July 12, 2025

ಜ್ಞಾನಭಾರತಿ ಶಾಲೆಯ ಮೇಲೆ ಒತ್ತುವರಿ ಆರೋಪ:ಭಾಗ್ಯನಗರ ಪಟ್ಟಣ ಪಂಚಾಯತ್ನಿಂದ ನೋಟಿಸ್

ಜೂಡಿ ನ್ಯೂಸ್:

ಕೊಪ್ಪಳ: ಭಾಗ್ಯನಗರದ ಮುಖ್ಯರಸ್ತೆಯ ಗಾಂಧಿ ಸರ್ಕಲ್ ಬಳಿ ಇರುವ ಜ್ಞಾನಭಾರತಿ ಶಿಕ್ಷಣ ಸಂಸ್ಥೆಯ ಶಾಲೆಯು ಸರಕಾರಕ್ಕೆ ಸೇರಿದ ನಿವೇಶನವನ್ನು ಒತ್ತುವರಿ ಮಾಡಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯತ್ ನೋಟೀಸ್ ನೀಡಿದೆ.

ವಾರ್ಡ್ ನಂ.12ರ (ಹಳೆಯ ವಾರ್ಡ್ ನಂ.4) ಆಸ್ತಿ ಸಂಖ್ಯೆ: 118ಕ್ಕೆ ಸಂಬಂಧಪಟ್ಟಂತೆ, ಕೆಳಹಂತದ ಕಟ್ಟಡ ಮತ್ತು ವಾಣಿಜ್ಯ ಕಟ್ಟಡಕ್ಕಾಗಿ ಜ್ಞಾನಭಾರತಿ ಶಿಕ್ಷಣ ಸಂಸ್ಥೆಯು ಪಟ್ಟಣ ಪಂಚಾಯತ್ನಿಂದ ಅನುಮತಿ ಪಡೆದುಕೊಂಡಿತ್ತು. ಆದರೆ, ಸಂಸ್ಥೆಯು ಕಟ್ಟಡ ನಿರ್ಮಾಣ ಪ್ರಾರಂಭಿಸಿದ ನಂತರ, ಶಂಕರಪ್ಪ ನಿಂಗನಬಂಡಿ ಹಾಗೂ ಗವಿಸಿದ್ದಪ್ಪ ನಿಂಗನಬಂಡಿ ಅವರು ತಮ್ಮ ಪಕ್ಕದ ಆಸ್ತಿಯನ್ನು ಅತಿಕ್ರಮಿಸಿ ಕಟ್ಟಡ ನಿರ್ಮಾಣವಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳಿಗೆ 01.10.2022, 03.10.2022, ಹಾಗೂ 29.10.2022ರಂದು ದೂರು ಸಲ್ಲಿಸಿದ್ದರು. 

ಸುರೇಶ ಡೊಣ್ಣಿ ಎಂಬುವವರು ತಾವು ತಮ್ಮ ಆಸ್ತಿಯಲ್ಲಿ ಕಟ್ಟಿದ್ದ ಕಂಪೌಂಡ್ನ್ನು ರಾತ್ರೋರಾತ್ರಿ ಕೆಡವಿ ಹಾಕಿ, ತಮ್ಮ ಆಸ್ತಿಯಲ್ಲಿ ಎರಡು ಕಡೆ ತಲಾ 2 ಅಡಿ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ ಎಂಬುದು ಅವರ ಆರೋಪವಾಗಿತ್ತು. ಈ ದೂರಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಪಟ್ಟಣ ಪಂಚಾಯತ್ಗೆ ನಿರ್ದೇಶನ ಸಹ ನೀಡಲಾಗಿತ್ತು.

