January 31, 2026

ಸಿವಿಸಿ,ಡಾ.ಕ್ಯಾವಟರ್ ಆರೋಪ ಸತ್ಯಕ್ಕೆ ದೂರವಾದುದು : ಗಾಳೆಪ್ಪ ಪೂಜಾರ

ಜೂಡಿ ನ್ಯೂಸ್ :

ಸಿವಿಸಿ,ಡಾ.ಕ್ಯಾವಟರ್ ಆರೋಪ ಸತ್ಯಕ್ಕೆ ದೂರವಾದುದು : ಗಾಳೆಪ್ಪ ಪೂಜಾರ

ಕೊಪ್ಪಳ ಸೆ 19: ಸಿ.ವಿ.ಚಂದ್ರಶೇಖರ್ ಹಾಗೂ ಡಾ.ಬಸವರಾಜ ಕ್ಯಾವಟ‌ ಇವರಿಬ್ಬರೂ ಆಡಳಿತ ಕಾಂಗ್ರೆಸ್, ಪಕ್ಷದ ಮೇಲೆ ಭ್ರಷ್ಟಾಚಾರದ ಕುರಿತು ಸುಳ್ಳು ಆರೋಪ ಮಾಡುತ್ತಿದ್ದು ಇವರ ಇಬ್ಬರ ಆರೋಪ ಕೂಡ ಸತ್ಯಕ್ಕೆ ದೂರವಾದದ್ದು ಎಂದು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಪಕ್ಷದ ಎಸ್.ಸಿ.ಘಟಕದ ಅಧ್ಯಕ್ಷ ಗಾಳೆಪ್ಪ ಪೂಜಾರ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಡಾ.ಬಸವರಾಜ್ ಕ್ಯಾವಟರ್ ಅವರು ಕೋವಿಡ್ ಸಂದರ್ಭದಲ್ಲಿ ರೋಗಿಗಳಿಗೆ ಚಿತ್ರಹಿಂಸೆ ಕೊಟ್ಟು ಯದ್ವ ತದ್ವ ಬಿಲ್ಲು ಮಾಡಿ ಕೋಟಿಗಟ್ಟಲೆ ಅಕ್ರಮವಾಗಿ ಹಣ ಆಸ್ತಿ ಸಂಪಾದಿಸಿದ್ದಾರೆ.

ಇವರು ಮೊದಲು ತಮ್ಮ ಭ್ರಷ್ಟಾಚಾರದ ಕುರಿತು ಮಾತನಾಡಲಿ ನಮ್ಮ ಕಾಂಗ್ರೆಸ್ ಪಕ್ಷದ ಮೇಲೆ ಸುಳ್ಳು ಭ್ರಷ್ಟಾಚಾರದ ವಿಷಯವಾಗಿ ಮಾತನಾಡುವ ನೈತಿಕತೆ ಹಕ್ಕು ನಿಮಗಿಲ್ಲ ಇವರು ಅಕ್ರಮವಾಗಿ ಗಳಿಸಿದ ಆಸ್ತಿಯನ್ನು ತನಿಖೆಗೆ ಒಳಪಡಬೇಕು.

ಸಿ.ವಿ. ಚಂದ್ರಶೇಖರ್ ಅವರು ಹಿಂದೆ ಕೊಪ್ಪಳದ ನಿರ್ಮಿತಿ ಕೇಂದ್ರದ ಅಧಿಕಾರಿ ಆಗಿದ್ದ ಸಂದರ್ಭದಲ್ಲಿ ಸಾವಿರಾರು ಕೋಟಿ ಹಣ ಲೂಟಿ ಮಾಡಿ ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದಾರೆ ಸಿ.ಎ ಚಂದ್ರಶೇಖರ್ ಅವರು ಒಬ್ಬ ಸಾಮಾನ್ಯ ನಿರ್ಮಿತಿ ಕೇಂದ್ರದ ಅಧಿಕಾರಿಯಾಗಿದ್ದುಕೊಂಡು ಇಷ್ಟು ಆಸ್ತಿಯನ್ನು ಹೇಗೆ ಗಳಿಸಿದರು? ಅವರ ಆದಾಯ ಎಷ್ಟು ಅನ್ನೋದನ್ನು ತನಿಖೆ ಆಗಬೇಕು ಇವರ ಅಕ್ರಮವಾಗಿ ಗಳಿಸಿದ ಎಲ್ಲಾ ಆಸ್ತಿ ಅಂತಸ್ತನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಮೊದಲು ತಮ್ಮ ಭ್ರಷ್ಟಾಚಾರದ ಕುರಿತು ಸಾರ್ವಜನಿಕರಿಗೆ ಹೇಳಲಿ.

 ಕರ್ನಾಟಕ ಲೋಕಾಯುಕ್ತ ಸಂಸ್ಥೆ ಪ್ರಾಮಾಣಿಕ ವ್ಯವಸ್ಥೆಗೆ ಹೆಸರಾಗಿದೆ ಇದು ಯಾರ ಒತ್ತಡಕ್ಕೆ ಮಣಿದು ಲೋಕಾಯುಕ್ತ ಡಿವೈಎಸ್ಪಿ ವಸಂತ್ ಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದು ಅಲ್ಲ. ಇಂಥ ವರ್ಗಾವಣೆ ವಿಷಯವನ್ನು ಮುಖ್ಯಮಂತ್ರಿಗಳು ಒಪ್ಪಲಿಕೆ ಸಾಧ್ಯವಿಲ್ಲ. ಮೊದಲೇ ಇವರು ಇಬ್ಬರು ಮಹಾಭ್ರಷ್ಟರು ಇವರು ಇಬ್ಬರೂ ಕೋಟಿಗಟ್ಟಲೆ ಭ್ರಷ್ಟಾಚಾರ ಮಾಡಿದವರೇ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಆಯಿತು. ಇನ್ನು ಮುಂದಾದರೂ ಇಂತಹ ಸುಳ್ಳು ಹೇಳಿಕೆಯನ್ನು ಕೊಡುವುದನ್ನು ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ.