July 13, 2025

ಶ್ರೀ ಮೇಘರಾಜೇಂದ್ರ ಸ್ವಾಮಿಜಿ ಗಳಿಂದ ಡಾ, ಅನಿಲ್ ಕುಮಾರ್ ಬೇಗಾರ ಗೆ ಸನ್ಮಾನ 

ಜೂಡಿ ನ್ಯೂಸ್:

ಕೊಪ್ಪಳ ,ಡಿ 26: ಪಕ್ಕದ ಗದಗ ಜಿಲ್ಲೆಯ ರೋಣ ತಾಲೂಕಿನ ಸುಕ್ಷೇತ್ರ ಯಾವಗಲ್ ಮುರನಾಳ ಮಠದ ಪೀಠಾಧಿಪತಿ ಗಳಾದ ಶ್ರೀ ಮೇಘರಾಜೇಂದ್ರ ಮಹಾಸ್ವಾಮಿಜಿ ಗಳವರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೊಪ್ಪಳದ ಹಿರಿಯ ಸಮಾಜಸೇವಕರಾದ ಮತ್ತು ಶ್ರೀ ನಾಗರತ್ನ ಶಿಕ್ಷಣ ಸೇವಾ ಸಂಸ್ಥೆಯ ಸಂಸ್ಥಾಪಕರಾದ ಡಾ, ಅನಿಲ್ ಕುಮಾರ್ ಬೇಗಾರ ರವರಿಗೆ ಸನ್ಮಾನಿಸಿ ಶುಭ ಕೋರಿ ಆಶೀರ್ವದಿಸಿದರು.

 ಭವಿಷ್ಯದಲ್ಲಿ ಉತ್ತಮ ನಾಯಕರಾಗಿ ಪರಿವರ್ತನೆ ಹೊಂದಲಿ ಸಮಾಜಕ್ಕೆ ಇನ್ನಷ್ಟು ಉತ್ತಮ ಸೇವೆ ತಮ್ಮಿಂದ ದೊರೆಕಲಿ ಎಂದು ಡಾ, ಅನಿಲ್ ಕುಮಾರ್ ಬೇಗಾರ್ ರವರ ಬಗ್ಗೆ ಸ್ವಾಮೀಜಿಯವರು ಶುಭನುಡಿಗಳನ್ನಾಡಿದರು.

 ಈ ಸಂದರ್ಭದಲ್ಲಿ  ನವದಂಪತಿ ಸೇರಿದಂತೆ ಭಕ್ತಾದಿಗಳು ಸಾರ್ವಜನಿಕರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.