ಒತ್ತುವರಿ ಸಾಬೀತು: ಆ ಪ್ರಕಾರ ಪಟ್ಟಣ ಪಂಚಾಯತ್ ವತಿಯಿಂದ ಪ್ರಸ್ತಾಪಿತ ಕಟ್ಟಡದ ಜಾಗೆಯ ಸ್ಥಾನಿಕ ವಿಚಾರಣೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಕಂಡುಬAದಿದ್ದ ಅಂಶವೆಂದರೆ, ಜ್ಞಾನಭಾರತಿ ಶಿಕ್ಷಣ ಸಂಸ್ಥೆಯು ತಮ್ಮ ಮಾಲೀಕತ್ವದ ಜಾಗವನ್ನು ಹೊರತುಪಡಿಸಿ ಹೆಚ್ಚುವರಿ ಜಾಗದಲ್ಲಿ ಕಟ್ಟಡ ನಿರ್ಮಿಸುತ್ತಿರುವುದು ಹಾಗೂ ರಸ್ತೆ ಕಡೆಯ ಜಾಗವನ್ನು ಒತ್ತುವರಿ ಮಾಡಿ ನಿಯಮಬಾಹಿರವಾಗಿ ಕಟ್ಟಡ ಕಟ್ಟುತ್ತಿರುವುದು ಕಂಡುಬAದಿತ್ತು.

ಅಲ್ಲದೇ, ಕಟ್ಟಡ ಪರವಾನಗಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಜಾಗೆಯ ಮಾಲೀಕತ್ವದ ಭಾಗವಾಗಿ ಒಂದು ಟೈಟಲ್ ಡೀಡ್ನ್ನು ಜ್ಞಾನಭಾರತಿ ಶಿಕ್ಷಣ ಸಂಸ್ಥೆ ಸಲ್ಲಿಸಿತ್ತು. ಅದರಲ್ಲಿ 1983ರಲ್ಲಿ ಆಗಿನ ತಹಸೀಲ್ದಾರರು ಸಂಸ್ಥೆಗೆ 52*30 ಅಡಿ ನಿವೇಶನವನ್ನು ಹಂಚಿಕೆ ಮಾಡಿದ್ದಾಗಿ ತಿಳಿಸಲಾಗಿತ್ತು.

ನೋಟೀಸ್ ಜಾರಿ:

ಸದರಿ ಜಾಗದಲ್ಲಿ ಶಾಲಾ ಕಟ್ಟಡವನ್ನು ನಿರ್ಮಾಣ ಮಾಡಲಾಗಿತ್ತು. ಆನಂತರ, ಶಾಲೆಯ ದಕ್ಷಿಣ ಭಾಗಕ್ಕೆ ಇರುವ ರಸ್ತೆಯನ್ನು ಬಳಕೆ ಮಾಡಿಕೊಂಡು ಹೆಚ್ಚುವರಿಯಾಗಿ 50*30 ಅಡಿ (1500 ಚದರ ಅಡಿ) ವಿಸ್ತೀರ್ಣದ ಆಸ್ತಿಯಲ್ಲಿ ಕಟ್ಟಡ ನಿರ್ಮಾಣ ನಡೆಸುತ್ತಿರುವ ಕುರಿತು ಪಟ್ಟಣ ಪಂಚಾಯತ್ 13.10.2022ರಲ್ಲಿ ಜ್ಞಾನಭಾರತಿ ಶಿಕ್ಷಣ ಸಂಸ್ಥೆಗೆ ನೋಟೀಸ್ ಜಾರಿ ಮಾಡಿತ್ತು. 

ಈ ನೋಟೀಸ್ಗೆ ಉತ್ತರವಾಗಿ ದಿನಾಂಕ 15.12.2022ರಂದು ಉತ್ತರ ಸಲ್ಲಿಸಿದ್ದ ಜ್ಞಾನಭಾರತಿ ಶಿಕ್ಷಣ ಸಂಸ್ಥೆಯು, ಸದರಿ ಆಸ್ತಿಯಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ ತಕರಾರು ಸಲ್ಲಿಸಿದವರೊಂದಿಗೆ ಪಟ್ಟಣದ ಗುರುಹಿರಿಯರ ಸಮಕ್ಷಮದಲ್ಲಿ ರಾಜಿ ಮಾಡಿಕೊಂಡಿದ್ದಾಗಿ ತಿಳಿಸಿ, ಕಟ್ಟಡ ನಿರ್ಮಿಸಲು ಅನುವು ಮಾಡಿಕೊಡುವಂತೆ ವಿನಂತಿಸಿತ್ತು. ಆದರೆ, ಕಟ್ಟಡ ನಿರ್ಮಾಣ ಮಾಡುತ್ತಿದ್ದ ಜಾಗದ ಮಾಲೀಕತ್ವದ ದೃಢೀಕರಿಸುವ ದಾಖಲೆಗಳನ್ನು ನೀಡಿದ್ದಿಲ್ಲ.

