July 13, 2025

ಗಣಿಗಾರಿಕೆಯಿಂದ ವಿಷ ತ್ಯಾಜ್ಯ ನದಿಗೆ ಸೇರುತ್ತದೆ, ಮನುಷ್ಯ ಹಾಗೂ ಜಲಚರ ಜೀವಿಗಳಿಗೆ ಕುತ್ತು ಬಂದಿದೆ : ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು 

ಜೂಡಿ ನ್ಯೂಸ್:

ಮರಿಯಮ್ಮನಹಳ್ಳಿ:ಈಚಿಗೆ ನದಿ ಪಾತ್ರಗಳಲ್ಲಿ ಅವ್ಯಾಹತವಾಗಿ ಉದ್ಯಮಗಳು,ಗಣಿಗಾರಿಕೆಯಿಂದ ನದಿಗಳು ಶುದ್ದೀಕರಣವಾಗುತ್ತಿಲ್ಲ.ವಿಷ ತ್ಯಾಜ್ಯ ನದಿಗೆ ಸೇರುತ್ತಿದೆ. ಮನುಷ್ಯ ಹಾಗೂ ಜಲಚರಗಳ ಜೀವಕ್ಕೆ ಕುತ್ತು ಬಂದಿದೆ ಎಂದು‌ ಪಟ್ಟಣದ ಗುರುಪಾದೇವರ‌ಮಠದ ಮಲ್ಲಿಕಾರ್ಜುನಶಿವಾಚಾರ್ಯ ಮಹಾಸ್ವಾಮಿಗಳು ಆತಂಕವ್ಯಕ್ತಪಡಿಸಿದರು.

ಅವರು ಪಟ್ಟಣದ ನಗರೇಶ್ವರ ದೇವಸ್ಥಾನದಲ್ಲಿ,ನವದೇಹಲಿಯ ರಾಷ್ಟ್ರೀಯಸ್ವಾಭಿಮಾನ ಆಂದೋಲನ ಮತ್ತು ಪರ್ಯಾವರಣ ಟ್ರಸ್ಟ್ನಿರ್ಮಲ ತುಂಗಭದ್ರಾ ಅಭಿಮಾನದ ಪಾದಯಾತ್ರೆಯು ಗುರುವಾರ ಪಟ್ಟಣಕ್ಕೆ ಆಗಮಿಸಿದ ಹಿನ್ನೆಯಲ್ಲಿ ಹಮ್ಮಿಕೊಂಡ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು.

ಯುವ ಸಮುದಾಯ ಎಚ್ಚೆತ್ತುಕೊಂಡು ನದಿಯ ಪಾವಿತ್ರ್ಯ ಕಾಪಾಡುವ ಕೆಲಸಕ್ಕೆ ಕೈ ಜೋಡಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅಗತ್ಯವಿದೆ ಎಂದು ಕರೆನೀಡಿದರು.

ಮಾಜಿ ಶಾಸಕ ಮಹಿಮಾ ಜೆ.ಪಟೇಲ್ ಮಾತನಾಡಿ,ಅವೈಜ್ಞಾನಿಕ ಅತಿ ಹೆಚ್ಚು ರಸಗೊಬ್ಬರ ಕೀಟನಾಶಕಗಳ ಬಳಕೆಯ ನೀರು ನದಿಗೆ ಸೇರುತ್ತಿದೆ. ಜತೆಗೆ ಕೈಗಾರಿಕೆಯ ತ್ಯಾಜ್ಯ ಹಾಗೂ ಜನ ವಸತಿಯ ಕಲುಷಿತ ಚರಂಡಿ ನೀರು, ಪ್ಲಾಸ್ಟಿಕ್ ತ್ಯಾಜ್ಯ ನೇರವಾಗಿ ನದಿಗೆ ಹರಿಸುತ್ತಿರುವುದರಿಂದ ಜಲಮೂಲ ಕಲುಷಿತಗೊಳ್ಳುತ್ತಿದೆ. ಈ ನೀರು ಕುಡಿಯಲು ಯೋಗ್ಯವಲ್ಲದ ದುಸ್ಥಿತಿಗೆ ಬಂದಿದೆ. ಸಾರ್ವಜನಿಕರಿಗೆ ಜಲಜಾಗೃತಿ ಮೂಡಿಸಿ ತುಂಗಭದ್ರೆಯ ಪಾವಿತ್ರ್ಯತೆ ಕಾಪಾಡುವುದು ಪಾದಯಾತ್ರೆಯ ಮುಖ್ಯ ಉದ್ದೇಶ ಎಂದರು.

ಆಂದೋಲನದ ರಾಷ್ಟ್ರೀಯ ಸಂಚಾಲಕ ಬಸವರಾಜ ಪಾಟೀಲ್,ಸಂಚಾಲಕ ಮಾಧವನ್,ನಿವೃತ್ತ‌ ಮುಖ್ಯಶಿಕ್ಷಕ ಲೋಕೇಶಪ್ಪ,ಆಂದೋಲನದ ಪಟ್ಟಣದ ಪ್ರಭಾರಿ ಡಿ.ರಾಘವೇಂದ್ರಶೆಟ್ಟಿ,ವಾಸವಿಯುವಜನಸಂಘದ ಅಧ್ಯಕ್ಷಹರಿಪ್ರಸಾದ್,ವಿನೋದ್,ಅವಿನಾಶ್,ಸಂದೇಶ,ವಾಸವಿಮಹಿಳಾಸಮಾಜದ ಜಿ. ಜಯಲಕ್ಷ್ಮಿ,ರೈತಸಂಘದ ಕೆ.ಮನ್ಸೂರ್ ಸೇರಿದಂತೆ ಇತರರಿದ್ದರು.

 ವರದಿ : ಸುಬ್ಬಾ ರಾವ್ ಜಿವಿಎಸ್ ಮರಿಯಮ್ಮನಹಳ್ಳಿ