ಜೂಡಿ ನ್ಯೂಸ್ :
ಕಿರ್ಲೋಸ್ಕರ್ ಕಾರ್ಖಾನೆಯ ಸಾಮಾಜಿಕ ಸೇವೆ ಅನುಕರಣೀಯ – ಸಂಸದ ರಾಜಶೇಖರ ಹಿಟ್ನಾಳ
ಕೊಪ್ಪಳ : ಯಾವುದೇ ಊರು, ರಾಜ್ಯ , ದೇಶ ಅಭಿವೃದ್ದಿಯಾಗಬೇಕಾದರೆ ಕಾರ್ಖಾನೆಗಳು ಅವಶ್ಯಕ. ಕಾರ್ಖಾನೆಗಳ ಸ್ಥಾಪನೆಯಿಂದ ಉದ್ಯೋಗಗಳು ಸೃಷ್ಟಿಯಾಗುತ್ತವೆ ಕಾರ್ಖಾನೆಗಳ ಮೂಲಕ ಎಲ್ಲ ರೀತಿಯ ಅಭಿವೃದ್ದಿ ಸಾಧ್ಯವಾಗುತ್ತದೆ. ಯಾವುದೇ ಕಾರ್ಖಾನೆಯಿಂದ ೯೦% ರಷ್ಟು ಒಳಿತಾದರೆ ೧೦% ಕೆಡಕು ಇದ್ದದ್ದೇ ಹಾಗಂತ ನಾವು ಎಲ್ಲಾ ಕಾರ್ಖಾನೆಗಳನ್ನು ವಿರೋದಿಸುವುದಕ್ಕಾಗುವುದಿಲ್ಲ. ಕೊಪ್ಪಳ ಜಿಲ್ಲೆಗೆ ಕಾರ್ಖಾನೆಗಳು ಬರುತ್ತಿವೆ. ಎಲ್ಲರ ಅಭಿಪ್ರಾಯ ಎಂದರೆ ಜನವಸತಿ ಪ್ರದೇಶದಿಂದ ಈ ಕಾರ್ಖಾನೆಗಳು ದೂರ ಇರಬೇಕು ಎನ್ನುವುದು ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ಅವರು ಇಂದು ಹುಬ್ಬಳ್ಳಿಯ ಪ್ರತಿಷ್ಠಿತ ವಿಹಾನ್ ಹೃದಯ ಸೂಪರ್ ಸ್ಪೆಷಾಲಿಟಿಆಸ್ಪತ್ರೆ, ಕೊಪ್ಪಳದ ಕೆ ಎಸ್‌ಆಸ್ಪತ್ರೆ, ಕೊಪ್ಪಳದ ರೆಡ್‌ಕ್ರಾಸ್ ಸಂಸ್ಥೆ, ಸರ್ವೋದಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಕಿರ್ಲೋಸ್ಕರ್ ಫೆರಸ್‌ಗ್ರಾಮೀಣಾಭಿವೃದ್ಧಿಟ್ರಸ್ಟ್ ಸಹಭಾಗಿತ್ವದಲ್ಲಿ ಕೊಪ್ಪಳದ ಮಧುಶ್ರೀ ಗಾರ್ಡ್ನ್‌ನಲ್ಲಿ ಆಯೋಜಿಸಲಾಗಿದ್ದ ಆರೋಗ್ಯತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಿರ್ಲೋಸ್ಕರ್ ಕಾರ್ಖಾನೆಯು ತನ್ನ ಸಾಮಾಜಿಕ ಬದ್ದತೆಯನ್ನು ತೋರುತ್ತ ವಿವಿಧ ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡಿದೆ. ಕಳೆದ ೩೦ ವರ್ಷಗಳಿಂದ ಕಾರ್ಖಾನೆಯ ಚಟುವಟಿಕೆಗಳನ್ನು ಅಭಿವೃದ್ದಿ ಕಾರ್ಯಗಳನ್ನು ನೋಡುತ್ತಾ ಬಂದಿದ್ದೇವೆ. ಇದಕ್ಕಾಗಿ ಕಾರ್ಖಾನೆಯ ಸಂಪೂರ್ಣ ಆಡಳಿತ ಮಂಡಳಿಗೆ ಅಭಿನಂದನೆಗಳು. ಪರಿಸರ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಇತ್ತೀಚಿಗೆ ಹೊಸ ಹೊಸ ತಂತ್ರಜ್ಞಾನ ಬಂದಿದೆ. ಅವೆಲ್ಲವನ್ನೂ ಇತರೆ ಕಾರ್ಖಾನೆಗಳವರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರೂ, ಉದ್ಯಮಿಗಳು ಆದ ಶ್ರೀನಿವಾಸ ಗುಪ್ತಾ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಮಾತನಾಡಿದರು
ಪ್ರಾಸ್ತಾವಿಕವಾಗಿ ಮಾತನಾಡಿದ ಕೆಎಫ್‌ಐಎಲ್ಸಂಸ್ಥೆಯಕಾರ್ಯನಿರ್ವಾಹಕಉಪಾಧ್ಯಕ್ಷರಾದ ಡಾ. ಪಿ. ನಾರಾಯಣರವರು ಸಂಸ್ಥೇ ನಡೆದು ಬಂದ ದಾರಿ ಹಾಗೂ ಈ ವರೆಎ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿರುವ ವಿವಿಧ ಸಮಾಜ ಮುಖಿ ಕೆಲಸಗಳ ಕುರಿತು ಸವಿಸ್ತಾರವಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿಕೊಂಡಿದ್ದ ಸಂಸ್ಥೆಯ ವ್ಯವಸ್ಥಾಪಕ ನಿರ್ದೆಶಕ ಆರ್.