September 14, 2025

98 ವರ್ಷದ ಹಿರಿಯ ಜೀವ ಸಿದ್ದರ ಕಿನ್ನೂರಿ ಮರಿಯಮ್ಮ ಅವರಿಂದ ಧ್ವಜಾರೋಹಣ..

ಜೂಡಿ ನ್ಯೂಸ್ :

98 ವರ್ಷದ ಹಿರಿಯ ಜೀವ ಸಿದ್ದರ ಕಿನ್ನೂರಿ ಮರಿಯಮ್ಮ ಅವರಿಂದ ಧ್ವಜಾರೋಹಣ..

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕು ಹಂಪಾಪಟ್ಟಣ ಗ್ರಾಮ ಸುಡುಗಾಡು ಸಿದ್ದ ಸಮಾಜದ ವತಿಯಿಂದ ಆಗಸ್ಟ್ 15 ರಂದು 79ನೇ ಸ್ವಾತಂತ್ರ ಮಹೋತ್ಸವ ಅಂಗವಾಗಿ ಸಮಾಜದ ಹಿರಿಯ ಜೀವಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕರು 98 ವರ್ಷದ ತುಂಬು ಜೀವನದ ಸಿದ್ದರ ಕಿನ್ನೂರಿ ಮರಿಯಮ್ಮನವರು 79ನೇ ಸ್ವಾತಂತ್ರ್ಯ ಮಹೋತ್ಸವದ ಧ್ವಜಾರೋಹಣ ನೆರವೇರಿಸಿದರು..

ಈ ಸಂದರ್ಭದಲ್ಲಿ ಮಾತನಾಡಿದ ನಿರೂಪಕ ಜಾನಪದ ಕಲಾವಿದರಾದ ನಾಗರಾಜ್ ಗಂಟಿ ಭಾರತ ದೇಶಕ್ಕೆ ಸ್ವತಂತ್ರ ಪಡೆಯಲು ಅಸಂಖ್ಯಾತ ದೇಶಭಕ್ತರ ತ್ಯಾಗ ಬಲಿದಾನಗಳ ಕೊಡುಗೆ ಸದಾ ಕಾಲ ಸ್ಮರಣೆಯವಾದದ್ದು… ನಮ್ಮ ದೇಶದ ಸ್ವಾತಂತ್ರ್ಯಕ್ಕೆ ಶ್ರಮಿಸಿದ ಸ್ವಾತಂತ್ರ ಹೋರಾಟಗಾರರ ತತ್ವ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.. 

 ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ S,M, ಅಯ್ಯಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಗಾಳೆಪ್ಪ, ಗೀತಾ ಯಲ್ಲಪ್ಪ ಪತ್ರಿ, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಕಿನ್ನರಿ ಮಹೇಶ್, ಮಾಜಿ ನಿರ್ದೇಶಕರಾದ ಸಣ್ಣ ಮಂಜುನಾಥ ಗಂಟಿ, ಕಿನ್ನೂರಿ ಸೋಮನಾಥ, C ಮಲ್ಲಪ್ಪ, S,M. ಉಮೇಶ್, ಗಂಟಿ ಉಮೇಶ, ವಿಠಲ್, ಸಂತೋಷ್ ಗಂಟಿ, ಉಮೇಶ್ ಮದ್ದಿ,ಅಶೋಕ್ ಮದ್ದಿ,S,k. ಮಂಜುನಾಥ್, ಆನಂದ , ವಡ್ಡರ ಹಾಲಪ್ಪ, ಹರಿಜನ ದುರುಗಪ್ಪ, ಮೌಲಪ್ಪ,ಗ್ರಾಮದ ನಾಗರಿಕ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು..