September 13, 2025

ಗಂಗಾವತಿ ಪ್ರಾದೇಶಿಕ ಅರಣ್ಯ ವಲಯದಲ್ಲಿ  ಅಂತರಾಷ್ಟ್ರೀಯ ತೋಳ ದಿನ ಆಚರಣೆ

ಜೂಡಿ ನ್ಯೂಸ್ : 

ಗಂಗಾವತಿ ಪ್ರಾದೇಶಿಕ ಅರಣ್ಯ ವಲಯದಲ್ಲಿ  ಅಂತರಾಷ್ಟ್ರೀಯ ತೋಳ ದಿನ ಆಚರಣೆ

ಗಂಗಾವತಿ: ಕರ್ನಾಟಕ ಅರಣ್ಯ ಇಲಾಖೆ, ಕೊಪ್ಪಳ ವಿಭಾಗದ ಗಂಗಾವತಿ ಪ್ರಾದೇಶಿಕ ಅರಣ್ಯ ವಲಯದ ವತಿಯಿಂದ ಅಂತರಾಷ್ಟ್ರೀಯ ತೋಳ ದಿನ – 2025 ಕಾರ್ಯಕ್ರಮವನ್ನು ಆಗಸ್ಟ್‌ 21ರಂದು ಗಂಗಾವತಿ ಟಿ.ಎಂ.ಎ.ಇ . ಸಂಸ್ಥೆ (ಬಿ) ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಗಂಗಾವತಿ ಟಿ.ಎಂ.ಎ.ಇ . ಸಂಸ್ಥೆ (ಬಿ) ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಕೆ.ಸಿ. ಕುಲಕರ್ಣಿ ಉದ್ಘಾಟಿಸಿದರು.

 ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀಮತಿ ನಿರ್ಮಲ .ಎನ್.ಕೆ. ಅರಣ್ಯ ಸಂರಕ್ಷಣೆಯ ಮಹತ್ವವನ್ನು ವಿವರವಾಗಿ ಹೇಳಿದರು ತೋಳದ ಜೀವನ ಚಕ್ರ, ಪರಿಸರದಲ್ಲಿ ಅದರ ಪಾತ್ರ ಹಾಗೂ ಸಂರಕ್ಷಣೆಯ ಅಗತ್ಯತೆಯನ್ನು ವಿವರಿಸಿದರು. ತೋಳವು ಪ್ರಕೃತಿಯ ಆಹಾರ ಸರಪಳಿಯಲ್ಲಿ ಸಮತೋಲನ ಕಾಪಾಡುವ ಪ್ರಮುಖ ಪ್ರಾಣಿ ಆಗಿದ್ದು, ಅದರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. 

ಕೊಪ್ಪಳದಲ್ಲಿ ಕಂಡುಬರುವ ಸಾಮಾನ್ಯ ಪ್ರಾಣಿಗಳೆಂದರೆ ಚಿರತೆ,ಕರಡಿ,ಕಾಡು ಹಂದಿ,ಮೊಲ, ಮುಳ್ಳು ಹಂದಿ, ಹೈನಾ, ನರಿ,ಕಾಡು ಬೆಕ್ಕು, ಅನೇಕ ಜಾತಿಯ ಸರೀಸೃಪಗಳು, ಪಕ್ಷಿಗಳು, ಹತ್ತಿರದ ಸಂರಕ್ಷಿತ ಪ್ರದೇಶಗಳಲ್ಲಿ ನಾವು ನೋಡಬಹುದು.

ಕೊಪ್ಪಳ ಜಿಲ್ಲೆಯು ವನ್ಯಜೀವಿಗಳ ಸಮೃದ್ಧ ತಾಣವಾಗಿದೆ ಎಂದು ಕೊಪ್ಪಳದ ಉಪ ವಿಭಾಗದ ಪ್ರಾದೇಶಿಕ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅಬ್ದುಲ್ ಖಾದರ್ ಮುಲ್ಲಾ ಮಕ್ಕಳಿಗೆ ಹಳಿದರು.  

Wild life Institute of India ದ ವನ್ಯಜೀವಿ ಸಂಶೋಧಕ ಬಸವರಾಜ ಮುಳಗೆ ಅವರು ಉಪನ್ಯಾಸ ನೀಡಿದರು.

ತೋಳ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಹಾಗೂ ಚಿತ್ರಕಲೆ ಸ್ಪರ್ಧೆ ಯನ್ನು ಏರ್ಪಡಿಸಲಾಗಿತ್ತು. ಅದರಲ್ಲಿ ಪ್ರಥಮ,ದ್ವಿತೀಯ ಹಾಗೂ ತೃತಿಯ ಬಂದವರಿಗೆ ಬಹುಮಾನ ನೀಡಿದರು.

ಪ್ರಬಂಧ ಸ್ಪರ್ಧೆ: ಪ್ರಥಮ ಸ್ಥಾನ : ಭೀಮಾಶ್ರೀ ತಂದೆ ನಾಗರಾಜ, ದ್ವಿತೀಯ ಸ್ಥಾನ: ಮಹ್ಮದ್ ಸಾಬ ತಂದೆ ಮರ್ದನಸಾಬ್ ತೃತೀಯ ಸ್ಥಾನ : ಶಿಲ್ಪಾ ತಂದೆ ಈಶಪ್ಪ 

ಚಿತ್ರಕಲೆ ಸ್ಪರ್ಧೆ : ಪ್ರಥಮ ಸ್ಥಾನ: ಕೃಷ್ಣ ತಂದೆ ಯಂಕಪ್ಪ 

ದ್ವಿತೀಯ ಸ್ಥಾನ: ವೀರೇಂದ್ರ ಪಾಟೀಲ ತಂದೆ ಸಿದ್ದನಗೌಡ 

ತೃತೀಯ ಸ್ಥಾನ: ಶಿವಮೂರ್ತಿ ತಂದೆ ಬಸವರಾಜ 

 ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹುಸೇನಬಾಷಾ ಪೆಂಡಾರಿ ಡಿಸಿಎಫ್ , ಅಬ್ದುಲ್ ಖಾದರ್ ಮುಲ್ಲಾ ಎಸಿಎಫ್ , ಗಾಯತ್ರಿ ಲೋಕಣ್ಣನವರ್ ಎಸಿಎಫ್, ಚೈತ್ರಾ ಮೆಣಸಿನಕಾಯಿ ಆರ್‌ಎಫ್‌ಒ, ಸಂಸ್ಥೆಯ ಉಪನ್ಯಾಸಕರು, ಗಂಗಾವತಿಯ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು. 

– ಪ್ರಕಾಶ ಚವ್ಹಾಣ