ಜೂಡಿ ನ್ಯೂಸ್ :
ರೆಡ್ ಕ್ರಾಸ್ ಸಂಸ್ಥೆಯಿಂದ ಮಾನವ ಘನತೆ ಹೆಚ್ಚಿಸುವ ಕಾರ್ಯ…
ವಿಶ್ರಾಂತ ಪ್ರಾಧ್ಯಾಪಕ ಡಾ: ಕೆ ರವೀಂದ್ರನಾಥ್ ರವರ ಅಭಿಮತ
ಹೊಸಪೇಟೆಯ ಬಳ್ಳಾರಿ ವಿ. ವಿ,ಸ. ಸಂಘದ ಪಿ ಡಿ ಐ ಟಿ ಕ್ಯಾಂಪಸ್ಸಿನ ಎಸ್ ಎಸ್ ಬಿ ಬಿ ಎನ್ ಬಿ ಎಡ್ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ ಮತ್ತು ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಜಿನಿವಾ ಒಪ್ಪಂದ ದಿನಾಚರಣೆ ಹಾಗೂ ಪ್ರಥಮ ಚಿಕಿತ್ಸಾ ಕಾರ್ಯಗಾರ
ವನ್ನು ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ: ರವೀಂದ್ರನಾಥ್ ರವರು ಕಾರ್ಯಕ್ರಮನ ಉದ್ಘಾಟಿಸಿ ಉದ್ಘಾಟನೆ ನುಡಿಗಳ ನಾಡಿದರು…
ಜಿನಿವಾ ಒಪ್ಪಂದವು ಅಂತರಾಷ್ಟ್ರೀಯ ಕಾನೂನುಗಳ ಆಧಾರವಾಗಿದೆ, ಜಿನಿವಾ ಒಪ್ಪಂದದಲ್ಲಿ ಸ್ಥಾಪಿಸಿತಗೊಂಡ ಅಂತರಾಷ್ಟ್ರೀಯ ಮಾನವೀಯ ಸಂಸ್ಥೆ ರೆಡ್ ಕ್ರಾಸ್ ಸಂಸ್ಥೆಯು ಯುದ್ಧದ ಸೈನಿಕರಿಗೆ ನಾಗರಿಕರಿಗೆ ಕೈದಿಗಳಿಗೆ ಸೂಕ್ತ ಚಿಕಿತ್ಸೆ ಸಾಂತ್ವಾನ ಮತ್ತು ಆತ್ಮ ಗೌರವವನ್ನು ಬೆಳೆಸಿ.. ಯುದ್ಧವನ್ನು ತಡೆಗಟ್ಟುವ. ಮಾನವನ ಘನತೆಯನ್ನು ಹೆಚ್ಚಿಸುವ ಕಾರ್ಯವನ್ನು ರೆಡ್ ಕ್ರಾಸ್ ಸಂಸ್ಥೆ ನಿರ್ವಹಿಸುತ್ತಿದ್ದು.. ಜಗತ್ತಿನ ಹಲವಾರು ಸಂಕಷ್ಟಗಳಿಗೆ ರೆಡ್ ಕ್ರಾಸ್ ಸಂಸ್ಥೆಯು ತನ್ನದೇ ಆದ ನಿಸ್ವಾರ್ಥ ಸೇವೆ ಮಾಡುತ್ತಿದ್ದು.. ಈ ಸೇವೆಯು ಸಕಲರಿಗೂ ಸ್ಪೂರ್ತಿ ಮತ್ತು ಪ್ರೇರಣದಾಯಕ
ಎಂದು ನುಡಿದರು ..
ಹಾಗೆ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನಾಡಿದ ವಿಜಯನಗರ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು.. ಹೊಸಪೇಟೆ ಟೈಮ್ಸ್ ಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀಮತಿ ರೇಖಾ ಪ್ರಕಾಶ್ ರವರು.. ವಿಜಯನಗರ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಅತ್ಯಂತ ಮಾನವೀಯ ಕಳೆಕಳೆಯನ್ನು ಹೋOದಿದ್ದು, ವಿಶ್ವ ಶಾಂತಿಗಾಗಿ ನಡಿಗೆ, ಆರೋಗ್ಯ ಶಿಬಿರ ರಕ್ತದಾನ ಶಿಬಿರ, ಹಲವಾರು ಜನಪಯೋಗಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ.. ವಿಶ್ವ ಶಾಂತಿಗಾಗಿ ಜಿನೀವಾ ಒಪ್ಪಂದ ಕುರಿತು ಬಿಎಡ್ ಕಾಲೇಜಿನಲ್ಲಿ ಭಾಷಣ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳು ರೆಡ್ ಕ್ರಾಸ್ ಸಂಸ್ಥೆಯ ಹಲವಾರು ಸೇವೆಗಳನ್ನು ಬಳಸಿಕೊಳ್ಳಬೇಕೆಂದು ತಿಳಿಸಿದರು..
ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿ ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಶ್ರೀನಿವಾಸ್ ರೆಡ್ಡಿ ಇಂತಹ ಉಪಯುಕ್ತ ಕಾರ್ಯಕ್ರಮದಲ್ಲಿ ಭಾಗವಹಿಸಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು..
ನಂತರ ಕಾರ್ಯಕ್ರಮದಲ್ಲಿ
ಉಪಸ್ಥಿತಿವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ: ಶಿವನಗೌಡ ಸಾತ್ಮಾರ್ ರವರು ವಿಜಯನಗರ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಸಮಾಜ ಸೇವಕರು ವಿಜಯನಗರ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾಧ್ಯಕ್ಷರು ಕೆ ರವಿಶಂಕರ್ ರವರ ನಾಯಕತ್ವದಲ್ಲಿ ಹಲವಾರು ಉಪಯೋಗ ಕಾರ್ಯಕ್ರಮಗಳು ಹಮ್ಮಿಕೊಂಡಿದ್ದು… ಇಂತಹ ಕಾರ್ಯಕ್ರಮಗಳು ಯುವ ಜನರಿಗೆ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾದುದು ಜಿಲ್ಲಾ ಘಟಕದ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿ ಶ್ಲಾಘನೀಯ ವ್ಯಕ್ತಪಡಿಸಿದರು..
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ವಿಜಯನಗರ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾಧ್ಯಕ್ಷರು.. ಸಮಾಜ ಸೇವಕರು ಕೆ ರವಿಶಂಕರ್ ರವರು ಮಾತನಾಡುತ್ತಾ ಅಂತರಾಷ್ಟ್ರೀಯ ಮಾನವಿಯಯ ಸಂಸ್ಥೆ ರೆಡ್ ಕ್ರಾಸ್ ಸಂಸ್ಥೆಯು ವಿಶ್ವದಲ್ಲಿ ತನ್ನದೇ ಆದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದು.. ಸರ್ವರು ಮಾನವೀಯ ಗುಣವನ್ನು ಅಳವಡಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕು ಹಾಗೆಯೇ ಸಂಸ್ಥೆಯ ಹಲವಾರು ಕಾರ್ಯಕ್ರಮಗಳ ಉಪಯೋಗವನ್ನು ಪಡೆದುಕೊಂಡು ರೆಡ್ ಕ್ರಾಸ್ ಸಂಸ್ಥೆಯ ಜೊತೆಗೆ ಕೈಜೋಡಿಸಿ ಎಂದು ತಿಳಿಸಿದರು…
ನಂತರ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಮೊದಲ ವರ್ಷದ ಪ್ರಶಿಕ್ಷಣಾರ್ಥಿ ರೇಷ್ಮಾ, ದ್ವಿತೀಯ ಸ್ಥಾನವನ್ನು ದ್ವಿತೀಯ ವರ್ಷದ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿ ಹೀನಾ ಕೌಸರ್.. ತೃತೀಯ ಸ್ಥಾನ ಮಲಮ್ಮ ಮತ್ತು ನಾಗರಾಜ್ ಗಂಟಿ ಪಡೆದರು..
ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ವಿಜಯನಗರ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ನಗದು ಬಹುಮಾನ ಪಡೆದರು..
ಭಾಷಣ ಸ್ಪರ್ಧೆಯ ನಿರ್ಣಾಯಕರಾಗಿ ಡಾ: ಪಾರ್ವತಿ ಕೆ ಎಂ, ಡಾ. ಶೋಭಾ ಪಾಟೀಲ್, ಡಾ. ಮಲ್ಲಿಕಾ ನಿರ್ಣಾಯಕ ರಾಗಿ ವಿಜೇತರ ಹೆಸರನ್ನು ಪ್ರಕಟಿಸಿದರು..
ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸಾ ಕಾರ್ಯಗಾರವನ್ನು ಡಾಕ್ಟರ್ ಉಮೇಶ್ ಆರ್ ಹಳ್ಳಿಕೇರಿ ಎಂಡಿ ಸಂಪನ್ಮೂಲ ವ್ಯಕ್ತಿಗಳು ಕರ್ನಾಟಕ ಕ್ಯಾನ್ಸರ್ ಮತ್ತು ಸಂಶೋಧನಾ ಸಂಸ್ಥೆ ನವನಗರ ಹುಬ್ಬಳ್ಳಿ ಇವರು ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಿಗೆ ಹಲವಾರು ವಿವಿಧ ಪ್ರಥಮ ಚಿಕಿತ್ಸಾ ವಿಧಾನಗಳನ್ನು ತಿಳಿಸಿ, ವಿದ್ಯಾರ್ಥಿಗಳಿಗೆ ಆರೋಗ್ಯಕರ ಜೀವನ ಶೈಲಿ ಆರೋಗ್ಯಕರ ಮಾಹಿತಿಯನ್ನು ನೀಡಿದರು..
ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರು.. ಹಾಗೇಯ ಕಾಲೇಜಿನ ಐಕ್ಯೂ ಎಸಿ ಸಂಯೋಜಕರಾದ ಡಾ ಜಗದೀಶ್ ಶೇಖರಯ್ಯ ಹಿರೇಮಠ್, ಡಾ. ಪಿ ಎಂ ಸಿದ್ದಲಿಂಗಸ್ವಾಮಿ, ಅಧ್ಯಾಪಕರಾದ ವಿಶ್ವನಾಥ್ ಗೌಡ, ಡಾ: ಸತೀಶ್ ಸೂರಿಮಠ, ಮಲ್ಲಿಕಾರ್ಜುನ ಇಟಗಿ, ಬಿದ್ರುಕುಂದಿ ಮಲ್ಲಿಕಾರ್ಜುನ, ಡಾ. ಉಮೇಶ್ ಹಡಗಲಿ, ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಭಾಗವಿಹಿಸಿದರು ಪ್ರಾರ್ಥನೆ ಜ್ಯೋತಿ, ಸ್ವಾಗತ ಮಂಜುಳಾ, ವಂದನಾರ್ಪಣೆ ನಿಸಾರ್, ನಿರೂಪಣೆ ಚಾಗಿ ಲಕ್ಷ್ಮಿ ರವರು ನೆರವೇರಿಸಿದರು.

More Stories
ಬೆಂಗಳೂರು ರಾಷ್ಟ್ರೀಯ ನಾಟಕ ಶಾಲೆಯ ರೆಪರ್ಟರಿಗೆ ಹಂಪಾಪಟ್ಟಣದ ಕಲಾವಿದ ಸುನಿಲ್ ಕುಮಾರ್ ಆಯ್ಕೆ
ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿಗೆ ಹಂಪಾಪಟ್ಟಣದ ಜಿ ಶ್ರೀನಿವಾಸ ಆಯ್ಕೆ
ರಂಗಭೂಮಿಯನ್ನೇ ಕಲೆಯನ್ನಾಗಿಸಿಕೊಂಡ : ಪ್ರೇಮ ಗುಳೇದಗುಡ್ಡ