ಜೂಡಿ ನ್ಯೂಸ್ :
ಮೋದಿ ಜೀ ಸರ್ಕಾರದ 11ವರ್ಷಗಳ ಸಾಧನೆಗಳು ವಿಕಸಿತ ಭಾರತದ ಐತಿಹಾಸಿಕ ಮಜಲುಗಳು
ಇಂದು ಗಂಗಾವತಿಯಲ್ಲಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ ಅವರು ಹಾಗೂ ರಾಜ್ಯ ಸಹ ಉಸ್ತುವಾರಿಗಳಾದ ಪೊಂಗುಲೇಟಿ ಸುಧಾಕರ್ ರೆಡ್ಡಿ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಬಳ್ಳಾರಿ ವಿಭಾಗ ಮಟ್ಟದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋಜಿಜೀ ಅವರ ಸರ್ಕಾರದ 11 ವರ್ಷಗಳ ಸಾಧನಾ ಕಾರ್ಯಕ್ರಮ ಜರುಗೆತು.
ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಜೀ ಅವರ ಸರ್ಕಾರಕ್ಕೆ 11 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ದೇಶದ ಹಾಗೂ ರಾಜ್ಯದ ಪ್ರತಿಯೊಂದು ಮನೆಗಳಲ್ಲೂ ಕೇಂದ್ರ ಸರ್ಕಾರದ ಮಹತ್ವದ ಒಂದಿಲ್ಲೊಂದು ಯೋಜನೆಗಳ ಫಲಾನುಭವಿಗಳಿದ್ದು, ಪ್ರತಿಯೊಂದು ಮನೆಗಳಿಗೂ ಮೋದಿ ಜೀ ಅವರ ಸರ್ಕಾರದ ಜನಪರ ಯೋಜನೆಗಳು, ಬಡವರ ಪರವಾದ ಕಾರ್ಯಕ್ರಮಗಳ ಕುರಿತು ಅರಿವು ಮೂಡಿಸಿ ಪ್ರತಿ ಮನೆಗಳಿಗೆ ತಲುಪಿಸಬೇಕೆಂಬ ಸಂಕಲ್ಪ ಮಾಡಲಾಯಿತಲ್ಲದೇ ಸದ್ಯದಲ್ಲೇ ಎದುರಾಗಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಸಂಘಟನೆ ಚುರುಕುಗೊಳಿಸುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಶ್ರಮಿಸಬೇಕೆಂಬ ಕರೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಸಂಸದರಾದ ಗೋವಿಂದ ಕಾರಜೋಳ ರಾಜ್ಯ ಪ್ರಧಾನ ಕಾರ್ಯದರ್ಶಿ P.ರಾಜೀವ ಮಾಜಿ ಸಚಿವ B ಶ್ರೀ ರಾಮುಲು ಸಹೋದರರಾದ ಕರುಣಾಕರ್ ರೆಡ್ಡಿ ಹಾಗೂ ಸೋಮಶೇಖರ್ ರೆಡ್ಡಿ, ವಿಧಾನಸಭಾ ವಿರೋಧ ಪಕ್ಷದ ಮುಖ್ಯ ಸಚೇತಕರಾದ ದೊಡ್ಡನಗೌಡ ಹೆಚ್ ಪಾಟೀಲ್, ಶಾಸಕರಾದ ಮಾನಪ್ಪ ವಜ್ಜಲ್, ಡಾ.ಶಿವರಾಜ್ ಪಾಟೀಲ್, ಕೃಷ್ಣಾ ನಾಯಕ್, ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ, ಶ್ರೀಮತಿ ಹೇಮಲತಾ ನಾಯಕ್, ಎಸ್.ಟಿ.ಮೋರ್ಚಾ ರಾಜ್ಯಾಧ್ಯಕ್ಷರಾದ ಬಂಗಾರು ಹನುಮಂತು, ರಾಜ್ಯ ಕಾರ್ಯದರ್ಶಿಗಳಾದ ಶರಣು ತಳ್ಳೀಕೆರೆ, ದಿವಾಕರ್, ಪರಣ್ಣ ಮುನವಳ್ಳಿ, ಪ್ರತಾಪ್ ಗೌಡ ಪಾಟೀಲ್, ಬಸವರಾಜ್ , ಗಂಗಾಧರ ನಾಯಕ್, ಜಿಲ್ಲಾಧ್ಯಕ್ಷರಾದ ಬಸವರಾಜ ದಡೇಸುಗೂರು, ಮುಖಂಡರಾದ ಬಸವರಾಜ್ ಕ್ಯಾವಟರ್, ಸೇರಿದಂತೆ ಪಕ್ಷದ ಪ್ರಮುಖರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
More Stories
ಕಿರ್ಲೋಸ್ಕರ್ ಫೆರಸ್ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಸೆ. 18 ರಂದು ಆರೋಗ್ಯ ತಪಾಸಣಾ ಶಿಬಿರ
ದಾನಿ ಸುಬ್ಬಾರೆಡ್ಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಹಂಪಾಪಟ್ಟಣ ನಾಗರಿಕರು..
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವತಿಯಿಂದ ಶಿಕ್ಷಕರ ದಿನಾಚರಣೆ