ಈ ಹಿನ್ನೆಲೆಯಲ್ಲಿ, ಜ್ಞಾನಭಾರತಿ ಶಿಕ್ಷಣ ಸಂಸ್ಥೆಯು ಸಾರ್ವಜನಿಕ ರಸ್ತೆಯನ್ನು ಅತಿಕ್ರಮಣಗೊಳಿಸಿ ನಡೆಸುತ್ತಿರುವ ಕಟ್ಟಡ ನಿರ್ಮಾಣವನ್ನು ಸ್ಥಗಿತಗೊಳಿಸುವಂತೆ ಪಟ್ಟಣ ಪಂಚಾಯತ್, ತಾನು ಈ ಹಿಂದೆ ನೀಡಿದ್ದ ಪರವಾನಗಿಯನ್ನು ರದ್ದುಪಡಿಸಿರುವುದಾಗಿ 17.12.2024ರಂದು ಹಿಂಬರಹ ನೀಡಿತು. ಅದಾಗ್ಯೂ ಸದರಿ ಸಂಸ್ಥೆಯು ಕಟ್ಟಡ ನಿರ್ಮಾಣವನ್ನು ಮುಂದುವರಿಸಿರುವ ಹಿನ್ನೆಲೆಯಲ್ಲಿ 20.12.2024ರಂದು ಮತ್ತೊಂದು ನೊಟೀಸ್ನ್ನು ಸದರಿ ಸಂಸ್ಥೆಯ ಗೋಡೆಗೆ ಅಂಟಿಸಲಾಗಿದೆ. 

ಆಶ್ರಯ ಯೋಜನೆ ನಿವೇಶನದಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಸುರೇಶ್ ಡೊಣ್ಣಿ ಅವರು ಹೇಳಿಕೊಂಡಿದ್ದರಾದರೂ, ಅದನ್ನು ಸಾಬೀತುಪಡಿಸುವಂತಹ ದಾಖಲೆಗಳನ್ನು ಪಟ್ಟಣ ಪಂಚಾಯತ್ಗೆ ಸಲ್ಲಿಸಲು ವಿಫಲರಾಗಿದ್ದರು. ಅವರು ಸಲ್ಲಿಸಿದ್ದ ಹಾಗೂ ತಾಲೂಕು ಪಂಚಾಯತ್ ನೀಡಿತ್ತು ಎನ್ನಲಾದ ಆಶ್ರಯ ಯೋಜನೆ ನಿವೇಶನ ಹಕ್ಕುಪತ್ರ ಸಂಖ್ಯೆ: 0052382, ದಿನಾಂಕ 12.06.2003ನ್ನು ದೃಢೀಕರಿಸಲು ತಾಲೂಕು ಪಂಚಾಯತ್ ನಿರಾಕರಿಸಿತ್ತು. 

ಸದರಿ ಪ್ರಕರಣ ಕುರಿತು ಸಲ್ಲಿಕೆಯಾಗಿರುವ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಳಿನ್ ಅತುಲ್ ಅವರು ಪಟ್ಟಣ ಪಂಚಾಯತ್ನಿAದ ವಿವರಣೆ ಸಲ್ಲಿಸುವಂತೆ ಸೂಚಿಸಿದ್ದರು. ಸದರಿ ಅಕ್ರಮ ಕುರಿತಂತೆ ತಮಗೆ ಸಲ್ಲಿಸಲಾದ ದಾಖಲೆಗಳನ್ನು ಪರಿಶೀಲಿಸಿರುವ ಅವರು, ಕಟ್ಟಡ ನಿರ್ಮಾಣವನ್ನು ಸ್ಥಗಿತಗೊಳಿಸಿ, ಅಕ್ರಮ ನಿರ್ಮಾಣವನ್ನು ತೆಗೆದುಹಾಕಲು ಹಾಗೂ ಸಂಬAಧಿಸಿದ ವ್ಯಕ್ತಿಗಳ ವಿರುದ್ಧ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.