಿಶಿಷ್ಟ ಜಾನಪದ ಪರಂಪರೆಯ ರೂವಾರಿಗಳಾಗಿದ್ದ ವಿರೂಪಾಕ್ಷಪ್ಪನವರು ನಮ್ಮೆಲ್ಲರ ನಗಲಿದ್ದು ಜಾನಪದ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಜಾನಪದ ಸೇವೆ ಸದಾ ಕಾಲ ಸ್ಮರಣೀಯ ಎಂದು ನುಡಿದರು…

ಇದೇ ಸಂದರ್ಭದಲ್ಲಿ ಹಿರಿಯರಾದ ಮುಡಿಮಿ ಅಯ್ಯಪ್ಪನವರು ವಿರೂಪಾಕ್ಷಪ್ಪನವರ ಅಮೋಘ ವ್ಯಕ್ತಿತ್ವದ ಬಗ್ಗೆ ಶ್ಲಾಘನೀಯ ವ್ಯಕ್ತಪಡಿಸಿದರು…

ಈ ಸಂದರ್ಭದಲ್ಲಿ ಹಿರಿಯ ಜಾನಪದ ಕಲಾವಿದರಾದ ಪೂಜಾರ್ ಮದ್ದಿ ಮಾಯಪ್ಪ,ಕಿನ್ನರಿ ಈರಪ್ಪ, ಕಿನ್ನರಿ ಭರ್ಮಪ್ಪ, ಮಾಜಿ VSSN ಸದಸ್ಯರಾದ ಸಣ್ಣ ಮಂಜುನಾಥ ಗಂಟಿ, ಪತ್ರಿ ಮಂಜುನಾಥ, ಜಿ ಮಾರುತಿ, ಕಾರ್ಮಿಕ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಹಡಗಿಲಿ ಖಾಜ, ಪೂಜಾರಿ ಮದ್ದಿದುರ್ಗೇಶ್, ಎಸ್ ಎಂ ವಿಠ್ಠಲ್, ಸಂತೋಷ್ ಗಂಟಿ, ಲಕ್ಕಣ್ಣ, ಗಿರೀಶ ಅಜ್ಜಯ್ಯ, ಮದ್ದಿ ಉಮೇಶ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಅಗಲಿದ ಜಾನಪದ ಚೇತನ ಸುಡುಗಾಡು ಸಿದ್ದ ವಿರುಪಾಕ್ಷಪ್ಪ ನವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು…