ಜೂಡಿ ನ್ಯೂಸ್ :
ಆಧುನಿಕ ಭರಾಟೆಯಲ್ಲಿ ರಂಗಭೂಮಿ ನಾಟಕಗಳು ಕಣ್ಮರೆ…
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ
ಜೈ ಆಂಜನೇಯ ಬಯಲು ರಂಗಮಂದಿರದಲ್ಲಿ ನವೋದಯ ಯುವಕ ಸಂಘ ರಿ. 45 ವರ್ಷದ ಸಾರ್ವಜನಿಕ ಗಣೇಶೋತ್ಸವ. ಕಾರ್ಯಕ್ರಮವನ್ನು ಹಿಂದುಳಿದ ಜಾತಿ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಬುಡ್ಡಿ ಬಸವರಾಜ್ ರವರು ಕಾರ್ಯಕ್ರಮವು ಉದ್ಘಾಟಿಸಿ ಉದ್ಘಾಟನೆ ನುಡಿಗಳನ್ನಾ ಡಿದರು..
ಹಂಪಾಪಟ್ಟಣ ಗ್ರಾಮದಲ್ಲಿ ಸುಮಾರು 45 ವರ್ಷಗಳಿಂದಲೂ ಸಾರ್ವಜನಿಕ ಗಣೇಶೋತ್ಸವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಅತ್ಯಂತ ಅರ್ಥಪೂರ್ಣವಾಗಿ ಆಚರಿಸುತ್ತಾ ಬರಲಾಗಿದೆ, ನವೋದಯ ಸಂಘದಿಂದ ನೀಡುವ ಕಾರ್ಯಕ್ರಮಗಳು ಜನರಿಗೆ ವೈಚಾರಿಕ ಚಿಂತನೆ,ಶಿಕ್ಷಣ, ಆರೋಗ್ಯ, ಜನಪದ,ರಂಗಭೂಮಿ ಮನರಂಜನೆ ಸಾರುವ ಕಾರ್ಯಕ್ರಮವನ್ನು ಪ್ರತಿ ವರ್ಷವೂ ನೀಡಲಾಗುತ್ತಿದ್ದು, ಈ ವರ್ಷವೂ ಸಹ ಜನಪದ ಪರಂಪರೆಗೆ ತಮ್ಮದೇ ಆದ ಸೇವೆ ಸಲ್ಲಿಸಿದ ಕಾಳಿಂಗರಾಯ ಪದ ಹಾಡುವ ಕಲಾವಿದರಿಗೆ, ಡೊಳ್ಳು ಕುಣಿತದ ಕಲಾವಿದರಿಗೆ, ಹಲೆಗೆ ವಾದನದ ಕಲಾವಿದರಿಗೆ, ಈ ಕಾರ್ಯಕ್ರಮದಲ್ಲಿ ಸನ್ಮಾನಿಸುವುದು ಈ ಕಾರ್ಯಕ್ರಮಕ್ಕೆ ಮೆರುಗು ನೀಡುವಂತದ್ದು.
ಯುವ ಸಮೂಹ ಆಧುನಿಕ ಭರಾಟೆಯಲ್ಲಿ ಹಳ್ಳಿ ಸೊಗಡಿನ ಜಾನಪದ ಸಂಸ್ಕೃತಿಯನ್ನು ಮರೆಯಬಾರದು, ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಯುವಕರ ಪಾತ್ರ ಮಹತ್ತರವಾದದ್ದು, ಹಾಗೆಯೇ ರಂಗಭೂಮಿಯನ್ನು ಉಳಿಸಿ ಬೆಳೆಸುವ ಕಾರ್ಯವು ನಮ್ಮೆಲ್ಲರ ಮೇಲಿದೆ, ರಂಗಭೂಮಿಯ ನಾಟಕಗಳನ್ನು ವೀಕ್ಷಣೆ ಮಾಡಿ ಕಲಾವಿದರನ್ನು ಪ್ರೋತ್ಸಾಹಿಸಬೇಕಾಗಿ ಈ ಮೂಲಕ ತಿಳಿಸಿದರು.
ಹಾಗೆಯೇ ಜಾನಪದ ಕಲಾವಿದರಿಗೆ ಸನ್ಮಾನಿಸಲಾಯಿತು..
ಈ ಸಂದರ್ಭದಲ್ಲಿ ಅಕ್ಕ ಹಂಗಾರಿ ತಂಗಿ ಬಂಗಾರಿ ನಾಟಕ ಪ್ರದರ್ಶನಗೊಂಡಿತು .
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವೋದಯ ಯುವಕ ಸಂಘ ಅಧ್ಯಕ್ಷ ವಿ ಹನುಮಂತ ವಹಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ಉಪ್ಪಾರ್ ಹುಲಿಗಮ್ಮ ಕಾಳಪ್ಪ. ಗ್ರಾಮ ಪಂಚಾಯತ್ ಅಧ್ಯಕ್ಷ . ಗ್ರಾಮ ಪಂಚಾಯತಿ ಸದಸ್ಯರು.ಬಿ ನಾಗರಾಜ್.. ಎನ್ ನಾಗರಾಜ್ .ಟಿ ಮಂಜುನಾಥ. ವಿಎಸ್ಎಸ್ಏನ್ ಸದಸ್ಯರು. ಗಾಳಮ್ಮನವರ ಹುಲುಗಪ್ಪ. . ಜಿ ಶ್ರೀನಿವಾಸ.ಶ್ರೀ ಮಾರುತಿ ಭಜನಾ ಮಂಡಳಿ ಸಂಘದ ಅಧ್ಯಕ್ಷ ಮಾಲ್ವಿ ಕೃಷ್ಣಪ್ಪ. ಡಿಎಸ್ಎಸ್ ರಮೇಶ್. ಎಸ್ ಟಿ ಎಂ ಸಿ ಅಧ್ಯಕ್ಷ ಬಿ ಮಂಜುನಾಥ . ಬಜಂತ್ರಿ ಸೋಮನಾಥ. ಎಚ್ ಸೋಮನಾಥ್ ಬಂಟರ ಸೋಮನಾಥ್. ಉಪ್ಪಾರ್ ಸೋಮನಾಥ್. . ಪೂಜಾರಿ ಸೋಮನಾಥ. ಟಿ.ಮಧು. ಜಿ ಟಿ ರಮೇಶ್. ಟೈಲರ್ ಹನುಮಂತ.ನಿರೂಪಣೆ ಬಿ ಹುಲಗಪ್ಪ
More Stories
ಕಿರ್ಲೋಸ್ಕರ್ ಫೆರಸ್ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಸೆ. 18 ರಂದು ಆರೋಗ್ಯ ತಪಾಸಣಾ ಶಿಬಿರ
ದಾನಿ ಸುಬ್ಬಾರೆಡ್ಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಹಂಪಾಪಟ್ಟಣ ನಾಗರಿಕರು..
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವತಿಯಿಂದ ಶಿಕ್ಷಕರ ದಿನಾಚರಣೆ