ಜೂಡಿ ನ್ಯೂಸ್ :
ಸ್ಪರ್ಧಾತ್ಮಕ ಯುಗದಲ್ಲಿ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದಿರಿ…
ಎಸ್‌ಬಿ ಬಿ ಎನ್ ಬಿ,ಎಡ್, ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಗುಡೆಕೋಟೆ ನಾಗರಾಜ್ ರವರ ಅಭಿಮತ
ಹೊಸಪೇಟೆ ನಗರದ ಪಿಡಿಐಟಿ ಕ್ಯಾಂಪಸ್ ಬಿ, ಎಡ್, ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು..
ಪ್ರಸ್ತುತ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಆಧುನಿಕ ಭರಾಟೆಯಲ್ಲಿ, ಆಧುನಿಕ ತಂತ್ರಜ್ಞಾನ ಮತ್ತು ಮೊಬೈಲ್ ಯುಗದಲ್ಲಿ ಸ್ಪರ್ಧಾರ್ಥಿಗಳು ಆತ್ಮಸ್ಥೈರ್ಯ ಕಳೆದುಕೊಳ್ಳುವುದು ಅತ್ಯಂತ ವಿಷದವಾದ ಸಂಗತಿ, ವಿದ್ಯಾರ್ಥಿಗಳೇ ಕಾಯ ವಾಚ ಮನಸ್ಸಿನಿಂದ ಕಠಿಣ ಪರಿಶ್ರಮ ಸಂಕಲ್ಪದಿಂದ ನಿಮ್ಮ ಕೆಲಸವನ್ನು ಮನಸ್ಸಿಟ್ಟು ಮಾಡಿ.. ನಿಮ್ಮ ಗುರಿಯನ್ನು ನೀವು ಮುಟ್ಟೆ ಮುಟ್ಟುತ್ತೀರಿ.. ವಿದ್ಯಾರ್ಥಿಗಳನ್ನು ಉರಿದುಂಬಿಸಿ ಅಧ್ಯಕ್ಷೀಯ ಮಾತುಗಳನ್ನಾಡಿದರು..
ತತ್ವಜ್ಞಾನಿಗಳು, ಶಿಕ್ಷಣದ ವಿದ್ವಾಂಸರು ಭಾರತದ ಎರಡನೇ ರಾಷ್ಟ್ರಪತಿ ಡಾ. ಸರ್ವಪಲ್ಲೆ ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಅಧ್ಯಕ್ಷರು ಮತ್ತು ಅತಿಥಿಗಳು ಗಣ್ಯಮಾನ್ಯರು ಪುಷ್ಪಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು…
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಭಾಷಣ ನಡೆಯಿತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿ ನವಮಿ ಚಂದ್ರ ಮತ್ತು ಪ್ರಶಾಂತ್ ರವರು ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಬಗ್ಗೆ, ಅತ್ಯಂತ ಉತ್ತಮವಾಗಿ ವಿದ್ಯಾರ್ಥಿ ಭಾಷಣವನ್ನು ಮಾಡಿದರು..
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿಜಯನಗರ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ ಎನ್ ಪ್ರಭುಗೌಡ ಸರ್ ಅವರು ಶಿಕ್ಷಕರು ವಿದ್ಯಾರ್ಥಿಗಳನ್ನು ಅತ್ಯಂತ ಸಹಾನುಭೂತಿಯಿಂದ ಅವರ ವ್ಯಕ್ತಿತ್ವವನ್ನು ಬದಲಿಸಬೇಕು, ಸಮಾಜವನ್ನು ಸುಧಾರಣೆ ಮಾಡುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಸ್ಮರಣೀಯವಾದದು, ಎಂದು ತಮ್ಮ ಅತಿಥಿಯ ನುಡಿಗಳ ನಾಡಿದರು..
ಹಾಗೆ ಕಾರ್ಯಕ್ರಮದಲ್ಲಿ ಇನ್ನೋರ್ವ ಅತಿಥಿಗಳಾಗಿ ಭಾಗವಹಿಸಿದ ಚಿತ್ವಾಡಗಿ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲರು ಬಿವಿ ಶ್ರೀಧರ್ ಸರ್ ಅವರು ಮಾತನಾಡುತ್ತಾ.. ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಕ್ಷೇತ್ರದಲ್ಲಿ ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಶೈಕ್ಷಣಿಕ ದಾಸೋಹ ಸೇವೆ ಎಷ್ಟೋ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದೆ.. ಸಂಘದ ನಿಸ್ವಾರ್ಥ ಕಾರ್ಯವನ್ನು ಸ್ಮರಿಸಿ,ಶಿಕ್ಷಕರ ವ್ಯಕ್ತಿತ್ವ ವಿದ್ಯಾರ್ಥಿಗಳಿಗೆ ಸದಾಾವ ಕಾಲ ಪ್ರೇರಣೆದಾಯಕವಾದದ್ದು, ಆದ್ದರಿಂದ ಬದುಕಿನಲ್ಲಿ ಉತ್ತಮ ಗುರಿಗಳನ್ನು ಇಟ್ಟುಕೊಳ್ಳುವ ಮೂಲಕ ಸಾಧನೆಯ ಹಾದಿಯಲ್ಲಿ ಸಾಗಬೇಕು, ನಮ್ಮ ಉಜ್ವಲ ಭವಿಷ್ಯಕ್ಕೆ ಮಾರ್ಗದರ್ಶನ ಮಾಡಿ ನಮ್ಮ ಯಶಸ್ಸಿಗೆ ಕಾರಣಿಭೂತರಾದ ನಮ್ಮ ಗುರುಗಳನ್ನು ನಾವು ಎಂದಿಗೂ ನಮ್ಮ ಜೀವನದಲ್ಲಿ ಮರೆಯಬಾರದು ಎಂದು ಅತಿಥಿನುಡಿಗಳನ್ನು ಆಡಿದರು..

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಡಾ: ಪ್ರಭುಗೌಡ ಸರ್.. ಮತ್ತು ಬಿವಿ ಶ್ರೀಧರ್ ಸರ್ ಅವರಿಗೆ ಮಹಾವಿದ್ಯಾಲಯದಿಂದ ಗೌರವಿಸಲಾಯಿತು…
ಈ ಸಂದರ್ಭದಲ್ಲಿ ಗೌರವ ಉಪಸ್ಥಿತಿ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾಧ್ಯಕ್ಷರಾದ ಕೆ ರವಿಶಂಕರ್, ಸರ್ ಅವರು ಮಾತನಾಡುತ್ತಾ ಜಗತ್ತಿನ ಅತ್ಯಂತ ಶ್ರೇಷ್ಠ ಸೇವೆ ಎಂದರೆ ಅದು ಶಿಕ್ಷಕನ ವೃತ್ತಿ.. ಈ ಶಿಕ್ಷಕನ ವೃತ್ತಿಯಲ್ಲಿ ಸೇವೆ ಮಾಡುವುದಕ್ಕೆ ಪುಣ್ಯವಿರಬೇಕು.. ಶಿಕ್ಷಣದಿಂದ ಬದಲಾವಣೆ ಮಾತ್ರ ಸಾಧ್ಯ ಎಂದು ತಮ್ಮ ಗೌರವದ ಮಾತುಗಳಾಡಿದರು… ಕಾಲೇಜಿನ ಪ್ರಾಂಶುಪಾಲರಾದ ಡಾ. ಶಿವನಗೌಡ ಎಸ್ ಸತ್ಮಾರ್ ಅವರು ಸರ್ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಹತ್ವದ ಬಗ್ಗೆ ಮನವರಿಕೆ ಮಾಡಿ.. ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಮಾತುಗಳನಾಡಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಎಸ್ ಗುರುಬಸವರಾಜ್, ಐಕ್ಯೂ ಎಸಿ ಸಂಯೋಜಕರಾದ ಡಾ ಜಗದೀಶ್ ಶೇಖರಯ್ಯ ಹಿರೇಮಠ್, ವಿದ್ಯಾರ್ಥಿ ಸಂಘದ ಸಂಚಾಲಕರಾದ ಡಾ. ಪಿ ಎಂ ಸಿದ್ದಲಿಂಗಸ್ವಾಮಿ, ಹಾಗೆಯೇ ಕಾಲೇಜಿನ ಇತರೆ ಅಧ್ಯಾಪಕರಾದ ಡಾ:ಪಾರ್ವತಿ ಕೆಎಂ. ಡಾ: ಮಲ್ಲಿಕಾ, ಡಾ. ಶೋಭಾ ಪಾಟೀಲ್, ಡಾ: ವಿಶ್ವನಾಥ್ ಗೌಡ, ಡಾ: ಸತೀಶ್ ಸೂರಿಮಠ, ಮಲ್ಲಿಕಾರ್ಜುನ ಇಟಗಿ, ಬಿದ್ರುಕುಂದಿ ಮಲ್ಲಿಕಾರ್ಜುನ, ಡಾ. ಉಮೇಶ್ ಹಡಗಲಿ, ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು.. ವಿದ್ಯಾರ್ಥಿ ಸಂಘದ ಸದಸ್ಯರು ಭಾಗವಹಿಸಿದರು ಕಾರ್ಯಕ್ರಮದ ಪ್ರಶಿಕ್ಷಣಾರ್ಥಿಗಳಾದ ಪ್ರಾರ್ಥನೆ ಪೂಜಾ ಜಿಎಂ ಸಂಗಡಿಗರು, ಸ್ವಾಗತ ಶಿವಾನಿ ಎ,ಬಿ. ವಂದನಾರ್ಪಣೆ ಸೋನಿಯಾ, ನಿರೂಪಣೆ ನಾಗರಾಜ್ ಗಂಟಿ.ಮತ್ತು ಮಲ್ಲಮ್ಮ ನೆರವೇರಿಸಿದರು..

More Stories
ಬೆಂಗಳೂರು ರಾಷ್ಟ್ರೀಯ ನಾಟಕ ಶಾಲೆಯ ರೆಪರ್ಟರಿಗೆ ಹಂಪಾಪಟ್ಟಣದ ಕಲಾವಿದ ಸುನಿಲ್ ಕುಮಾರ್ ಆಯ್ಕೆ
ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿಗೆ ಹಂಪಾಪಟ್ಟಣದ ಜಿ ಶ್ರೀನಿವಾಸ ಆಯ್ಕೆ
ರಂಗಭೂಮಿಯನ್ನೇ ಕಲೆಯನ್ನಾಗಿಸಿಕೊಂಡ : ಪ್ರೇಮ ಗುಳೇದಗುಡ್ಡ