ಜೂಡಿ ನ್ಯೂಸ್ :
ಆಯುರ್ವೇದ ಸಿದ್ಧ ಕಣ್ಣಿನ ಹನಿಯ ಉಪಯೋಗವನ್ನು ಬಳಸಿಕೊಳ್ಳಿ…
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ನವೋದಯ ಯುವಕ ಸಂಘ.ರಿ. ಮತ್ತು ಮಾರುತಿ ಭಜನೆ ಮಂಡಳಿ. ವತಿಯಿಂದ. ಸಿದ್ದ ಕಣ್ಣಿನ ಹನಿ ಕಾರ್ಯಕ್ರಮವನ್ನು ಪೂಜ್ಯ ಜಗದ್ಗುರು ಉತ್ತಂಗಿಯ ಸೋಮಶೇಖರ ಮಹಾಸ್ವಾಮಿಗಳು ಉದ್ಘಾಟಿಸಿದರು.
ಗ್ರಾಮದಲ್ಲಿ ಬುಡ್ಡಿ ಬಸರಾಜರವರ ನೇತೃತ್ವದಲ್ಲಿ ನಿರಂತರವಾಗಿ ಜನಪಯೋಗಿ ಕಾರ್ಯಕ್ರಮಗಳು ನಡೆಯುತ್ತಾ ಬಂದಿವೆ, ಆಡು ಮುಟ್ಟದ ಸೊಪ್ಪಿಲ್ಲ ಬುಡ್ಡಿ ಬಸವರಾಜ್ ಅವರು ಮಾಡದ ಕಾರ್ಯಗಳೇ ಇಲ್ಲ ಎಂದು ಬುಡ್ಡಿ ಬಸವರಾಜ್ ಸಾಮಾಜಿಕ ಕಾರ್ಯವನ್ನು ಸ್ಮರಿಸಿ ಇಂತಹ ಗ್ರಾಮೀಣ ಜನರಿಗೆ ಉಪಯೋಗವಾಗುವ ಸಿದ್ದ ಕಣ್ಣಿನ ಉಪಯೋಗವನ್ನು ಹಂಪಾಪಟ್ಟಣ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಇಂತಹ ಪುರಾತನ ಆರೋಗ್ಯಕರವಾದ ಸಿದ್ಧ ಕಣ್ಣಿನ ಹನಿಯ ಉಪಯೋಗವನ್ನು ಸರ್ವರು ಬಳಸಿಕೊಳ್ಳಬೇಕೆಂದು ಆಶೀರ್ವಚನ ನೀಡಿದರು…
ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಬುಡ್ಡಿ ಬಸವರಾಜ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಾನವನ ನಿಜವಾದ ಜ್ಞಾನದ ಬಾಗಿಲು ಎಂದರೆ ಅದು ಕಣ್ಣು, ಆರೋಗ್ಯವೇ ಮಹಾಭಾಗ್ಯ ಎನ್ನುವಂತೆ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಕಣ್ಣಿನ ಸಂರಕ್ಷಣೆ ಅತ್ಯಂತ ಅವಶ್ಯಕವಾದದ್ದು
ಇಂದಿನ ಆಧುನಿಕ ದಿನಮಾನಗಳಲ್ಲಿ ಸಾಮಾಜಿಕ ಜಾಲತಾಣಗಳು, ಹಾಗೆ ಅತಿಯಾದ ಮೊಬೈಲ್ ವೀಕ್ಷಣೆಯಿಂದ ಕಣ್ಣಿಗೆ ಅಪಾರವಾದ ತೊಂದರೆ ಉಂಟಾಗಿದೆ, ಇಂತಹ ಹಲವಾರು ಕಣ್ಣಿನ ದೋಷಗಳ ನಿವಾರಣೆಗಾಗಿ ಪ್ರತಿ ತಿಂಗಳು 22ನೇ ರಂದು ಹಂಪಾಪಟ್ಟಣ ಗ್ರಾಮದಲ್ಲಿ ಯಾವುದೇ ಅಡ್ಡ ಪರಿಣಾಮವಿಲ್ಲದ ಆರೋಗ್ಯಕರ ಪುರಾತನ ಆಯುರ್ವೇದ ಸಿದ್ದ ಕಣ್ಣಿನ ಹನಿಯ ಕಾರ್ಯಕ್ರಮವು ನಡೆಯುತ್ತದೆ.. ಈ ಕಾರ್ಯಕ್ರಮದ ಸದುಪಯೋಗವನ್ನು ಗ್ರಾಮಸ್ಥರು.. ಸುತ್ತಮುತ್ತಲಿನ ಹಳ್ಳಿಯ ಜನರು ಪಡೆದುಕೊಳ್ಳಬೇಕೆಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಸುಮಾರು 306 ಜನರು ಸಿದ್ದ ಕಣ್ಣಿನ ಹನಿಯ ಸದುಪಯೋಗಪಡಿಸಿಕೊಂಡರು.
ಕಾರ್ಯಕ್ರಮದಲ್ಲಿ ಆಯುರ್ವೇದ ವೈದ್ಯರಾದ ನವೀನ್ ಕುಮಾರ್ ,ಮುಖ್ಯ ಅತಿಥಿಗಳಾಗಿ. ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು. ಬಿ ನಾಗರಾಜ್. ಗ್ರಾಮ ಪಂಚಾಯತ್ ಸದಸ್ಯರು. ಎನ್ ನಾಗರಾಜ್ ಟಿ ಮಂಜುನಾಥ ವಿ ಎಸ್ ಎಸ್ ಎನ್ .ಸದಸ್ಯರು. ಜಿ .ಶ್ರೀನಿವಾಸ್.. ಕೆ ಹುಲುಗಪ್ಪ.ನವೋದಯ ಯುವಕ ಸಂಘದ ಅಧ್ಯಕ್ಷರು ವಿ ಹನುಮಂತ. ಮಾರುತಿ ಭಜನೆ ಮಂಡಳಿ ಸಂಘದ ಅಧ್ಯಕ್ಷರು.. ಕಿಟಕಿ ಶಿವಣ್ಣ. ಹಿಂದುಳಿದ ಜಾತಿ ಒಕ್ಕೂಟದ ತಾಲೂಕ ಅಧ್ಯಕ್ಷ ಲಿಂಗರಾಜ್ ಯಾದವ್.. ತಾಲೂಕು ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಅಂಬಳಿ ಕೇಶವಮೂರ್ತಿ ಟೀ ಮಧು. ಜೀ ಪಕೀರಪ್ಪ. ಗೂಳಿ.ಕೊಟ್ರೇಶ್ ಭಜಂತ್ರಿ ಸೋಮನಾಥ. ಎಂ ಈಶಪ್ಪ. ಮಾಲ್ವಿ ಕಿಟ್ಟಪ್ಪ.. ಕಾರ್ಯಕ್ರಮ ನಿರೂಪಣೆ ಬಿ. ಹುಲುಗಪ್ಪ ನೆರವೇರಿಸಿದರು.
More Stories
ಕಿರ್ಲೋಸ್ಕರ್ ಫೆರಸ್ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಸೆ. 18 ರಂದು ಆರೋಗ್ಯ ತಪಾಸಣಾ ಶಿಬಿರ
ದಾನಿ ಸುಬ್ಬಾರೆಡ್ಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಹಂಪಾಪಟ್ಟಣ ನಾಗರಿಕರು..
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವತಿಯಿಂದ ಶಿಕ್ಷಕರ ದಿನಾಚರಣೆ