January 31, 2026

ಸ್ವಾಸ್ಥ್ಯ ಸಂಕಲ್ಪ – ಜಿಲ್ಲಾ ಕಾರಾಗೃಹ ಬಂದಿಗಳಿಗೆ ಕ್ರೀಡೋತ್ಸವ ಕಾರ್ಯಕ್ರಮ ಯಶಸ್ವಿ

ಜೂಡಿ ನ್ಯೂಸ್ :

ಸ್ವಾಸ್ಥ್ಯ ಸಂಕಲ್ಪ – ಜಿಲ್ಲಾ ಕಾರಾಗೃಹ ಬಂದಿಗಳಿಗೆ ಕ್ರೀಡೋತ್ಸವ ಕಾರ್ಯಕ್ರಮ ಯಶಸ್ವಿ

ದಿನಾಂಕ 22/09/2025 ಸೋಮವಾರ ದಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಕೊಪ್ಪಳ, ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವೆಗಳು ಕೊಪ್ಪಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಖಿ ಒನ್ ಸ್ಟಾಪ್ ಸೆಂಟರ್, ಜಿಲ್ಲಾ ಮಹಿಳಾ ಸಬಲೀಕರಣ ಘಟಕ ಕೊಪ್ಪಳ ಸಹಯೋಗದಲ್ಲಿ ಕಾರಾಗೃಹದಲ್ಲಿ ಇರುವಂತಹ ಬಂದಿಗಳಿಗೆ ಸ್ವಸ್ಥ ಸಂಕಲ್ಪ ಕಾರ್ಯಕ್ರಮದಲ್ಲಿ ಆಯೋಜಿಸಲಾಯಿತು.

 ಕ್ರೀಡೆಯಲ್ಲಿ ವಿಜೇತರಾದವರಿಗೆ 24ನೇ ಸೆಪ್ಟಂಬರ್ 2025 ರಂದು ಪ್ರಶಸ್ತಿ ಪತ್ರ ಪ್ರಮಾಣವನ್ನು ನೀಡುವುದರ ಮೂಲಕ ರಾಜ್ಯ ಸಂಪನ್ಮೂಲ ವ್ಯಕ್ತಿ  ವಿವೇಕ್ ಪಾಯಿಸ್, ಪ್ರಾದೇಶಿಕ ನಿರ್ದೇಶಕರು ಧರ್ಮ ಶ್ರೀ ಧರ್ಮಸ್ಥಳ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರ, ಉಜಿರೆ, ಧರ್ಮಸ್ಥಳ ರವರಿಂದ ಉಪನ್ಯಾಸ ನೀಡುವುದರ ಮೂಲಕ ಬಂದಿಗಳಿಗೆ ಇನ್ನಷ್ಟು ಉತ್ತೇಜಿಸುವ ಮೂಲಕ ಸ್ವಾಸ್ಥ್ಯ ಸಂಕಲ್ಪವನ್ನು ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದೆಂದು ಸಖಿ ಘಟಕ ಆಡಳಿತಾಧಿಕಾರಿ ಯಮುನಾ ರವರು ತಿಳಿಸಿದರು.

 

ಡಾ. ರಾಮ್ ಎಲ್. ಅರಸಿದ್ದಿ, ಭಾ.ಪೊ.ಸೇ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು , ಕಾರ್ಯಕ್ರಮವನ್ನು ಉದ್ಘಾಟಿಸಿ ಮಾನಸಿಕ ಆರೋಗ್ಯ ಹಾಗೂ ದೈಹಿಕ ಆರೋಗ್ಯಕ್ಕೆ ಕ್ರೀಡೆ ಬಹುಮುಖ್ಯವಾಗಿದೆ. ಮನಸ್ಸಿನ ಆಲೋಚನೆಗಳು ಸರಿ ಇಲ್ಲದಿರುವಾಗ ವ್ಯಕ್ತಿ ಅಪರಾಧಿಕ ಚಟುವಟಿಕೆಗಳ ಕಡೆ ಗಮನ ನೀಡುತ್ತಾನೆ. ಬಂದಿಗಳು ತಿಳುವಳಿಕೆಯಿಲ್ಲದ ಮಾಡಿದ ತಪ್ಪುಗಳನ್ನು ಮರೆತು ಮಾನಸಿಕವಾಗಿ ಸದೃಢರಾಗಿರುಲ್ಲಿ ಕ್ರೀಡೆಯು ಒಂದು ಸಾಧನವಾಗಿದೆ. ಹಾಗೂ ಸಮಾಜದ ಸುಸ್ಥಿರ ಏಳಿಗೆಗಾಗಿ ಶ್ರಮಿಸುವಲ್ಲಿ ಹೊಸತನದ ಭವಿಷ್ಯದ ಉನ್ನತ ಗುರಿಕೊಳ್ಳುವಂತೆ ಪ್ರೇರಣಾತ್ಮವಾಗಿರುವಂತೆ ತಿಳಿಸಿದರು.

ಅಂಬರೀಶ್ ಎಸ್ ಪೂಜಾರ್ ಅಧೀಕ್ಷಕರು ಜಿಲ್ಲಾ ಕಾರಾಗೃಹ ಕೊಪ್ಪಳ,  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ಗಾಯತ್ರಿ ರೂಡ್ಡ ಪೊಲೀಸ್ ಇನ್ಸ್ಪೆಕ್ಟರ್ ಆಂತರಿಕ ಭದ್ರತಾ ವಿಭಾಗ ಬಳ್ಳಾರಿ,ಜೈಪ್ರಕಾಶ್ ಪೊಲೀಸ್ ಇನ್ಸ್ಪೆಕ್ಟರ್ ನಗರ ಪೊಲೀಸ್ ಠಾಣೆ ಕೊಪ್ಪಳ  ಚಂದ್ರಶೇಖರ್ ಪ್ರಾದೇಶಿಕ ನಿರ್ದೇಶಕರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಕೊಪ್ಪಳ ಪ್ರಕಾಶ್ ರಾವ್ ಜಿಲ್ಲಾ ನಿರ್ದೇಶಕರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕೊಪ್ಪಳ ಶ್ರೀಮತಿ ಶ್ರೀದೇವಿ, ಮತ್ರು ಶ್ರೀಮತಿ ಫಾತಿಮಾ ಮಹಿಳಾ ಸಬಲೀಕರಣ ಘಟಕ ಹೊಪ್ಪಳ, ತಂಡ ಹಾಗೂ ಶ್ರೀಮತಿ ಹುಲಿಗೆಮ್ಮ, ಕು ನಿರ್ಮಲಾ, ತಂಡ ಸಖಿ ಒನ್ ಸ್ಟಾಪ್ ಸೆಂಟರ್ ಕೊಪ್ಪಳ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜಿಲ್ಲಾ ಕಾರಾಗೃಹ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.. ಕಾರ್ಯಕ್ರಮದ ನಿರೂಪಣೆ ಶ್ರೀಮತಿ ಯಮುನಾ ಸಖಿ ಘಟಕ ಆಡಳಿತಾಧಿಕಾರಿಗಳು, ಹಾಗೂ ಕ್ರೀಡೆಯ ಉಸ್ತುವಾರಿಯನ್ನು ಬಸವರಾಜ್ ದೈಹಿಕ ಶಿಕ್ಷಕರು ಸರಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು, ಕೊಪ್ಪಳ . ಬಂದಿಗಳಿಗೆ ಕ್ರೀಡೆಯನ್ನು ಆಡಿಸುವುದರ ಕ್ರೀಡಾ ಕಾರ್ಯಕ್ರಮವನ್ನು ಮೂಲಕ ಯಶಸ್ವಿಗೊಳಿಸಿರುತ್ತಾರೆ.