ಜೂಡಿ ನ್ಯೂಸ್ :
ಅದ್ದೂರಿಯಾಗಿ ಜರುಗಿ ಜನಮನ ಗೆದ್ದ ವಾಸವಿ ಜಯಂತಿ
ಹಂಪಾಪಟ್ಟಣ ಗ್ರಾಮದ ನಗರೇಶ್ವರ ದೇವಸ್ಥಾನದಲ್ಲಿ ದಿನಾಂಕ 7.05.2025ನೇ ಬುಧವಾರದಂದು ವಾಸವಿ ಕನ್ನಿಕಾ ಪರಮೇಶ್ವರಿ ಅಮ್ಮನವರ ಜಯಂತೋತ್ಸವ ಅದ್ದೂರಿ ಯಾಗಿ ಜರುಗಿತು ಎಂದು ಆರ್ಯವೈಶ್ಯ ಸಂಘದ ಕಾರ್ಯದರ್ಶಿ ಜಿ ಶ್ರೀನಿವಾಸ ಸಂತಸ ವ್ಯಕ್ತಪಡಿಸಿದರು.
ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ನಗರೇಶ್ವರ ಕನ್ನಿಕಾಪರಮೇಶ್ವರಿ ಹಾಗೂ ವಿಘ್ನೇಶ್ವರನಿಗೆ ಪಂಚಾಮೃತ ಅಭಿಷೇಕದೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ ಕರಿಯಮ್ಮ ದೇವಿ ದೇವಸ್ಥಾನದಿಂದ ಎಂಟು ಜನ ಮುತ್ತೈದೆಯರು ವಾಸವಿ ಅಮ್ಮನವರ “ಕಳಸ”ವನ್ನು ತೆಗೆದುಕೊಂಡು ಪಲ್ಲಕ್ಕಿ ಸೇವೆಯೊಂದಿಗೆ ವಾಸವಿ ಖಡ್ಗಗಳನ್ನು ಹೇಳುತ್ತಾ ಝೇಂಕಾರವನ್ನು ಹಾಕುತ್ತಾ ನಗರೇಶ್ವರ ದೇವಸ್ಥಾನವನ್ನು ತಲುಪಿ ಅಮ್ಮನವರ ಕಳಸಗಳು ವಿಸರ್ಜನೆಯಾದ ನಂತರ ವಾಸವಿ ಅಮ್ಮನವರ ತೊಟ್ಟಿಲು ಉತ್ಸವ ಪಟ ಹರಾಜು ಇದಾದ ನಂತರ ಹೋಮ ಕಾರ್ಯಕ್ರಮದಲ್ಲಿ ಪೂರ್ಣಹುತಿ ನಂತರ ಪ್ರಸಾದ ವಿನಿಯೋಗ ನಡೆಯಿತು
ಈ ಸಂದರ್ಭದಲ್ಲಿ ಗ್ರಾಮ ಪುರೋಹಿತರಾದ ಸತ್ಯನಾರಾಯಣ ಜೋಶಿ ಅವರಿಗೆ 80ನೇ ವರ್ಷದ ಹುಟ್ಟು ಹಬ್ಬದ ನಿಮಿತ್ತ ಆರ್ಯವೈಶ್ಯ ಸಂಘದವರು ಸನ್ಮಾನ ಮಾಡಿದರು.
ಹಾಗೂ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ಜೀವಿತ, ವೆಂಕಟರತ್ನ ಹಂಪಾಪಟ್ಟಣ, ಕೆ ಅರ್ಚನಾ ಹೊಸಪೇಟೆ ಹಾಗೂ, ಎಸ್ ವಿಠ್ಠಲ್ ಮಗಿಮಾವಿನಹಳ್ಳಿ, ಅವರಿಗೆ ಆರ್ಯವೈಶ್ಯ ಸಂಘದಿಂದ ಸನ್ಮಾನಿಸಲಾಯಿತು.
ಸುತ್ತಮುತ್ತಲಿನ ಹಳ್ಳಿಯ ಆರ್ಯವೈಶ್ಯ ಜನಾಂಗದ 40 ಕುಟುಂಬದವರು ಸೇರಿ ಬಹಳ ವಿಜೃಂಭಣೆಯಿಂದ ವಾಸವಿ ಜಯಂತಿಯನ್ನು ಆಚರಣೆ ಮಾಡಿದೆವು.
ಆರ್ಯವೈಶ್ಯ ಅಧ್ಯಕ್ಷರಾದ ಪೂರ್ಮಾ ಶ್ರೀನಾಥ್ ಇವರು ಗ್ರಾಮದಲ್ಲಿ ಆರ್ಯವೈಶ್ಯ ಕುಟುಂಬದ 8 ಮನೆಗಳಿದ್ದು ನಿರಂತರವಾಗಿ ದೇವಸ್ಥಾನದ ಕೆಲಸಗಳನ್ನು ಹೀಗೆ ಮುಂದುವರೆಸಿಕೊಂಡು ಬಂದಿದ್ದೇವೆ ಇದಕ್ಕೆಲ್ಲ ಕಾರಣರಾದ ಕುಲ ಬಾಂಧವರಿಗೆ ಅನಂತ ನಮನಗಳನ್ನು ಅರ್ಪಿಸುತ್ತೇನೆ ಎಂದರು.
ಈ ಒಂದು ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಸಂಘದ ಉಪಾಧ್ಯಕ್ಷರು ಪದಾಧಿಕಾರಿಗಳು ಪುರೋಹಿತರು ಮಹಿಳೆಯರು ಮುದ್ದು ಮಕ್ಕಳು ಉಪಸ್ಥಿತರಿದ್ದರು.
More Stories
ಗ್ರಾಮ ಪಂಚಾಯತಿ ಸದಸ್ಯನ ಸಂಭಾವನೆಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ…
ಮಠ-ಮಂದಿರಗಳಿಗೆ ಮಂಜೂರಾದ ಅನುದಾನ ಬಿಡುಗಡೆಗೆ 25% ಕಮೀಷನ್: ಜಿ. ಜನಾರ್ಧನ ರೆಡ್ಡಿ ಗಂಭೀರ ಆರೋಪ
ಹಂಪಾಪಟ್ಟಣದಲ್ಲಿ ಮೊಹರಂ ವಿಶೇಷ ಆಚರಣೆ