BREAKING NEWS:
ಜೂಡಿ ನ್ಯೂಸ್ :
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (92) ಇಂದು (ಗುರುವಾರ) ದೆಹಲಿಯಲ್ಲಿ ನಿಧನರಾಗಿದ್ದಾರೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಅವರು ಇನ್ಸಾಗ್ರಾಮ್ ಪೋಸ್ಟ್‌ನಲ್ಲಿ “ಪ್ರಧಾನಿ ಮನಮೋಹನ್ ಸಿಂಗ್ ಜಿ ಅವರ ನಿಧನದ ಸುದ್ದಿ ತಿಳಿದು ನನಗೆ ತೀವ್ರ ದುಃಖವಾಗಿದೆ’ ಎಂದಿದ್ದಾರೆ. ಸುದ್ದಿ ತಿಳಿದು ಪ್ರಿಯಾಂಕಾ ಗಾಂಧಿ ಈಗಾಗಲೇ ಏಮ್ಸ್ ತಲುಪಿದ್ದಾರೆ. ಮತ್ತೊಂದೆಡೆ ದೆಹಲಿಯ ಏಮ್ಸ್‌ನಲ್ಲಿ ಬಿಗಿ ಭದ್ರತೆಆರ್‌ಬಿಐ ಗವರ್ನರ್ ಆಗಿ ಕೆಲಸ ಮಾಡಿದ್ದಾರೆ.
ದೇಶದ ಆರ್ಥಿಕ ಸುಧಾರಣೆಗಳ ಹರಿಕಾರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 26 ಸೆಪ್ಟೆಂಬರ್ 1932 ರಂದು ಇಂದಿನ ಪಾಕಿಸ್ತಾನದ ಚಕ್ವಾಲ್‌ನಲ್ಲಿ ಜನಿಸಿದರು. 2004-2014ರವರೆಗೆ ಪ್ರಧಾನಿಯಾಗಿ ಆರ್ಥಿಕ ಸುಧಾರಣೆಗೆ ಹೆಚ್ಚಿನ ಒತ್ತು ನೀಡಿದ್ದರು. ನೆಹರು, ಇಂದಿರಾ ನಂತರ ಅತಿ ಹೆಚ್ಚು ಕಾಲ ಪ್ರಧಾನಿಯಾಗಿ ಮುಂದುವರಿದರು. ಅವರು 33 ವರ್ಷಗಳ ಕಾಲ ಸಂಸದರಾಗಿ ಮುಂದುವರೆದರು. 1991ರಲ್ಲಿ ರಾಜ್ಯಸಭೆ ಪ್ರವೇಶಿಸಿದರು. ಹಣಕಾಸು ಸಚಿವರಾಗಿ ಹಣಕಾಸು ಇಲಾಖೆಯಲ್ಲಿ ಸಲಹೆಗಾರರಾಗಿ, ಕಾರ್ಯದರ್ಶಿಯಾಗಿ, ಆರ್‌ಬಿಐ ಗವರ್ನರ್ ಆಗಿ ಕೆಲಸ ಮಾಡಿದ್ದಾರೆ.
More Stories
ಗ್ರಾಮ ಪಂಚಾಯತಿ ಸದಸ್ಯನ ಸಂಭಾವನೆಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ…
ಮಠ-ಮಂದಿರಗಳಿಗೆ ಮಂಜೂರಾದ ಅನುದಾನ ಬಿಡುಗಡೆಗೆ 25% ಕಮೀಷನ್: ಜಿ. ಜನಾರ್ಧನ ರೆಡ್ಡಿ ಗಂಭೀರ ಆರೋಪ
ಹಂಪಾಪಟ್ಟಣದಲ್ಲಿ ಮೊಹರಂ ವಿಶೇಷ ಆಚರಣೆ