January 31, 2026

ಕೊಪ್ಪಳದಲ್ಲಿ ಲೇಖಕಿಯರಿಗೆ ಸೆ.28 ರಂದು ಪ್ರಶಸ್ತಿ ಪ್ರದಾನ

ಜೂಡಿ ನ್ಯೂಸ್ :

ಕೊಪ್ಪಳದಲ್ಲಿ ಲೇಖಕಿಯರಿಗೆ ಸೆ.28 ರಂದು ಪ್ರಶಸ್ತಿ ಪ್ರದಾನ

   ಕೊಪ್ಪಳ : ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಿ ೨೮ ಸೆಪ್ಟೆಂಬರ್ ೨೦೨೫ ರಂದು ರವಿವಾರ ಮುಂಜಾನೆ ೧೧ ಗಂಟೆಗೆ ಕೊಪ್ಪಳದ ಸರಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಲೇಖಕಿಯರಿಗೆ ಮೀಸಲಾಗಿರುವ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ.

     ದತ್ತಿ ಪ್ರಶಸ್ತಿ ಪ್ರದಾನ : ದಿ.ಲಕ್ಷ್ಮಮ್ಮ ಗಂ. ದೊಡ್ಡ ಪಂಪಣ್ಣ ಗೋನಾಳ ಇವರ ಸ್ಮರಣಾರ್ಥ ನೀಡುವ ದತ್ತಿ ಪ್ರಶಸ್ತಿಗೆ ೨೦೨೧ _ನಾರೀ ಪದ್ಯ -ಸಾವಿತ್ರಿ ಮುಜಮದಾರ್. ೨೦೨೨_ಯಾವುದೇ ಕೃತಿಗಳು ಬಂದಿಲ್ಲ, ೨೦೨೩ ಗದ್ದಲದೊಳಗ್ಯಾಕ ನಿಂತಿ-ಅರುಣಾ ನರೇಂದ್ರ, ೨೦೨೪ ವಚನ ಹೊಳಹು -ರುದ್ರಮ್ಮ ಹಾಸಿನಾಳ ಇವರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.

ಸಂಘದ ಸರ್ವಸದಸ್ಯರು ಹಾಜರಿದ್ದು ಯಶಸ್ವಿಗೊಳಿಸಲು ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಹಕಾರ ಸಂಘ ನಿ.ಕೊಪ್ಪಳದ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಅವರು ಪ್ರಕಟಣೆ ಮೂಲಕ ಕೋರಿದ್ದಾರೆ.