July 12, 2025

ಸ್ಮಶಾನಕ್ಕೆ ಹೋಗುವ ದಾರಿಗೆ ತಂತಿ ಬೇಲಿ; ಅಂತ್ಯ ಸಂಸ್ಕಾರಕ್ಕೆ ಅಡ್ಡಿ 

ಜೂಡಿ ನ್ಯೂಸ್ :

 ಸ್ಮಶಾನಕ್ಕೆ ಹೋಗುವ ದಾರಿಗೆ ತಂತಿ ಬೇಲಿ; ಅಂತ್ಯ ಸಂಸ್ಕಾರಕ್ಕೆ ಅಡ್ಡಿ 

ಮರಿಯಮ್ಮನಹಳ್ಳಿ: ಸ್ಮಶಾನಕ್ಕೆ ಇದ್ದ ದಾರಿ,ಮುಚ್ಚಿದ ಪರಿಣಾಮ ದಾರಿ ಇಲ್ಲದೆ ಹೆಣಹೊತ್ತವರು ಹೈರಾಣಾದರು.ಹೌದು ಸಮೀಪದ,ಡಣಾಪುರ ಗ್ರಾ.ಪಂ.ವ್ಯಾಪ್ತಿಯ ವೆಂಕಟಾಪುರಹಂಪಿನಕಟ್ಟೆ ಗ್ರಾಮದ ಮುಸ್ಲಿಂರ ಪೀಕಲಾಟ.ಮುಸ್ಲಿಂ ಸಮುದಾಯದವರು ಯಾರೇ ಮೃತಪಟ್ಟರೂ ಇದೇ ಸ್ಮಶಾನದಲ್ಲಿ ಹೂಳಲಾಗುತ್ತಿತ್ತು,ಈಗ 

ಗ್ರಾಮದ ಮಸೀದಿಹೊನ್ನೂರಸಾಬ್ ಎಂಬುವವರು ಶನಿವಾರ ಮೃತರಾಗಿದ್ದು,ಅವರ ಸಂಸ್ಕಾರಕ್ಕೆ‌ ಖಬರಸ್ತಾನ್(ರುದ್ರಭೂಮಿ)ಗೆ ಸಾಗಿಸಲಾಗಿತ್ತು,ಸುಮಾರು ವರ್ಷಗಳಿಂದ ಇದ್ದ ರಸ್ತೆಗೆ,ಖಾಸಗಿ ವ್ಯಕ್ತಿ ತಂತಿ ಬೇಲಿ ಹಾಕಿದ ಇದರಿಂದ ದಾರಿ ಇಲ್ಲದೇ ಮಧ್ಯದಲ್ಲೇ ಹೆಣ ಹೊತ್ತು ನಿಂತ ಮೃತ ವ್ಯಕ್ತಿಯ ಸಂಬಂಧಿಕರು,ಕೆಲಕಾಲ ದಾರಿಗಾಗಿ‌ ಪರದಾಡಿದರು.ನೂರಾರು ವರ್ಷಗಳಿಂದ ಇರುವ ಸ್ಮಶಾನಕ್ಕೆ ದಾರಿ ಬಿಡದೆ,ಸ್ಮಶಾನದ ಸನಿಹದಲ್ಲೇ ಜಮೀನು ಖರೀದಿಸಿದ ವ್ಯಕ್ತಿ‌ ತಂತಿಬೇಲಿ ಹಾಕಿದ್ದಾನೆ.

ಸುಮಾರು ವರ್ಷಗಳಿಂದ ಇದ್ದ ರಸ್ತೆಗೆ,ದಿಢೀರನೆ ಖಾಸಗಿ ವ್ಯಕ್ತಿ ಸ್ಮಾಶನಕ್ಕೆ ಹೋಗುವ ದಾರಿಗೆ ಮುಳ್ಳು ತಂತಿ ಬೇಲಿ ಹಾಕಿದ್ದಾನೆ ಇದರಿಂದಾಗಿ ಕೊನೆಗೂ ಪಕ್ಕದ ಜಮೀನಿನಲ್ಲಿ ಸುತ್ತಾಕಿಕೊಂಡು ಹೋಗಿ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಿದ್ದಾರೆ.