ವಿ.ಗುಮಾಸ್ತೆಯವರು ಮಾತನಾಡಿ ಕಾರ್ಖಾನೆಯು ಹಿಂದುಳಿದ ಪ್ರದೇಶವಾದ ಕೊಪ್ಪಳ ಜಿಲ್ಲೆಯ ಬೇವಿನಹಳ್ಳಿಯ ಹತ್ತಿರ ೧೯೯೩ ರಲ್ಲಿ ಸ್ಥಾಪಿನೆಗೊಂಡ ನಂತರ ಬೀಡುಕಬ್ಬಿಣ ಮತ್ತು ಬೂದುಕಬ್ಬಿಣದ ಎರಕಗಳನ್ನು ಉತ್ಪಾದಿಸುತ್ತಿದೆ. ಈ ಉತ್ಪನ್ನಗಳು ಮುಖ್ಯವಾಗಿ ವಾಹನ ತಯಾರಿಕಾ ವಲಯಕ್ಕೆ ಬಿಡಿಭಾಗಗಳನ್ನು ದೇಶ ವಿದೇಶದ ಗ್ರಾಹಕರಿಗೆ ಮಾರಾಟ ಮಾಡುತ್ತ ಬಂದಿದೆ ಹಾಗು ಸಂಸ್ಥೆಯು ಹಲವಾರು ಕಷ್ಟಕರ ಸಂದರ್ಭಗಳಲ್ಲೂ ಸಹ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸಿದೆ ಎಂದು ಹೇಳಿದರು. ಇಂದಿನ ದಿನಮಾನಗಳಲ್ಲಿ ಆರೋಗ್ಯದ ಬಗ್ಗೆ ಎಚ್ಚರ ವಹಿಸುವುದು ಅಗತ್ಯವಾಗಿದೆ. ಪ್ರತಿವರ್ಷ ತಪ್ಪದೇ ಆರೋಗ್ಯದ ತಪಾಸಣೆ ಮಾಡಿಸಿಕೊಳ್ಳುತ್ತ ಬಂದರೆ ಕೊನೆಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ನೆರವಾಗುತ್ತದೆ. ಈ ನಿಟ್ಟಿನಲ್ಲಿ ಸಂಸ್ಥೆಯು ನಗರಪ್ರದೇಶದ ಜನರಿಗಾಗಿ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಂಡಿದ್ದು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜನ ಇದರ ಪ್ರಯೊಜನ ಪಡೆದುಕೊಳ್ಳಲಿ , ಮುಂದಿನ ದಿನಗಳಲ್ಲಿ ಗ್ರಾಮಾಂತರ ಭಾಗದಲ್ಲೂ ಆರೋಗ್ಯ ತಪಾಸಣೆಯನ್ನು ಹಮ್ಮಿಕಕೊಳ್ಳಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ೨೦೦ ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು. ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಹೃದಯ ತಪಾಸಣೆ (೨೨೦) ಹಾಗೂ ಮೂಳೆ ಸಾಂದ್ರತೆಯ ತಪಾಸಣೆ (೧೭೫) ಮಾಡಿಸಿಕೊಂಡರು. ಹಳ್ಳಿಗಳಿಂದ ಬಂದAತಹ ಜನರೂ ಸಹ ತಪಾಸಣೆ ಮಾಡಿಸಿಕೊಂಡು ಶಿಭಿರದ ಸದುಪಯೋಗವನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ವಿಹಾನ್ ಆಸ್ಪತ್ರೆಯ ವೈದ್ಯರು , ಕಾರ್ಖಾನೆಯ ಹಿರಿಯ ಅಧಿಕಾರಿಗಳು, ಮಹಿಳಾ ಕ್ಲಬ್ ನ ಅಧ್ಯಕ್ಷರು ಸದಸ್ಯರು, ಪದಾಧಿಕಾರಿಗಳು ಉಪಸ್ತಿತರಿದ್ದರು. ಸ್ವಾಗತವನ್ನು ಶಿವಯ್ಯ ಸ್ವಾಮಿ, ನಿರೂಪಣೆಯನ್ನು ರಮೇಶ ದಿಕ್ಷಿತ ಹಾಗೂ ವಂದನಾರ್ಪಣೆಯನ್ನು ಉದ್ದವ್ ಕುಲಕರ್ಣಿ ನೆರವೇರಿಸಿದರು.

More Stories
ಬೆಂಗಳೂರು ರಾಷ್ಟ್ರೀಯ ನಾಟಕ ಶಾಲೆಯ ರೆಪರ್ಟರಿಗೆ ಹಂಪಾಪಟ್ಟಣದ ಕಲಾವಿದ ಸುನಿಲ್ ಕುಮಾರ್ ಆಯ್ಕೆ
ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿಗೆ ಹಂಪಾಪಟ್ಟಣದ ಜಿ ಶ್ರೀನಿವಾಸ ಆಯ್ಕೆ
ರಂಗಭೂಮಿಯನ್ನೇ ಕಲೆಯನ್ನಾಗಿಸಿಕೊಂಡ : ಪ್ರೇಮ ಗುಳೇದಗುಡ್ಡ