July 12, 2025

ಡಾ. ಮಾತ ಬಿ ಮಂಜಮ್ಮ ಜೋಗತಿ ಹೇಳಿಕೆ ;ಅವಮಾನಗಳೇ ಮನುಷ್ಯನ ಸಾಧನೆಯ ಮೆಟ್ಟಿಲುಗಳು

ಜೂಡಿ ನ್ಯೂಸ್ :

ಡಾ. ಮಾತ ಬಿ ಮಂಜಮ್ಮ ಜೋಗತಿ ಹೇಳಿಕೆ ;ಅವಮಾನಗಳೇ ಮನುಷ್ಯನ ಸಾಧನೆಯ ಮೆಟ್ಟಿಲುಗಳು

ಕುಕನೂರ : ತಾಲೂಕಿನ ಮಂಗಳೂರು ಗ್ರಾಮದಲ್ಲಿ ಸೋಮವಾರ ದಿವಸ ಬುದ್ಧ ಬಸವ ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ರವಿ ನಿಂಗಪ್ಪ ಆಗೋಲಿ ಪತ್ರಕರ್ತರು ಇವರ ನೇತೃತ್ವದಲ್ಲಿ ನೆಡೆದ ಸಮಾನತೆ ಬೆಳಕು ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಹಾಗೂ ರಸಮಂಜರಿ ಕಾರ್ಯಕ್ರಮ ಉದ್ದೇಶಿಸಿ ಉದ್ಘಾಟಕರಾಗಿ ಆಗಮಿಸಿದ ಡಾ ಮಾತಾ ಬಿ ಮಂಜಮ್ಮ ಜೋಗತಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು

ನಿಕಟ ಪೂರ್ವ ಅಧ್ಯಕ್ಷರು ಜಾನಪದ ಅಕಾಡೆಮಿ ಬೆಂಗಳೂರು ಮರಿಯಮ್ಮನಹಳ್ಳಿ ಅಮ್ಮನವರು ಮಾತನಾಡಿ ಅವಮಾನಗಳೇ ಮನುಷ್ಯನ ಯಶಸ್ಸಿನ ಮೆಟ್ಟಿಲುಗಳಾಗಿರುತ್ತವೆ, ಬುದ್ಧ ಬಸವ ಅಂಬೇಡ್ಕರ್ ರಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಜೀವನದಲ್ಲಿ ಒಳ್ಳೆಯ ಸಂಸ್ಕಾರ ಶಿಕ್ಷಣವನ್ನು ಪಡೆದುಕೊಳ್ಳಿ ಜಗತ್ತಿನಲ್ಲಿ ಎಲ್ಲರೂ ಕೂಡ ಸಮಾನರು ಯಾರು ದೊಡ್ಡವರಲ್ಲ ಯಾರು ಚಿಕ್ಕವರಲ್ಲ ಪ್ರತಿಯೊಬ್ಬರ ಆತ್ಮದಲ್ಲಿ ಕೂಡ ಪರಮಾತ್ಮನಿರುತ್ತಾನೆ ಒಳ್ಳೆಯ ಕಾರ್ಯವನ್ನು ಮಾಡಲು ಆಗದಿದ್ದರೂ ಪರವಾಗಿಲ್ಲ ಕೆಟ್ಟ ಕಾರ್ಯಗಳನ್ನು ಕೂಡ ಯಾರು ಮಾಡಬೇಡಿ, ನನಗೆ ಪದ್ಮಶ್ರೀ ಪ್ರಶಸ್ತಿ ಬರಲು ಕಾರಣ ನನ್ನ ಶ್ರಮ ಮತ್ತು ನನ್ನಲ್ಲಿ ಇರತಕ್ಕಂತಹ ಆತ್ಮವಿಶ್ವಾಸ ನನ್ನನ್ನು ಸಾಧನೆ ಮಾಡಲು ಪ್ರೇರೇಪಿಸಿತು, ಮಕ್ಕಳಿಗೆ ಕನ್ನಡ ಶಾಲೆಗಳಲ್ಲಿ

 ಕಡ್ಡಾಯವಾಗಿ ಶಿಕ್ಷಣವನ್ನು ನೀಡಬೇಕಾಗಿದೆ ಸಮಾನತೆ ಕಾರ್ಯಕ್ರಮ ನೋಡಿ ನನಗೆ ಬಹಳ ಖುಷಿಯಾಯಿತು ಎಂದರು. ಪ್ರಾಥಮಿಕವಾಗಿ ಶರಣಪ್ಪ ಉಮಚಗಿ ಇತಿಹಾಸ ಉಪನ್ಯಾಸಕರು ಮಾತನಾಡಿ ಬುದ್ಧ ಬಸವ ಅಂಬೇಡ್ಕರ್ ಅವರ ಆಶಯ ತತ್ವಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡರೆ ಪ್ರತಿಯೊಬ್ಬರೂ ಕೂಡ ಸಾಧಕರಾಗಿ ಗುರುತಿಸಿಕೊಳ್ಳುತ್ತಿರಿ. ಇಂತಹ ಒಂದು ಸಮಾನತೆ ಬೆಳಕು ಕಾರ್ಯಕ್ರಮ ಪ್ರತಿ ವರ್ಷ ಆಗಬೇಕು ಬೇಕು ಇದರಿಂದ ಬದಲಾವಣೆ ಕಾಣಲು ಸಾಧ್ಯವಾಗುತ್ತದೆ ಎತ್ತರದ ಗುರಿ ಮತ್ತು ಸತತ ಪ್ರಯತ್ನ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಹಾಗಾಗಿ 

 ಪ್ರತಿಯೊಬ್ಬರೂ ಕೂಡ ಒಂದು ಗುರಿಯನ್ನು ಹಿ ಟ್ಟುಕೊಂಡು ಅದರ ದೆಸೆಯಲ್ಲಿ ಸಾಗಬೇಕು ಎಂದರು. ಈರಪ್ಪ ಕುಡುಗುಂಟಿ ಸಮಾಜ ಸೇವಕರು ಮಾತನಾಡಿ ಬುದ್ಧ ಬಸವ ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರು ಓದಿ ತಿಳಿದುಕೊಳ್ಳಬೇಕು 

 ಅವರ ಜೀವನ ಪಯಣವೇ ನಮಗೆ ಮಾರ್ಗದರ್ಶನ ವಾಗುತ್ತದೆ ಎಂದರು. ಸಮಾಜಸೇವಕರು ಅಶೋಕ್ ತೋಟದ ಮಾತನಾಡಿ ಸಮಾನತೆ ಬೆಳಕು ಕಾರ್ಯಕ್ರಮ ಇದು ಒಂದು ವಿಶೇಷ ಕಾರ್ಯಕ್ರಮ, ಇಂತಹ ಕಾರ್ಯಕ್ರಮಗಳು ಪ್ರತಿ ಹಳ್ಳಿಗಳಲ್ಲಿ ಕೂಡ ಜರುಗಬೇಕು ಎಂದರು. ವಿಶ್ವನಾಥ್ ಎಂ ಮಾತನಾಡಿ

 ಬುದ್ಧ ಬಸವ ಅಂಬೇಡ್ಕರ್ ಅವರ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು ಕಾರ್ಯಕ್ರಮದಲ್ಲಿ ಮಂಜಮ್ಮ ಜೋಗುತಿ ಅಮ್ಮನವರಿಗೆ ಗ್ರಾಮಸ್ಥರಿಂದ ಉಡಿ ತುಂಬಾ ಕಾರ್ಯಕ್ರಮ ಕೂಡ ನೆರವೇರಿತು, ಸಾಧಕರಾದ ಪ್ರತಿಭಾ ಗೊಂಡಬಾಳ, ಪ್ರಜ್ವಲ್ ಸುರೇಶ್ ಮಡಿವಾಳ, , ಯಮನೂರಪ್ಪ ಬಂಗಾಳ ಗಿಡದ, ಸಾಧಕರಿಗೆ ವೇದಿಕೆಯಲ್ಲಿ ಸನ್ಮಾನಿಸಲಾಯಿತು, ಈ ಸಂದರ್ಭದಲ್ಲಿ ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಅರಳೇ ಹಿರೇಮಠ್ ಪೂಜ್ಯರು, ಗ್ರಾಮ್ ಪಂಚಾಯ್ತಿ ಅಧ್ಯಕ್ಷರಾದ ಸಕ್ರಪ್ಪ ಮಂಗಳಪ್ಪ ಚಿನ್ನುರು ಉಪಾಧ್ಯಕ್ಷರಾದ ಅನ್ನಪೂರ್ಣ ಸುರೇಶ್, ಈಶಪ್ಪ ದೊಡ್ಡಮನಿ, ಮ್ಯಾಗಳೇಶಿ, ಸುರೇಶ್ ಮಡಿವಾಳರ್, ಕೃಷಿ ಅಧಿಕಾರಿ ನಿಂಗಪ್ಪ, ಮರಿಸ್ವಾಮಿ ಪೂಜಾರ್, ಯೋಗೇಂದ್ರ ಪೂಜಾರ್ ಮಾರುತಿ ಯ ಡಿಯಾಪುರ, ಪ್ರಕಾಶ್ ಚಿನ್ನುರು, ಗ್ರಾಮದ ಗುರುಹಿರಿಯರು ಯುವಕರು ಉಪಸ್ಥಿತರಿದ್ದರು. ಸ್ವಾಗತ ಕಾರ್ಯಕ್ರಮವನ್ನು ರವಿ ಆಗೋಲಿ ನಡೆಸಿಕೊಟ್ಟರು, ಪ್ರಾಥನೆ ಗೀತೆಯನ್ನು ಪ್ರಕಾಶ್ ಹಾಗೂ ನಾಗು ಸಂಗಡಿಗ ನಡೆಸಿಕೊಟ್ಟರು,ರವಿ ತೋಟದ್ ವಂದನೆ ಗೈದರು.